ಲಸಿಕೆ ಅಭಿವೃದ್ಧಿಯ ಕುರಿತು ಸಂಸದೀಯ ಸಮಿತಿ ಸಭೆಯಲ್ಲಿ ಹೈಡ್ರಾಮಾ: ಹಲವು ಬಿಜೆಪಿ ಸಂಸದರಿಂದ ಸಭಾತ್ಯಾಗ

ಲಸಿಕೆ ಅಭಿವೃದ್ಧಿಯ ಕುರಿತು ಸಂಸದೀಯ ಸಮಿತಿ ಸಭೆ ಬುಧವಾರ ದೊಡ್ಡ ಹೈಡ್ರಾಮಾಗೆ ಸಾಕ್ಷಿಯಾಗಿದೆ.ಹಲವಾರು ಬಿಜೆಪಿ ಸಂಸದರು ಲಸಿಕೆ ನೀತಿಯನ್ನು ಚರ್ಚಿಸಲು ಇದು ಸೂಕ್ತ ಸಮಯವಲ್ಲ ಎಂದು ಪ್ರತಿಪಾದಿಸಿದರು.

Published: 23rd June 2021 11:36 PM  |   Last Updated: 24th June 2021 01:24 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : PTI

ನವದೆಹಲಿ: ಲಸಿಕೆ ಅಭಿವೃದ್ಧಿಯ ಕುರಿತು ಸಂಸದೀಯ ಸಮಿತಿ ಸಭೆ ಬುಧವಾರ ದೊಡ್ಡ ಹೈಡ್ರಾಮಾಗೆ ಸಾಕ್ಷಿಯಾಗಿದೆ.ಹಲವಾರು ಬಿಜೆಪಿ ಸಂಸದರು ಲಸಿಕೆ ನೀತಿಯನ್ನು ಚರ್ಚಿಸಲು ಇದು ಸೂಕ್ತ ಸಮಯವಲ್ಲ ಎಂದು ಪ್ರತಿಪಾದಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಸರ್ಕಾರದ ವೈಜ್ಞಾನಿಕ ಸಲಹೆಗಾರ ಕೆ.ವಿಜಯ ರಾಘವನ್, ಐಸಿಎಂಆರ್ ಡಿಜಿ ವಿಕೆ ಭಾರ್ಗವ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ರೇಣು ಸ್ವರೂಪ್ ಸೇರಿ ಎಲ್ಲರೂ ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋವಿಡ್  19 ಗಾಗಿ ಲಸಿಕೆ ಅಭಿವೃದ್ಧಿ ಕಾರ್ಯಸೂಚಿ ಮತ್ತು ಕೊರೋನಾವೈರಸ್ ಅದರ ರೂಪಾಂತರಗಳ ಆನುವಂಶಿಕ ಅನುಕ್ರಮದ ಕುರಿತು ನಡೆದ ಸಭೆಯ ಅಧ್ಯಕ್ಷತೆಯನ್ನು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್  ವಹಿಸಿದ್ದರು.

ಡೋಸೇಜ್‌ಗಳ ನಡುವಿನ ಅಂತರವನ್ನು ಹೆಚ್ಚಿಸುವಂತಹ ಕೇಂದ್ರದ ವ್ಯಾಕ್ಸಿನೇಷನ್ ನೀತಿಯ ಬಗ್ಗೆ ವಿರೋಧ ಪಕ್ಷದ ಸಂಸದರು ಪ್ರಶ್ನೆಗಳನ್ನು ಕೇಳುವ ಇಚ್ಚೆ  ವ್ಯಕ್ತಪಡಿಸಿದಾಗ, ಬಿಜೆಪಿ ಸಂಸದರು ಇದನ್ನು ತೀವ್ರವಾಗಿ ವಿರೋಧಿಸಿದರು ಮತ್ತು ಅವರಲ್ಲಿ ಕೆಲವರು ಸಭೆಯನ್ನು ಮುಂದೂಡಬೇಕೆಂದು ಒತ್ತಾಯಿಸಿ ಹೊರನಡೆದರು ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಲಸಿಕೆ ಅಭಿಯಾನ  ನಡೆಯುತ್ತಿರುವುದರಿಂದ, ವ್ಯಾಕ್ಸಿನೇಷನ್ ಪ್ರಕ್ರಿಯೆಗೆ ಅಡ್ಡಿಯುಂಟುಮಾಡುವಂತಹ ಸಮಸ್ಯೆಗಳನ್ನು ಸೃಷ್ಟಿಸಲು  ಇದು ಸೂಕ್ತ ಸಮಯವಲ್ಲ ಎಂದು ಬಿಜೆಪಿ ಸಂಸದರು ಅಭಿಪ್ರಾಯಪಟ್ಟರು ಎಂದು ಮೂಲಗಳು ತಿಳಿಸಿವೆ. ಸಭೆಯ ಕಾರ್ಯಸೂಚಿಗೆ ಅನುಗುಣವಾಗಿ ಸಭೆ ನಡೆಸಬೇಕು ಎಂದು ಸಮಿತಿ ಅಧ್ಯಕ್ಷ ರಮೇಶ್ ಒತ್ತಿಹೇಳಿದ್ದಾರೆ ಎಂದು ಅವರು ಹೇಳಿದರು.

