ಪ್ರಿಯತಮೆಗೆ ವಿವಾಹ ಸುದ್ದಿ ತಿಳಿದು ಅವಳ ಮನೆಗೆ ಭೇಟಿ ನೀಡಿದ ಯುವಕನನ್ನು ಕಲ್ಲಿಂದ ಜಜ್ಜಿ ಕೊಲೆ!

ಪ್ರಿಯತಮೆಗೆ ಬೇರೊಬ್ಬ ಯುವಕನೊಂದಿಗೆ ವಿವಾಹವಾಗುತ್ತಿದೆ ಎಂದು ತಿಳಿದ ಯುವಪ್ರೇಮಿ ಆಕೆಯ ಮನೆಗೆ ಆಗಮಿಸಿದಾಗ ಯುವತಿಯ ಕುಟುಂಬ ಸದಸ್ಯರು ಆತನನ್ನು ಕಲ್ಲಿನಿಂದ ಥಳಿಸಿ ಕೊಂದಿರುವ ಘಟನೆ  ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ನಡೆದಿದೆ.

Published: 24th June 2021 12:09 AM  |   Last Updated: 24th June 2021 01:25 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : Online Desk

ದಿಂಡಿಗಲ್: ಪ್ರಿಯತಮೆಗೆ ಬೇರೊಬ್ಬ ಯುವಕನೊಂದಿಗೆ ವಿವಾಹವಾಗುತ್ತಿದೆ ಎಂದು ತಿಳಿದ ಯುವಪ್ರೇಮಿ ಆಕೆಯ ಮನೆಗೆ ಆಗಮಿಸಿದಾಗ ಯುವತಿಯ ಕುಟುಂಬ ಸದಸ್ಯರು ಆತನನ್ನು ಕಲ್ಲಿನಿಂದ ಥಳಿಸಿ ಕೊಂದಿರುವ ಘಟನೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆ ಸಂಬಂಧ 4 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ

ಭಾರತಿ ರಾಜ್ (21) ಗೆ ತನ್ನ ಪ್ರೇಯಸಿ ಪರಮೇಶ್ವರಿ (20) ಗೆ ಬೇರೆ ಯುವಕನೊಂದಿಗೆ ವಿವಾಹವಾಗುತ್ತದೆ ಎಂದು ತಿಳಿದು ಆಕೆಯನ್ನು ಕಾಣಲು, ಅವಳ ಮದುವೆಯನ್ನು ತಡೆಯಲು ಹಾಗೂ  ಅವಳನ್ನು ತನಗೆ ನೀಡಿ ಮದುವೆ ಮಾಡಿಸುವಂತೆ ಅವಳ ಕುಟುಂಬ ಸದಸ್ಯರನ್ನು ಮನವೊಲಿಸಲು ಅವಳ ಮನೆಗೆ ಆಗಮಿಸಿದ್ದಾನೆ.

ಆದರೆ  ಇದು ಪರಮೇಶ್ವರಿಯ ಕುಟುಂಬವನ್ನು ಕೆರಳಿಸಿತು ಮತ್ತು ಅವರು ಭಾರತಿ ರಾಜ್ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಹೊಡೆದಿದ್ದಾರೆ. ಏತನ್ಮಧ್ಯೆ, ಪರಮೇಶ್ವರಿಯ ಸಹೋದರ ಮಲೈಸಾಮಿ ಭಾರತಿ ರಾಜ್ ನ ತಲೆಗೆ ದೊಡ್ಡ ಕಲ್ಲಿನಿಂದ ಜಜ್ಜಿದ್ದಾನೆ. ಇದರಿಂದ ಯುವಕ ಭಾರತಿ ರಾಜ್  ಪ್ರಜ್ಞೆ ತಪ್ಪಿದನು. ಘಟನೆಯಲ್ಲಿ  ಗಂಭೀರವಾಗಿ ಗಾಯಗೊಂಡಿದ್ದ ಭಾರತಿ ರಾಜ್ ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿಯೂ ಆತ ಬದುಕಲಿಲ್ಲ.


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp