ಯುಪಿ: ಮಸೀದಿ ಧ್ವಂಸ ಸಾಕ್ಷ್ಯಚಿತ್ರ ಕುರಿತು 'ದಿ ವೈರ್' ನ್ಯೂಸ್ ಪೋರ್ಟಲ್, ಇಬ್ಬರು ಪತ್ರಕರ್ತರ ವಿರುದ್ಧ ಎಫ್ ಐಆರ್!

ಮಸೀದಿಯೊಂದರ ಧ್ವಂಸ ಕುರಿತ ಸಾಕ್ಷ್ಯಚಿತ್ರ ವಿಚಾರವಾಗಿ ದಿ ವೈರಲ್ ನ್ಯೂಸ್ ಫೋರ್ಟಲ್ ನ ಇಬ್ಬರು ಪತ್ರಕರ್ತರು ಹಾಗೂ ಇನ್ನಿತರ ಇಬ್ಬರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂದು ಆಡಳಿತ ಸಂಸ್ಥೆಗಳು ಹೇಳಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬರಾಬಂಕಿ: ಮಸೀದಿಯೊಂದರ ಧ್ವಂಸ ಕುರಿತ ಸಾಕ್ಷ್ಯಚಿತ್ರ ವಿಚಾರವಾಗಿ ದಿ ವೈರಲ್ ನ್ಯೂಸ್ ಫೋರ್ಟಲ್ ನ ಇಬ್ಬರು ಪತ್ರಕರ್ತರು ಹಾಗೂ ಇನ್ನಿತರ ಇಬ್ಬರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂದು ಆಡಳಿತ ಸಂಸ್ಥೆಗಳು ಹೇಳಿವೆ.

ಪತ್ರಕರ್ತರಾದ ಸಿರಾಜ್ ಆಲಿ ಮುಕುಲ್ ಎಸ್ ಚೌಹ್ಹಾಣ್, ಹಾಗೂ ಮೊಹಮ್ಮದ್ ಅನೀಸ್, ಮೊಹಮ್ಮದ್ ನಯೀಮ್ ಎಂಬವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಇವರು ಸಾಕ್ಷ್ಯಚಿತ್ರದಲ್ಲಿ ದುರುದ್ದೇಶಪೂರಿತ ಸುಳ್ಳಿನ ಮಾಹಿತಿಯನ್ನು ಹರಡುತ್ತಿದ್ದರು ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.

ಅಕ್ರಮವಾಗಿ ನಿರ್ಮಿಸಲಾಗಿದ್ದ ಮಸೀದಿಯನ್ನು ಮೇ 17 ರಂದು ಬರಾಬಂಕಿ ಆಡಳಿತ ಧ್ವಂಸಗೊಳಿಸಲಾಗಿತ್ತು. ಇದು ತಾಲೂಕ್ ಕಚೇರಿ ಆವರಣಕ್ಕೆ ಹೊಂದಿಕೊಂಡಿತ್ತು ಮತ್ತು ಎದುರಿಗೆ ಸಿಡಿಎಂ ವಸತಿಗಳಿದ್ದವು. ಜೂನ್ 23 ರಂದು ದಿ ವೈರ್ ನ್ಯೂಸ್ ಪೋರ್ಟಲ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ನಿರಾಧಾರವಾಗಿದೆ ಎಂದು ಎಸ್ ಪಿ ಯಮುನಾ ಪ್ರಸಾದ್ ತಿಳಿಸಿದ್ದಾರೆ. 

ದುರುದ್ದೇಶಪೂರಿತ, ಅಸತ್ಯದಿಂದ ಕೂಡಿದ ಸೂಕ್ಷ್ಮ ವರದಿ ಪ್ರಸಾರ ಆರೋಪದ ಮೇರೆಗೆ ದಿ ವೈರ್ ವಿರುದ್ಧ ಗುರುವಾರ ರಾತ್ರಿ ಕೇಸ್ ದಾಖಲಿಸಲಾಗಿದೆ. ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ದಿ ವೈರ್ ಅಥವಾ ಅದರ ಪತ್ರಕರ್ತರ  ವಿರುದ್ಧ ಕಳೆದ 14 ತಿಂಗಳುಗಳಲ್ಲಿ ಯುಪಿ ಪೊಲೀಸರು ದಾಖಲಿಸಿರುವ ನಾಲ್ಕನೇ ಎಫ್ ಐಆರ್ ಇದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com