ಎಸ್ ಸಿಒ ಸಭೆ: ಎಲ್ಇಟಿ, ಜೆಇಎಂ ವಿರುದ್ಧ ಕ್ರಿಯಾ ಯೋಜನೆ ಪ್ರಸ್ತಾವನೆ ಮುಂದಿಟ್ಟ ಅಜಿತ್ ದೋವಲ್ 

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶಾಂಘೈ ಸಹಕಾರ ಒಕ್ಕೂಟ ಸಭೆಯಲ್ಲಿ ಭಾಗಿಯಾಗಿದ್ದು, ಪಾಕಿಸ್ತಾನದ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ ಹಾಗೂ ಜೈಶ್-ಎ-ಮೊಹಮ್ಮದ್ ಗಳ ವಿರುದ್ಧ ಕ್ರಿಯಾ ಯೋಜನೆಯ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. 
ಅಜಿತ್ ದೋವಲ್
ಅಜಿತ್ ದೋವಲ್

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶಾಂಘೈ ಸಹಕಾರ ಒಕ್ಕೂಟ ಸಭೆಯಲ್ಲಿ ಭಾಗಿಯಾಗಿದ್ದು, ಪಾಕಿಸ್ತಾನದ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ ಹಾಗೂ ಜೈಶ್-ಎ-ಮೊಹಮ್ಮದ್ ಗಳ ವಿರುದ್ಧ ಕ್ರಿಯಾ ಯೋಜನೆಯ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. 

ಭಯೋತ್ಪಾದನೆಯ ದುಷ್ಕರ್ಮಿಗಳನ್ನು ತ್ವರಿತವಾಗಿ ಕಟಕಟೆಗೆ ತರುವುದಕ್ಕೆ ಅ;ಜಿತ್ ದೋವಲ್ ಕರೆ ನೀಡಿದ್ದಾರೆ. 

ತಜಕಿಸ್ತಾನದಲ್ಲಿ ನಡೆದ ಎಸ್ ಸಿಒ ಸದಸ್ಯ ರಾಷ್ಟ್ರಗಳ ಭದ್ರತಾ ಸಲಹೆಗಾರರ ಸಭೆಯಲ್ಲಿ ದೋವಲ್ ಭಾಗಿಯಾಗಿದ್ದು, ಯುಎನ್ ಗುರುತಿಸಿರುವ ಭಯೋತ್ಪಾದಕರು, ಭಯೋತ್ಪಾದಕ ಸಂಘಟನೆಗಳ ವಿರುದ್ಧ ಯುನೈಟೆಡ್ ನೇಷನ್ಸ್ ನಿರ್ಣಯಗಳನ್ನು ಪೂರ್ಣವಾಗಿ ಜಾರಿಗೆ ತರುವುದಕ್ಕೆ ಆಗ್ರಹಿಸಿದ್ದಾರೆ. 

ಭಯೋತ್ಪಾದಕ ಸಂಘಟನೆಗಳಿಗೆ ಲಭ್ಯವಾಗುತ್ತಿರುವ ಆರ್ಥಿಕ ನೆರವಿಗೆ ಕತ್ತರಿ ಹಾಕುವುದಕ್ಕೆ ಅಂತಾರಾಷ್ಟ್ರೀಯ ಮಾನದಂಡಗಳ ಅಳವಡಿಕೆಗೆ ಕರೆನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com