ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: 'ಪೀಟರ್ ಪ್ಯಾನ್ ಸಿಂಡ್ರೋಮ್' ನಿಂದ ಬಳಲುತ್ತಿದ್ದ ಮುಂಬೈ ವ್ಯಕ್ತಿಗೆ ಜಾಮೀನು!

14 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಟರ್ ಪ್ಯಾನ್ ಸಿಂಡ್ರೋಮ್ ನಿಂದ ಬಳಲುತ್ತಿದ್ದ ವ್ಯಕ್ತಿಗೆ ಮುಂಬಯಿ ಕೋರ್ಟ್ ಜಾಮೀನು ನೀಡಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬಯಿ: 14 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಟರ್ ಪ್ಯಾನ್ ಸಿಂಡ್ರೋಮ್ ನಿಂದ ಬಳಲುತ್ತಿದ್ದ ವ್ಯಕ್ತಿಗೆ ಮುಂಬಯಿ ಕೋರ್ಟ್ ಜಾಮೀನು ನೀಡಿದೆ.

ಮುಂಬಯಿ ನ್ಯಾಯಾಲಯದ ವಿಶೇಷ ಜಡ್ಜ್ ಎಸ್ ಸಿ ಜಾಧವ್ ಸೋಮವಾರ 23 ವರ್ಷದ ಆರೋಪಿಗೆ 25 ಸಾವಿರ ರು ದಂಡದೊಂದಿಗೆ ಷರತ್ತು ಬದ್ಧ ಜಾಮೀನು ನೀಡಿದ್ದಾರೆ.

ಆರೋಪಿ ಪರವಾಗಿ ಹಾಜರಾದ ವಕೀಲ ಸುನಿಲ್ ಪಾಂಡೆ, ತನ್ನ ಕ್ಲೈಂಟ್ 'ಪೀಟರ್ ಪ್ಯಾನ್ ಸಿಂಡ್ರೋಮ್'ನಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದಾರೆ, ಇದು ಸಾಮಾಜಿಕವಾಗಿ ಅಪಕ್ವವಾದ ವಯಸ್ಕ ಗಂಡು ಅಥವಾ ಹೆಣ್ಣನ್ನು ವಿವರಿಸಲು ಈ ಪದವನ್ನು ಬಳಸಲಾಗುತ್ತದೆ.

ಸಂತ್ರಸ್ತೆ ಕುಟುಂಬಕ್ಕೆ ಅವರ ಸಂಬಂಧದ ಬಗ್ಗೆ ತಿಳಿದಿತ್ತು. ಆದರೆ, ಹುಡುಗನ ಅನಾರೋಗ್ಯ ಮತ್ತು ಸರಿಯಾದ ಕೌಟುಂಬಿಕ  ಹಿನ್ನೆಲೆ ಇರದ ಕಾರಣ ಅವರ ಕುಟುಂಬವು ಅವರ ಸಂಬಂಧವನ್ನು ಇಷ್ಟಪಡಲಿಲ್ಲ . ಹೀಗಾಗಿ ಆತನ ಕುಟುಂಬ ಸದಸ್ಯರ ವಿರುದ್ಧ ದ್ವೇಷವನ್ನು ಹೊಂದಿದ್ದರು ಎಂದು ಪಾಂಡೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸಂತ್ರಸ್ತೆಗೆ ತಾನು ಏನು ಮಾಡುತ್ತಿದ್ದೆ ಎಂಬ ಬಗ್ಗೆ ತಿಳಿದಿತ್ತು, ಹೀಗಾಗಿ ಸ್ವಯಂ ಪ್ರೇರಣೆಯಿಂದಾಗಿ ಆಕೆ ಸಂಬಂಧ ಹೊಂದಿದ್ದಳು ಎಂದು ವಾದಿಸಿದ್ದರು.

ಆದರೆ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೀಣಾ ಶೆಲಾರ್ ಈ ಮನವಿಯನ್ನು ವಿರೋಧಿಸಿದರು ಮತ್ತು ಅರ್ಜಿದಾರರು ಮಾಡಿದ ಎಲ್ಲಾ ಆರೋಪಗಳನ್ನು ನಿರಾಕರಿಸಿದರು. ಆರೋಪಿ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದ್ದಾರೆ.

ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ, ಅವರು ಪ್ರಕರಣದ ಸಾಕ್ಷ್ಯವನ್ನು ಹಾಳುಮಾಡಬಹುದು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದರು.

ಆದರೆ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದರೂ, ಅವಳಿಗೆ ತಾನು ಏನು ಮಾಡುತ್ತಿದ್ದೇನೆ ಎಂಬ ಬಗ್ಗೆ ಜ್ಞಾನ ಹೊಂದಿದ್ದಳು. ಹಾಗಾಗಿ ಆಕೆಯೆ ಸ್ವಯಂ ಪ್ರೇರಣೆಯಿಂದಾಗಿ ಆಕೆ ಸಂಬಂಧ ಹೊಂದಿದ್ದಳು ಎಂಬದನ್ನು ಕೋರ್ಟ್ ಗಮನಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com