ಸುಧಾರಿತ ಪಿನಾಕ ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಿದ ಡಿಆರ್‌ಡಿಒ

ಸ್ಥಳೀಯವಾಗಿ ಅಭಿವೃದ್ಧಿಸಿರುವ ಪಿನಾಕಾ ರಾಕೆಟ್ ವ್ಯವಸ್ಥೆಯ ಸುಧಾರಿತ ಆವೃತ್ತಿ ಮತ್ತು 122-ಎಂಎಂ ಕ್ಯಾಲಿಬರ್ ರಾಕೆಟ್ ಕರಾವಳಿಯ ಪರೀಕ್ಷಾ ಕೇಂದ್ರದಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು.
ಪಿನಾಕಾ ರಾಕೆಟ್ ಸಿಸ್ಟಮ್
ಪಿನಾಕಾ ರಾಕೆಟ್ ಸಿಸ್ಟಮ್

ಭುವನೇಶ್ವರ: ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಪಿನಾಕಾ ರಾಕೆಟ್ ವ್ಯವಸ್ಥೆಯ ಸುಧಾರಿತ ಆವೃತ್ತಿ ಮತ್ತು 122-ಎಂಎಂ ಕ್ಯಾಲಿಬರ್ ರಾಕೆಟ್ ಅನ್ನು ಕರಾವಳಿಯ ಪರೀಕ್ಷಾ ಕೇಂದ್ರದಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು.

ವಿವಿಧ ಶ್ರೇಣಿಗಳಲ್ಲಿನ ಗುರಿಯ ವಿರುದ್ಧ 25 ವಿಸ್ತೃತ ಶ್ರೇಣಿಯ ಪಿನಾಕಾ ರಾಕೆಟ್‌ಗಳು, ನಾಲ್ಕು 122-ಎಂಎಂ ರಾಕೆಟ್‌ಗಳನ್ನು ಉಡಾಯಿಸಲಾಯಿತು. ರಾಕೆಟ್‌ಗಳನ್ನು ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್(ಎಂಬಿಆರ್ಎಲ್) ನಿಂದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್(ಐಟಿಆರ್) ನಲ್ಲಿ ಸಾಲ್ವೋ ಮೋಡ್‌ನಲ್ಲಿ ಎಲ್ಲಾ ಮಿಷನ್ ಉದ್ದೇಶಗಳನ್ನು ಪೂರೈಸಲಾಯಿತು.

ರಕ್ಷಣಾ ಮೂಲಗಳ ಪ್ರಕಾರ, 22 ಸುತ್ತುಗಳ ಪಿನಾಕಾ ರಾಕೆಟ್‌ನ್ನು ಗುರುವಾರ ಪರೀಕ್ಷಿಸಲಾಗಿತ್ತು. ಅದೇ ವ್ಯವಸ್ಥೆಯ ಮೂರು ಸುತ್ತುಗಳು ಮತ್ತು 122 ಎಂಎಂ ರಾಕೆಟ್‌ಗಳ ನಾಲ್ಕು ಸುತ್ತುಗಳನ್ನು ಶುಕ್ರವಾರ ಪರೀಕ್ಷಿಸಲಾಯಿತು. ಪಿನಾಕಾ ವ್ಯವಸ್ಥೆಯ ವರ್ಧಿತ ಶ್ರೇಣಿಯ ಆವೃತ್ತಿಯು 45 ಕಿ.ಮೀ.ವರೆಗಿನ ದೂರದಲ್ಲಿರುವ ಗುರಿಗಳನ್ನು ನಾಶಪಡಿಸಿದೆ. 

ಕಳೆದ ಮೂರು ತಿಂಗಳಲ್ಲಿ ಇದು ಮೊದಲ ಪರೀಕ್ಷೆಯಾಗಿದ್ದು ಕೋವಿಡ್ -19 ನಿರ್ಬಂಧಗಳ ಮಧ್ಯೆ ನಡೆಸಲಾಯಿತು. 15 ಅಡಿ ಉದ್ದದ ರಾಕೆಟ್ ಸುಮಾರು 280 ಕೆಜಿ ತೂಕವಿದ್ದು, 100 ಕೆಜಿವರೆಗೆ ಸಿಡಿತಲೆಗಳನ್ನು ಹೊತ್ತೊಯಬಲ್ಲದು. ವ್ಯವಸ್ಥೆಯಲ್ಲಿ ಕೆಲವು ಸುಧಾರಣೆಗಳೊಂದಿಗೆ ಪ್ರಯೋಗಗಳನ್ನು ನಡೆಸಲಾಯಿತು ಅದು ಹೆಚ್ಚು ಮಾರಕವಾಗಿದೆ. 

ಕಳೆದ ಎರಡು ತಿಂಗಳುಗಳಲ್ಲಿ ಭಾರತ ಹಲವಾರು ಕ್ಷಿಪಣಿಗಳ ಪರೀಕ್ಷೆ ನಡೆಸಿದೆ. ಮೇಲ್ಮೈಯಿಂದ ಮೇಲ್ಮೈಗೆ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್ ಹಾಗೂ ಹೊಸ ಆವೃತ್ತಿಯ ರುದ್ರಂ-1 ಕ್ಷಿಪಣಿ ಸೇರಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com