ಸಭೆಯನ್ನು ಮುಂದೂಡಬೇಕೆಂಬ ಬೇಡಿಕೆಗೆ ಬಿಜೆಪಿ ಸಂಸದರು ಅಂಟಿಕೊಂಡಾಗ ಅದರ ಮೇಲೆ ಮತ ಚಲಾಯಿಸಲು ಬಯಸಿದಾಗ, ಸ್ಥಾಯಿ ಸಮಿತಿ ಸಭೆಗಳನ್ನು ಒಮ್ಮತದ ಮೂಲಕ ನಡೆಸಲಾಗುತ್ತದೆ ಎಂದು ರಮೇಶ್ ಅದಕ್ಕೆ ನಿರಾಕರಿಸಿದ್ದಾರೆ. ಮೂಲಗಳ ಪ್ರಕಾರ, ಅಧ್ಯಕ್ಷರಾಗಿ ಇದು ಅವರ ಕಡೆಯ ಸಭೆಯಾಗಿದ್ದರೂ ಮತದಾನ ಇರುವುದಿಲ್ಲ ಎಂದು ರಮೇಶ್ ಅಭಿಪ್ರಾಯಪಟ್ಟಿದ್ದರು. ಪ್ರತಿಪಕ್ಷದ ಸಂಸದರು ಸಂಸದರಾಗಿ ಜನರಿಗೆ ಉತ್ತರಿಸಬೇಕಾದ ಕಾರಣ ಪ್ರಶ್ನಿಸುವ ಹಕ್ಕು ಕೂಡ ಇದೆ ಎಂದು ಪ್ರತಿಪಾದಿಸಿದರು.

ಹೈಡ್ರಾಮಾ ಸುಮಾರು ಒಂದು ಗಂಟೆ ಕಾಲ ನಡೆಯಿತು, ನಂತರ ಸಭೆಯ ಮೊದಲು ಉನ್ನತ ಅಧಿಕಾರಿಗಳನ್ನು ಪದಚ್ಯುತಗೊಳಿಸಲು ತೀರ್ಮಾನಿಸಲಾಗಿತ್ತು ಸಭೆಯಲ್ಲಿ, ಸಾಂಕ್ರಾಮಿಕ ರೋಗದ ಮಧ್ಯೆ ಎಲ್ಲಾ ಸದಸ್ಯರು ವಿಜ್ಞಾನಿಗಳ ಸಮುದಾಯವನ್ನು ಶ್ಲಾಘಿಸಿದರು ಎಂದು ಮೂಲಗಳು ತಿಳಿಸಿವೆ. ನಂತರ, ರಮೇಶ್ ಅವರು ಟ್ವೀಟ್ ನಲ್ಲಿ ಎಲ್ಲಾ ವರದಿಗಳೂ ಪಿಎಂ-ಕೇರ್ಸ್ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದ್ದರೆ ಅದು ಶುದ್ಧ ಸುಳ್ಳು ಮತ್ತು 150 ನಿಮಿಷಗಳಲ್ಲಿ ಒಂದು ಬಾರಿ ಸಹ ಇದನ್ನು ಉಲ್ಲೇಖಿಸಲಾಗಿಲ್ಲ ಎಂದರು.


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp