ಕೋವಿಡ್ -19 ವೇಳೆ ಇಂಡೋ-ಜಪಾನೀಸ್ ಸಹಭಾಗಿತ್ವ ಜಾಗತಿಕ ಸ್ಥಿರತೆಗೆ ಹೆಚ್ಚು ಪ್ರಸ್ತುತ: ಪ್ರಧಾನಿ ನರೇಂದ್ರ ಮೋದಿ

ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಇಂಡೋ-ಜಪಾನೀಸ್ ಸ್ನೇಹ ಮತ್ತು ಪಾಲುದಾರಿಕೆ ಜಾಗತಿಕ ಸ್ಥಿರತೆ ಮತ್ತು ಸಮೃದ್ಧಿಗೆ ಹೆಚ್ಚು ಪ್ರಸ್ತುತವಾಗಿದೆ  ಎಂದು ಭಾನುವಾರ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುವಂತೆ ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಅಹಮದಾಬಾದ್ : ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಇಂಡೋ-ಜಪಾನೀಸ್ ಸ್ನೇಹ ಮತ್ತು ಪಾಲುದಾರಿಕೆ ಜಾಗತಿಕ ಸ್ಥಿರತೆ ಮತ್ತು ಸಮೃದ್ಧಿಗೆ ಹೆಚ್ಚು ಪ್ರಸ್ತುತವಾಗಿದೆ  ಎಂದು ಭಾನುವಾರ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುವಂತೆ ಕರೆ ನೀಡಿದರು.

ಅಹಮದಾಬಾದ್ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಆವರಣದಲ್ಲಿ ಸ್ಥಾಪಿಸಲಾಗಿರುವ ಕೈಜಾನ್ ಅಕಾಡೆಮಿ ಮತ್ತು ಜಪಾನೀಸ್ ಜೆನ್ ಗಾರ್ಡನ್ ನ್ನು ವರ್ಚುಯಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜೆನ್ ಗಾರ್ಡನ್ ಮತ್ತು ಕೈಜಾನ್ ಅಕಾಡೆಮಿ ಭಾರತ ಮತ್ತು ಜಪಾನ್ ನಡುವಿನ ಸಂಬಂಧಗಳ ಸ್ವಾಭಾವಿಕತೆ ಮತ್ತು ಆಧುನಿಕತೆಯ ಸಂಕೇತವಾಗಿದೆ ಎಂದು ಹೇಳಿದರು.

ಜಪಾನ್‌ನ ಈಗಿರುವ ಪ್ರಧಾನ ಮಂತ್ರಿ ಯೋಶಿಹೈಡ್ ಸುಗಾ ಮತ್ತು ನಾನು  ಸಾಂಕ್ರಾಮಿಕ ಬಿಕ್ಕಟ್ಟಿನ ಸಮಯದಲ್ಲಿ ಜಾಗತಿಕ ಸ್ಥಿರತೆ ಮತ್ತು ಸಮೃದ್ಧಿ ಗಾಗಿ ಇಂಡೋ-ಜಪಾನೀಸ್ ಸ್ನೇಹ ಮತ್ತು ಸಹಭಾಗಿತ್ವ ಇನ್ನಷ್ಟು ಪ್ರಸ್ತುತವಾಗಿದೆ. ಹಲವಾರು ಜಾಗತಿಕ ಸವಾಲುಗಳನ್ನು ಎದುರಿಸುತ್ತಿರುವಾಗ, ನಮ್ಮ ಸ್ನೇಹ ಮತ್ತು ಸಂಬಂಧವು ದಿನದಿಂದ ದಿನಕ್ಕೆ ಬಲಗೊಳ್ಳುವುದು ಸಮಯದ ಅಗತ್ಯವಾಗಿದೆ ಎಂದು ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com