3ನೇ ಹಂತದ ಪ್ರಯೋಗದಲ್ಲಿ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಶೇ.77.8ರಷ್ಟು ಪರಿಣಾಮಕಾರಿ!

ಮೂರನೇ ಹಂತದ ಪ್ರಾಯೋಗಿಕ ಪ್ರಯೋಗದಲ್ಲಿ ಭಾರತ್ ಬಯೋಟೆಕ್ ನ ಕೋವಾಕ್ಸಿನ್ ಶೇಕಡಾ 77.8 ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿದೆ.
ಕೋವ್ಯಾಕ್ಸಿನ್ ಲಸಿಕೆ
ಕೋವ್ಯಾಕ್ಸಿನ್ ಲಸಿಕೆ

ನವದೆಹಲಿ: ಮೂರನೇ ಹಂತದ ಪ್ರಾಯೋಗಿಕ ಪ್ರಯೋಗದಲ್ಲಿ ಭಾರತ್ ಬಯೋಟೆಕ್ ನ ಕೋವಾಕ್ಸಿನ್ ಶೇಕಡಾ 77.8 ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿದೆ.

ದೇಶೀಯ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆಯನ್ನು ಕೊರೋನಾ ವಿರುದ್ಧದ ಹೋರಾಟದ ಉದ್ದೇಶವಾಗಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಅನುಮೋದನೆ ನೀಡಿತ್ತು. ಲಸಿಕೆಯ ಮೂರನೇ ಹಂತದ ಡೇಟಾವನ್ನು ಸಲ್ಲಿಸುವಲ್ಲಿ ವಿಳಂಬವಾಗಿದ್ದರಿಂದ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿತ್ತು. 

ಈ ಹಿಂದಿನ ಎರಡು ಅಧ್ಯಯನಗಳು ಕೋವಾಕ್ಸಿನ್ ಕೋವಿಶೀಲ್ಡ್ ಗಿಂತ ಕಡಿಮೆ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ಎರಡು ಅಧ್ಯಯನಗಳು ಬಹಿರಂಗಗೊಂಡ ಕೆಲ ದಿನಗಳ ನಂತರ ಕೋವ್ಯಾಕ್ಸಿನ್ ದತ್ತಾಂಶ ಬಿಡುಗಡೆಯಾಗುತ್ತಿದೆ. ಇನ್ನು ಅನೇಕ ತಜ್ಞರು ಮೂರನೇ ಹಂತದ ಪ್ರಯೋಗ ನಡೆಯುವವರೆಗೂ ಎಚ್ಚರಿಕೆಯಿಂದಿರುವಂತೆ ಜನತೆಯನ್ನು ಎಚ್ಚರಿಸಿದ್ದರು. 

ಪ್ರಸ್ತುತ ಭಾರತದಲ್ಲಿ ಬಳಸುತ್ತಿರುವ ಮೂರು ಲಸಿಕೆಗಳಲ್ಲಿ ಕೋವಾಕ್ಸಿನ್ ಕೂಡ ಒಂದು. ಇತರ ಎರಡು ಲಸಿಕೆಗಳು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿರುವ ಕೋವಿಶೀಲ್ಡ್ ಮತ್ತು ಡಾ. ರೆಡ್ಡೀಸ್ ತಯಾರಿಸುತ್ತಿರುವ ಸ್ಪುಟ್ನಿಕ್ ವಿ ಲಸಿಕೆ.

ಭಾರತವು ಇಲ್ಲಿಯವರೆಗೆ 28 ​​ಕೋಟಿ ಕೋವಿಡ್ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಭಾರತ್ ಬಯೋಟೆಕ್ ಜೂನ್‌ನಲ್ಲಿ 2.6 ಕೋಟಿ ಡೋಸ್ ಲಸಿಕೆ ಉತ್ಪಾದಿಸುವ ನಿರೀಕ್ಷೆಯಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com