ಭರ್ಜರಿ ಕಾರ್ಯಾಚರಣೆ: 15 ಕೋಟಿ ರೂ. ಮೌಲ್ಯದ 2 ಸಾವಿರ ಕೆಜಿ ಗಾಂಜಾ ಜಪ್ತಿ, ದಾಖಲೆ ಎಂದ ಎನ್ ಸಿಬಿ

ಮಾದಕ ವಸ್ತು ನಿಯಂತ್ರಕ ಸಂಸ್ಥೆ ಎನ್ ಸಿಬಿ (Narcotics Control Bureau) ಭರ್ಜರಿ ಕಾರ್ಯಾಚರಣೆ ನಡೆಸಿದ್ದ ಸುಮಾರು 15 ಕೋಟಿ ರೂ ಮೌಲ್ಯದ 2 ಸಾವಿರ ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದೆ. ಇದು ಎನ್ ಸಿಬಿಯ ಈ ವರೆಗಿನ ಗರಿಷ್ಠ  ದಾಖಲೆಯಾಗಿದೆ.
ಬಂಧಿತ ಕಳ್ಳ ಸಾಗಣೆದಾರರು
ಬಂಧಿತ ಕಳ್ಳ ಸಾಗಣೆದಾರರು

ಬೆಂಗಳೂರು: ಮಾದಕ ವಸ್ತು ನಿಯಂತ್ರಕ ಸಂಸ್ಥೆ ಎನ್ ಸಿಬಿ (Narcotics Control Bureau) ಭರ್ಜರಿ ಕಾರ್ಯಾಚರಣೆ ನಡೆಸಿದ್ದ ಸುಮಾರು 15 ಕೋಟಿ ರೂ ಮೌಲ್ಯದ 2 ಸಾವಿರ ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದೆ. ಇದು ಎನ್ ಸಿಬಿಯ ಈ ವರೆಗಿನ ಗರಿಷ್ಠ  ದಾಖಲೆಯಾಗಿದೆ.

ಹೌದು..  ಸುಮಾರು ಹದಿನೈದು ಕೋಟಿ ಮೌಲ್ಯದ ಎರಡು ಸಾವಿರ ಕೆ.ಜಿ. ಗಾಂಜಾ ಸಾಗಣೆ ಮಾಡುತ್ತಿದ್ದ ಅತಿ ದೊಡ್ಡ ಜಾಲವನ್ನು ಬೆಂಗಳೂರು ಘಟಕದ ಎನ್‌ ಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದು, ಮಹಾರಾಷ್ಟ್ರ ಮೂಲದ ನಾಲ್ವರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಬೆಂಗಳೂರಿನ ಎನ್ ಸಿಬಿ ಅಧಿಕಾರಿಗಳು ಹೈದರಾಬಾದ್ ನ ಪೆದ್ದ ಅಮೀರ್ ಪೇಟ್ ಟೋಲ್ ಪ್ಲಾಜಾ ಬಳಿ ಕಾರ್ಯಾಚರಣೆ ನಡೆಸಿ, ಗಾಂಜಾ ಸಾಗಿಸುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಒಡಿಶಾ ಗಡಿ ಭಾಗದಿಂದ ಪೂನಾಗೆ ಲಾರಿಯಲ್ಲಿ ಗಾಂಜಾ ಸಾಗಣೆ  ಮಾಡಲಾಗುತ್ತಿತ್ತು. ತಲಾ ಎರಡು ಕೆಜಿ ತೂಕದ ಸುಮಾರು 1080 ಪಾಕೆಟ್ ಗಾಂಜಾ ಪ್ಯಾಕೆಟ್ ಗಳನ್ನು ಗೂಡ್ಸ್ ಲಾರಿಯಲ್ಲಿ ಸಾಗಣೆ ಮಾಡಲಾಗುತ್ತಿತ್ತು.

ಈ ಕುರಿತು ಖಚಿತ ಮಾಹಿತಿ ಆಧರಿಸಿ ಪೆದ್ದ ಅಮೀರ್ ಪೇಟ್ ಟೋಲ್ ಬಳಿ ಎನ್ ಸಿಬಿ ಅಧಿಕಾರಿಗಳು ಗಾಂಜಾ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಗಾಂಜಾ ಸಾಗಣೆ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಕೆ. ಕಾಳೆ, ಎಸ್. ಕಾಳೆ ಸಿ. ಕಾಳೆ ಹಾಗೂ ಬಿ. ಧೋರಲ್ಕರ್  ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಹದಿನೈದು ಕೋಟಿ ಮೌಲ್ಯದ ಎರಡು ಸಾವಿರ ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು ಎನ್‌ಸಿಬಿ ಬೆಂಗಳೂರು ಘಟಕದ ವಲಯ ನಿರ್ದೇಶಕ ಅಮಿತ್ ಗವಾಟೆ ವಹಿಸಿದ್ದರು. 

ಇದು ದೇಶದಲ್ಲಿಯೇ ಅತಿದೊಡ್ಡ ಗಾಂಜಾ ಪತ್ತೆ ಪ್ರಕರಣವಾಗಿದೆ ಎಂದು ಎನ್ ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ನಕ್ಸಲ್ ಸಮಸ್ಯೆ ಬಾಧಿತ ಆಂಧ್ರ ಪ್ರದೇಶ ಹಾಗೂ ಒಡಿಶಾ ಗಡಿ ಭಾಗದಲ್ಲಿ ಅತಿ ಹೆಚ್ಚು ಗಾಂಜಾ ಅಕ್ರಮವಾಗಿ ಬೆಳೆಯಲಾಗುತ್ತದೆ.

ಈ ಬಗ್ಗೆ ಮಾಹಿತಿ ನೀಡಿರುವ  ಅಮಿತ್ ಗವಾಟೆ ಅವರು, ಗಾಂಜಾ ಕಳ್ಳಸಾಗಣೆದಾರರು ದೆಹಲಿ, ಮುಂಬೈ, ರಾಜಸ್ಥಾನ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮಾರ್ಗವಾಗಿ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದಾರೆ. ಕಠಿಣ ಭೂಪ್ರದೇಶ ಮತ್ತು ಪೊಲೀಸ್ ವಾಹನಗಳು ಪ್ರವೇಶಿಸಲಾಗದ  ಕಾರಣ ಅಕ್ರಮವಾಗಿ ಬೆಳೆದ ಗಾಂಜಾವನ್ನು ಈ ಮಾರ್ಗದಲ್ಲಿ ಕಳ್ಳ ಸಾಗಣೆ ಮಾಡುತ್ತಾರೆ. ಈ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಈಶಾನ್ಯ ರಾಜ್ಯಗಳಲ್ಲಿಯೂ ಅಕ್ರಮವಾಗಿ ಬೆಳೆಸಲಾಗುತ್ತದೆ ಎಂದು ಅವರು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com