ಹಳ್ಳಿಯಲ್ಲಿ ಹುಟ್ಟಿ ಸಾಮಾನ್ಯ ಹುಡುಗನಾಗಿದ್ದ ನಾನು ಇಂದು ರಾಷ್ಟ್ರಪತಿಯಾಗಿದ್ದೇನೆಂದರೆ ಅದಕ್ಕೆ ಪ್ರಜಾಪ್ರಭುತ್ವ ಕಾರಣ: ರಾಮನಾಥ್ ಕೋವಿಂದ್
ಈ ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಸಾಮಾನ್ಯ ಹುಡುಗನಾಗಿದ್ದ ನಾನು ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನದಲ್ಲಿ ಕೂರುತ್ತೇನೆ ಎಂದು ನನ್ನ ಕನಸಿನಲ್ಲಿಯೂ ಯೋಚಿಸಿರಲಿಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
Published: 27th June 2021 02:23 PM | Last Updated: 27th June 2021 02:26 PM | A+A A-

ಹುಟ್ಟೂರಿಗೆ ಬಂದಿಳಿದಾಗ ನೆಲಕ್ಕೆ ಬಾಗಿ ನಮಸ್ಕರಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಕಾನ್ಪುರ(ಉತ್ತರ ಪ್ರದೇಶ): ಈ ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಸಾಮಾನ್ಯ ಹುಡುಗನಾಗಿದ್ದ ನಾನು ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನದಲ್ಲಿ ಕೂರುತ್ತೇನೆ ಎಂದು ನನ್ನ ಕನಸಿನಲ್ಲಿಯೂ ಯೋಚಿಸಿರಲಿಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಅವರು ಇಂದು ಅವರ ಹುಟ್ಟೂರಾದ ಉತ್ತರ ಪ್ರದೇಶದ ಕಾನ್ಪುರದ ದೇಹತ್ ಜಿಲ್ಲೆಯ ಪರಾಂಖ್ ಗ್ರಾಮದಲ್ಲಿ ಅಭಿನಂದನೆ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ತಮ್ಮ ಬಾಲ್ಯದ ದಿನಗಳು, ಕನಸು ಕಂಡಿದ್ದು, ಮುಂದೆ ಬೆಳೆದ ರೀತಿಯನ್ನು ಬಣ್ಣಿಸಿದರು. ನನ್ನಂತಹ ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹುಡುಗ ಇಂದು ದೇಶದ ಅತ್ಯುನ್ನತ ಹುದ್ದೆ ವಹಿಸಿಕೊಂಡಿದ್ದಾರೆಂದರೆ ಅದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಸಾಧ್ಯವಾಯಿತು.
ಇಂದು ಈ ಕಾರ್ಯಕ್ರಮದ ಸಂದರ್ಭದಲ್ಲಿ ನಾನು ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಸಂವಿಧಾನವನ್ನು ರಚಿಸಿದವರಿಗೆ ಅವರ ತ್ಯಾಗ-ಬಲಿದಾನಗಳಿಗೆ ಶಿರಬಾಗಿ ವಂದಿಸುತ್ತೇನೆ. ಇಂದು ನನ್ನ ಯಶಸ್ಸಿಗೆ ಈ ಗ್ರಾಮದ ಮಣ್ಣು, ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ಕಾರಣ ಎಂದು ಸ್ಮರಿಸಿಕೊಂಡರು.
ಇದಕ್ಕೂ ಮುನ್ನ ರಾಷ್ಟ್ರಪತಿಗಳು ತಾವು ಹುಟ್ಟಿದ ಗ್ರಾಮಕ್ಕೆ ವಿಮಾನದಲ್ಲಿ ಹೆಲಿಪ್ಯಾಡ್ ನಿಂದ ಬಂದಿಳಿದಾಗ ನೆಲಕ್ಕೆ ತಲೆಬಾಗಿ ನೆಲಕ್ಕೆ ನಮಸ್ಕರಿಸಿದರು.