ಕೋವಿಡ್-19 ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ಪ್ರತ್ಯೇಕಿಸಿ: ಮೂರು ರಾಜ್ಯಗಳಿಗೆ ಕೇಂದ್ರ ಸೂಚನೆ

ಕೋವಿಡ್ ವೈರಸ್‌ನ ಡೆಲ್ಟಾ ಪ್ಲಸ್ ರೂಪಾಂತರ ಪತ್ತೆಯಾದ ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶದ ಮೂರು ರಾಜ್ಯಗಳಿಗೆ ಕೇಂದ್ರವು ಮಂಗಳವಾರ ಈ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ಪ್ರತ್ಯೇಕಿಸಲು ಮತ್ತು ಪ್ರಕರಣಗಳು ಸಮೂಹದಲ್ಲಿ ಕಂಡುಬಂದರೆ ಆ ಕುರಿತು  ನಿಗಾ ವಹಿಸುವಂತೆ ಕೇಳಿದೆ.

Published: 22nd June 2021 09:16 PM  |   Last Updated: 22nd June 2021 09:28 PM   |  A+A-


Posted By : Raghavendra Adiga
Source : The New Indian Express

ನವದೆಹಲಿ: ಕೋವಿಡ್ ವೈರಸ್‌ನ ಡೆಲ್ಟಾ ಪ್ಲಸ್ ರೂಪಾಂತರ ಪತ್ತೆಯಾದ ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶದ ಮೂರು ರಾಜ್ಯಗಳಿಗೆ ಕೇಂದ್ರವು ಮಂಗಳವಾರ ಈ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ಪ್ರತ್ಯೇಕಿಸಲು ಮತ್ತು ಪ್ರಕರಣಗಳು ಸಮೂಹದಲ್ಲಿ ಕಂಡುಬಂದರೆ ಆ ಕುರಿತು ನಿಗಾ ವಹಿಸುವಂತೆ ಕೇಳಿದೆ.

ಇಲ್ಲಿಯವರೆಗೆ ಒಂಬತ್ತು ದೇಶಗಳಲ್ಲಿ ಗುರುತಿಸಲಾಗಿರುವ ಈ ರೂಪಾಂತರವನ್ನು ಮಹತ್ವದ ಕಾಳಜಿ ವಹಿಸಬೇಕಾದ ಸಾಂಕ್ರಾಮಿಕ ಎಂದು ವರ್ಗೀಕರಿಸಲಾಗಿಲ್ಲ ಆದರೆ ಇದು ಮೊನೊಕ್ಲೋನಲ್ ಪ್ರತಿಕಾಯಗಳಿಗೆ ವಿರುದ್ಧವಾಗಿದೆ ಇದಿನ್ನೂ ಸ್ಥಾಪಿತವಾಗಿಲ್ಲ ಆದರೂ ಅಸ್ತಿತ್ವದಲ್ಲಿರುವ ಕೋವಿಡ್ ಲಸಿಕೆಗಳು ಇದಕ್ಕೆ ಎಷ್ಟು ಪ್ರತಿರೋಧಿಕವಾಗಿದೆ ಎಂದು ಶಂಕಿಸಲಾಗಿದೆ

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಜೀನೋಮ್ ಅನುಕ್ರಮದ ನಂತರ ಭಾರತದಲ್ಲಿ ಈವರೆಗೆ 22 ಪ್ರಕರಣಗಳನ್ನು ಗುರುತಿಸಲಾಗಿದೆ, ಅವುಗಳಲ್ಲಿ 16 ಪ್ರಕರಣಗಳು ಮಹಾರಾಷ್ಟ್ರದ ಎರಡು ಜಿಲ್ಲೆಗಳಲ್ಲಿವೆ ಮತ್ತು ಕೆಲವು ಪ್ರತ್ಯೇಕ ಪ್ರಕರಣಗಳು ಕೇರಳದಲ್ಲಿ ಹಾಗೂ ಮಧ್ಯಪ್ರದೇಶದಲ್ಲಿದೆ.

