ಕೋವಿಡ್-19 ಲಸಿಕೆ ಪೂರೈಕೆ ನೆಪದಲ್ಲಿ ಚಿತ್ರ ನಿರ್ಮಾಪಕ ಸುರೇಶ್ ಬಾಬುಗೆ 1 ಲಕ್ಷ ರೂ. ವಂಚನೆ

ಕೋವಿಡ್-19 ಲಸಿಕೆ ಪೂರೈಸುವ ನೆಪದಲ್ಲಿ ತೆಲುಗು ಚಿತ್ರ ನಿರ್ಮಾಪಕ ಸುರೇಶ್ ಅವರಿಗೆ ವಂಚಕನೊಬ್ಬ 1 ಲಕ್ಷ ರೂ. ಮೋಸ ಮಾಡಿದ್ದಾರೆ. ನಿರ್ಮಾಪಕರಿಂದ ಹಣ ಪಡೆದ ನಂತರ ಶಂಕಿತ ನಾಗಾರ್ಜುನ ರೆಡ್ಡಿ ಇದೀಗ ಪರಾರಿಯಾಗಿದ್ದಾನೆ. ಐಪಿಸಿ ಸೆಕ್ಷನ್ 406 ಮತ್ತು 420ರ ಅಡಿಯಲ್ಲಿ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಲುಗು ಚಿತ್ರ ನಿರ್ಮಾಪಕ ಸುರೇಶ್ ಬಾಬು
ತೆಲುಗು ಚಿತ್ರ ನಿರ್ಮಾಪಕ ಸುರೇಶ್ ಬಾಬು

ಹೈದರಾಬಾದ್:  ಕೋವಿಡ್-19 ಲಸಿಕೆ ಪೂರೈಸುವ ನೆಪದಲ್ಲಿ ತೆಲುಗು ಚಿತ್ರ ನಿರ್ಮಾಪಕ ಸುರೇಶ್ ಅವರಿಗೆ ವಂಚಕನೊಬ್ಬ 1 ಲಕ್ಷ ರೂ. ಮೋಸ ಮಾಡಿದ್ದಾರೆ. ನಿರ್ಮಾಪಕರಿಂದ ಹಣ ಪಡೆದ ನಂತರ ಶಂಕಿತ ನಾಗಾರ್ಜುನ ರೆಡ್ಡಿ ಇದೀಗ ಪರಾರಿಯಾಗಿದ್ದಾನೆ. ಐಪಿಸಿ ಸೆಕ್ಷನ್ 406 ಮತ್ತು 420ರ ಅಡಿಯಲ್ಲಿ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 31 ರಂದು ಸುರೇಶ್ ಬಾಬುಗೆ ಫೋನ್ ಮಾಡಿರುವ ನಾಗಾರ್ಜುನ ರೆಡ್ಡಿ, 500 ಜನರಿಗೆ ಕೋವಿಡ್ ಲಸಿಕೆ ಪೂರೈಸಲಿದ್ದು, ಅದಕ್ಕಾಗಿ 1 ಲಕ್ಷ ವೆಚ್ಚವಾಗಲಿದೆ ಎಂದು ಹೇಳಿದ್ದಾನೆ. ಇದಕ್ಕೆ ಒಪ್ಪಿದ ಸುರೇಶ್ ಬಾಬು,  ನಾಗಾರ್ಜುನ ರೆಡ್ಡಿ ಪತ್ನಿ ಟಿ ಲಕ್ಷ್ಮಿ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿದ್ದಾರೆ.

ಹಣ ವರ್ಗಾವಣೆ ನಂತರ ಸುರೇಶ್ ಬಾಬು ಅವರೊಂದಿಗೆ ಪ್ರತಿಕ್ರಿಯಿಸದ ನಾಗಾರ್ಜುನ ರೆಡ್ಡಿ, ಲಸಿಕೆ ಕೂಡಾ ಪೂರೈಸಿಲ್ಲ. ತದನಂತರ ಆತ ಹಣವನ್ನು ವಿತ್ ಡ್ರಾ ಮಾಡಿರುವುದು ತಿಳಿದುಬಂದಿದೆ.  ಖಾತೆಗೆ ಹಣ ವರ್ಗಾವಣೆ ನಂತರ ನಾಗಾರ್ಜುನ ರೆಡ್ಡಿ ಮೊಬೈಲ್ ನಂಬರ್ ಸ್ವಿಚ್ಡ್ ಆಫ್ ಆಗಿದೆ.

ಮೋಸ ಹೋಗಿರುವುದಾಗಿ ಅರಿತ ಸುರೇಶ್ ಬಾಬು ಸೋಮವಾರ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪರಾರಿಯಾಗಿರುವ ನಾಗಾರ್ಜುನ ರೆಡ್ಡಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ರೀತಿಯಲ್ಲಿ ನಾಗಾರ್ಜುನ ರೆಡ್ಡಿ ಅನೇಕ ಜನರಿಗೆ ವಂಚಿಸಿರುವ ಸಾಧ್ಯತೆಯಿದ್ದು, ಈ ಬಗ್ಗೆಯೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com