ವಿಶ್ವಾಸ ಪುನರ್ ಸ್ಥಾಪನೆಗೆ ಜಮ್ಮುಕಾಶ್ಮೀರದ ರಾಜ್ಯತ್ವವನ್ನು ಪುನಃಸ್ಥಾಪಿಸಬೇಕು: ಪ್ರಧಾನಿಗೆ ಫಾರೂಕ್ ಅಬ್ದುಲ್ಲಾ ಒತ್ತಾಯ

ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಜಮ್ಮು ಕಾಶ್ಮೀರದ  ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಗುರುವಾರ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವವನ್ನು ಪುನಃಸ್ಥಾಪಿಸುವ ಮೂಲಕ ಕಾಶ್ಮೀರದ ಮೇಲೆ ಜನರಿಗೆ ವಿಶ್ವಾಸವನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ಫಾರೂಕ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ

ನವದೆಹಲಿ: ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಗುರುವಾರ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವವನ್ನು ಪುನಃಸ್ಥಾಪಿಸುವ ಮೂಲಕ ಕಾಶ್ಮೀರದ ಮೇಲೆ ಜನರಿಗೆ ವಿಶ್ವಾಸವನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ನವದೆಹಲಿಯಲ್ಲಿ ಪ್ರಧಾನಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ನಿರ್ಣಾಯಕ ಸಭೆಯ ನಂತರ ಪಿಟಿಐ ಜೊತೆ ಮಾತನಾಡಿದ ಅಬ್ದುಲ್ಲಾ, ತಮ್ಮ ನ್ಯಾಷನಲ್ ಕಾನ್ಫರೆನ್ಸ್  ಕಾನೂನು ಮತ್ತು ಸಾಂವಿಧಾನಿಕ ವಿಧಾನಗಳ ಮೂಲಕ ಕೆಲಸ ಮುಂದುವರಿಸಲಿದೆ ಎಂದು ಹೇಳಿದರು.

ಸಂವಿಧಾನದ 370 ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಲಾಗಿದೆ.

"ವಿಶ್ವಾಸ ನಾಶವಾಗಿದೆ  ಅದನ್ನು ತಕ್ಷಣವೇ ಪುನಃಸ್ಥಾಪಿಸಬೇಕಾಗಿದೆ ಮತ್ತು ಅದಕ್ಕಾಗಿ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವವನ್ನು ಪುನಃಸ್ಥಾಪಿಸಲು ಕೇಂದ್ರವು ಮುಂದಾಗಬೇಕು."ಲೋಕಸಭಾ ಸದಸ್ಯರಾದ ಅಬ್ದುಲ್ಲಾ ಹೇಳಿದರು.

"ರಾಜ್ಯತ್ವ ಎಂದರೆ ಜಮ್ಮು ಮತ್ತು ಕಾಶ್ಮೀರದ ಐಎಎಸ್ ಮತ್ತು ಐಪಿಎಸ್ ಕಾರ್ಯಕರ್ತರನ್ನು ಸಹ ಹಿಂದಕ್ಕೆ ಕರೆಸುವುದು ಎಂದು ನಾನು ಪ್ರಧಾನಿಗೆ ತಿಳಿಸಿದೆ. ರಾಜ್ಯ ಪುನರ್ ಸ್ಥಾಪನೆಯಾಗಬೇಕು." ಎಂದು ಮೂರು ಗಂಟೆಗಳ ಕಾಲ ನಡೆದ ಸಭೆಯ ನಂತರ ಅವರು ಹೇಳಿದರು.

ತಮ್ಮ ಮಗ ಮತ್ತು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ಬಂದಿದ್ದ ಎನ್‌ಸಿ ಮುಖ್ಯಸ್ಥ ಜಮ್ಮು ಮತ್ತು ಕಾಶ್ಮೀರದ ಹೆಗ್ಗುರುತನ್ನು ಶೀಘ್ರವಾಗಿ ಪುನಃಸ್ಥಾಪಿಸುವುದು ಕೇಂದ್ರಕ್ಕೆ ಅತ್ಯಗತ್ಯವಾಗಿದ್ದು, ಇದರಿಂದಾಗಿ ಇತರ ಪ್ರಜಾಪ್ರಭುತ್ವ ಸಂಬಂಧ ಚಟುವಟಿಕೆಗಳನ್ನು ಮುಂದೆ ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com