ಕೋವ್ಯಾಕ್ಸಿನ್ ಲಸಿಕೆ
ಕೋವ್ಯಾಕ್ಸಿನ್ ಲಸಿಕೆ

ಕೋವ್ಯಾಕ್ಸಿನ್ ನ ಮೂರನೇ ಹಂತದ ಡಾಟಾ ಪರಾಮರ್ಶಿಸಲಿರುವ ಡಿಸಿಜಿಐ ತಜ್ಞರ ಸಮಿತಿ

ಔಷಧ ನಿಯಂತ್ರಕದ ಅಡಿಯಲ್ಲಿ ಬರುವ ವಿಷಯ ತಜ್ಞರ ಸಮಿತಿ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ನ ಮೂರನೇ ಹಂತದ ಡಾಟಾ ಪರಾಮರ್ಶಿಸಲಿದೆ.

ನವದೆಹಲಿ: ಔಷಧ ನಿಯಂತ್ರಕದ ಅಡಿಯಲ್ಲಿ ಬರುವ ವಿಷಯ ತಜ್ಞರ ಸಮಿತಿ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ನ ಮೂರನೇ ಹಂತದ ಡಾಟಾ ಪರಾಮರ್ಶಿಸಲಿದೆ. ಭಾರತ್ ಬಯೋಟೆಕ್ ನ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್ಒ)ಯೊಂದಿಗಿನ ಪ್ರೀ-ಸಬ್ಮಿಷನ್ ಸಭೆಗೂ ಮುನ್ನ ಜೂ.22 ರಂದು ಪರಾಮರ್ಶೆ ಸಭೆ ನಡೆಯುತ್ತಿದೆ.

ಹೈದರಾಬಾದ್ ಮೂಲದ ಕೋವಿಡ್-19 ಲಸಿಕೆ ಉತ್ಪಾದನಾ ಸಂಸ್ಥೆ ಭಾರತ್ ಬಯೋಟೆಕ್ ಈಗಾಗಲೇ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನ ಡಾಟಾವನ್ನು ಡಿಸಿಜಿಐ ಗೆ ಸಲ್ಲಿಸಿದ್ದು, ಸರ್ಕಾರಿ ಅಧಿಕಾರಿಗಳೂ ಇದನ್ನು ಖಚಿತಪಡಿಸಿದ್ದಾರೆ.

ಜನವರಿಯಲ್ಲಿ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಗೆ ಭಾರತ ಸರ್ಕಾರ ಅನುಮತಿ ನೀಡಿತ್ತು. ಅನುಮೋದನೆ ನೀಡಿದ್ದ ಬೆನ್ನಲ್ಲೇ ಸಂಸ್ಥೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಸ್ ನ ಬಗ್ಗೆ ಪ್ರಶ್ನೆಗಳು ಮೂಡಿದ್ದವು. ಭಾರತ್ ಬಯೋಟೆಕ್ ಸಂಸ್ಥೆ ಐಸಿಎಂಆರ್ ಸಹಯೋಗದಲ್ಲಿ ಕೋವ್ಯಾಕ್ಸಿನ್ ನ್ನು ಅಭಿವೃದ್ಧಿಪಡಿಸಿದೆ.

ಮೇ ತಿಂಗಳಲ್ಲಿ ಡಬ್ಲ್ಯುಹೆಚ್ಒ ಗೆ ತುರ್ತು ಬಳಕೆ ಲಿಸ್ಟಿಂಗ್ (ಇಯುಎಲ್) ಅರ್ಜಿಯನ್ನು ಸಲ್ಲಿಸಿರುವುದಾಗಿ ಹೇಳಿದ್ದ ಭಾರತ್ ಬಯೋಟೆಕ್ ಜುಲೈ ಅಥವಾ ಸೆಪ್ಟೆಂಬರ್ ನಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದು ಹೇಳಿತ್ತು.

Related Stories

No stories found.

Advertisement

X
Kannada Prabha
www.kannadaprabha.com