ಡೆಲ್ಟಾ ಪ್ಲಸ್ ರೂಪಾಂತರವು ಭಾರತವನ್ನು ಹೊರತುಪಡಿಸಿ ಯುಎಸ್, ಯುಕೆ, ಪೋರ್ಚುಗಲ್, ಸ್ವಿಜರ್ಲ್ಯಾಂಡ್, ಜಪಾನ್, ಪೋಲೆಂಡ್, ಚೀನಾ ಮತ್ತು ರಷ್ಯಾಗಳಲ್ಲಿಯೂ ಕಂಡುಬಂದಿದೆ.

ಆದಾಗ್ಯೂ, ಭಾರತದ ಎರಡನೇ ಕೊರೋನಾ ಅಲೆಗೆ ಹೆಚ್ಚಾಗಿ ಕಾರಣವಾದ ಡೆಲ್ಟಾ ರೂಪಾಂತರವು 80 ದೇಶಗಳಲ್ಲಿ ಪತ್ತೆಯಾಗಿದೆ ಎಂದು ಭೂಷಣ್ ಹೇಳಿದರು, ಕೋವಿಶೀಲ್ಡ್ ಮತ್ತು ಕೊವ್ಯಾಕ್ಸೀನ್ ಎರಡೂ ಭಾರತೀಯ ಲಸಿಕೆಗಳು ಇದರ ವಿರುದ್ಧ ಪರಿಣಾಮಕಾರಿ ಎಂದು ಹೇಳಿದರು.

"ಆದರೆ ಅವರು ಉತ್ಪಾದಿಸುವ ಪ್ರತಿಕಾಯ ಪ್ರಮಾಣ ಎಷ್ಟು ಎಂದು  ನಾವು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ" ಎಂದು ಅವರು ಹೇಳಿದರು.

ಮತ್ತೊಂದೆಡೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಸೋಮವಾರ ರತ್ನಗಿರಿನಲ್ಲಿ ಡೆಲ್ಟಾ ಪ್ಲಸ್ ರೂಪಾಂತರದ ಒಂಬತ್ತು ಪ್ರಕರಣಗಳು ವರದಿಯಾಗಿವೆ, ನಂತರ ಜಲ್ಗಾಂವ್ಲ್ಲಿ ಏಳು, ಮುಂಬೈನಲ್ಲಿ ಎರಡು ಮತ್ತು ಪಾಲ್ಘರ್, ಥಾಣೆ ಮತ್ತು ಸಿಂಧುದುರ್ಗದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ ಎಂದರು. ಕೋವಿಡ್  -19 ಗಾಗಿ ಸರ್ಕಾರದ ಜೀನೋಮಿಕ್ ಕಣ್ಗಾವಲು ಯೋಜನೆಯಾದ INSACOG ಗೆ ಸಂಬಂಧಿಸಿದ ವಿಜ್ಞಾನಿಗಳು ಡೆಲ್ಟಾ ಅಥವಾ B.1.617.2 ರೂಪಾಂತರದಲ್ಲಿನ ರೂಪಾಂತರದಿಂದಾಗಿ ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಕಾರಣ ಹೊಸ ಡೆಲ್ಟಾ ಪ್ಲಸ್ ರೂಪಾಂತರ ರಚನೆಯಾಗಿದೆ ಎಂದು ವಿವರಿಸಿದರು.

"ಹೊಸ ರೂಪಾಂತರದಿಂದಾಗಿ ರೋಗದ ತೀವ್ರತೆಯ ಬಗ್ಗೆ ಇನ್ನೂ ಯಾವುದೇ ಸೂಚನೆ ಇಲ್ಲವಾದರೂ, ಭಾರತದಲ್ಲಿ ಇತ್ತೀಚೆಗೆ ಶಕ್ತಿಶಾಲಿಯಾದ ಕೋವಿಡ್ ಮೊನೊಕ್ಲೋನಲ್ ಆಂಟಿಬಾಡಿ ಕಾಕ್ಟೈಲ್ ಚಿಕಿತ್ಸೆಗೆ ಡೆಲ್ಟಾ ಪ್ಲಸ್ ನಿರೋಧಕವಾಗಿದೆ ಎಂದು ತೋರುತ್ತದೆ ಮತ್ತು ಇದು ಸಾಕಷ್ಟು ಆತಂಕವನ್ನು ಉಂಟುಮಾಡುತ್ತಿದೆ" ಎಂದು ತಜ್ಞರೊಬ್ಬರು ಹೇಳಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp