ಗಲ್ವಾನ್ ಸಂಘರ್ಷದ ನಂತರ ತನ್ನ ಸೇನೆಗೆ ಉನ್ನತ ತರಬೇತಿ ಅಗತ್ಯವಿದೆ ಎಂದು ಚೀನಾಗೆ ಅರ್ಥವಾಗಿದೆ: ಸಿಡಿಎಸ್ ರಾವತ್

ಚೀನಾದ ಯೋಧರು ಅಲ್ಪಾವಧಿಗೆ ಮಾತ್ರ ತರಬೇತಿ ಪಡೆದಿದ್ದಾರೆ. ಆದರೆ ಹಿಮಾಲಯ ಪರ್ವತಗಳ ಭೂಪ್ರದೇಶದಲ್ಲಿ ಯುದ್ಧ ಮಾಡುವಷ್ಟು ಅನುಭವ ಹೊಂದಿಲ್ಲ ಎಂದು ಸಿಡಿಎಸ್ ರಾವತ್ ಹೇಳಿದ್ದಾರೆ. 
ಜ.ಬಿಪಿನ್ ರಾವತ್
ಜ.ಬಿಪಿನ್ ರಾವತ್

ನವದೆಹಲಿ: ತನ್ನ ಸೇನೆಗೆ ಉನ್ನತ ತರಬೇತಿ ಅಗತ್ಯವಿದೆ ಎಂದು ಚೀನಾಗೆ ಅರ್ಥವಾಗಿದೆ ಎಂದು ಸಿಡಿಎಸ್ ಬಿಪಿನ್ ರಾವತ್ ಹೇಳಿದ್ದಾರೆ.

ಎಎನ್ಐ ಜೊತೆ ಮಾತನಾಡಿರುವ ಸಿಡಿಎಸ್ ರಾವತ್ ಚೀನಾದ ಯೋಧರು ಅಲ್ಪಾವಧಿಗೆ ಮಾತ್ರ ತರಬೇತಿ ಪಡೆದಿದ್ದಾರೆ. ಆದರೆ ಹಿಮಾಲಯ ಪರ್ವತಗಳ ಭೂಪ್ರದೇಶದಲ್ಲಿ ಯುದ್ಧ ಮಾಡುವಷ್ಟು ಅನುಭವ ಹೊಂದಿಲ್ಲ ಎಂದು ಸಿಡಿಎಸ್ ರಾವತ್ ಹೇಳಿದ್ದಾರೆ. 

"ಗಲ್ವಾನ್ ಘರ್ಷಣೆಯ ನಂತರ 2020 ರ ಮೇ-ಜೂನ್ ಭಾರತದ ಗಡಿ ಪ್ರದೇಶದಲ್ಲಿ ಸೇನಾ ನಿಯೋಜನೆಯಲ್ಲಿ ಚೀನಾ ಬದಲಾವಣೆ ಮಾಡಿಕೊಂಡಿದೆ. ಗಲ್ವಾನ್ ಘರ್ಷಣೆಯ ನಂತರ ಚೀನಾಗೆ ತನ್ನ ಸೇನೆಗೆ ಉನ್ನತ ಮಟ್ಟದ ತರಬೇತಿ ಅಗತ್ಯವಿದೆ ಎಂಬುದು ಅರ್ಥವಾಗಿದೆ ಎಂದು ಬಿಪಿನ್ ರಾವತ್ ಹೇಳಿದ್ದಾರೆ.

ಚೀನಾದ ಯೋಧರು ಹೆಚ್ಚಿನ ನಾಗರಿಕರಿರುವ ಪ್ರದೇಶದಿಂದ ಬಂದಿದ್ದಾರೆ. ಕಡಿಮೆ ಅವಧಿಗೆ ಮಾತ್ರ ಸೇರಿರುತ್ತಾರೆ. ಹಿಮಾಲಯದಂತಹ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಅವರಿಗೆ ಅನುಭವವಿರುವುದಿಲ್ಲ, ಆದರೆ ಪ್ರಾದೇಶಿಕವಾಗಿ ಭಾರತ ಚೀನಾದ ಎಲ್ಲಾ ಚಟುವಟಿಕೆಗಳ ಮೇಲೆಯೂ ನಿಗಾ ಇಡಬೇಕಿದೆ, ಈ ಪ್ರದೇಶಗಳಲ್ಲಿ ನಮ್ಮ ಯೋಧರಿಗೆ ಕಾರ್ಯಾಚರಣೆ ನಡೆಸಿ ಅನುಭವವಿದೆ ಎಂದು ಬಿಪಿನ್ ರಾವತ್ ತಿಳಿಸಿದ್ದಾರೆ. 

ಟಿಬೆಟ್ ಅಟಾನಮಸ್ ಪ್ರದೇಶ ಅತ್ಯಂತ ದುರ್ಗಮವಾದುದ್ದಾಗಿದೆ. ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವುದಕ್ಕೆ ಯೋಧರಿಗೆ ಹೆಚ್ಚು ವಿಶೇಷವಾದ ತರಬೇತಿಯ ಅಗತ್ಯವಿದೆ ಈ ವಿಷಯದಲ್ಲಿ ನಮ್ಮ ಯೋಧರಿಗೆ ಹೆಚ್ಚಿನ ತರಬೇತಿ, ಅನುಭವವಿದೆ. ನಾವು ಪರ್ವತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತೇವೆ, ನಿರಂತರವಾಗಿ ನಾವು ಇರುತ್ತೇವೆ ಎಂದು ಬಿಪಿನ್ ರಾವತ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com