ಆಗಸ್ಟ್ ನಲ್ಲಿ 12 ವರ್ಷದ ಮೇಲ್ಪಟ್ಟ ಮಕ್ಕಳಿಗೂ ಕೋವಿಡ್-19 ಲಸಿಕೆ! 

ಕೊರೋನಾ ಮೂರನೇ ಅಲೆ ಪ್ರಾರಂಭವಾದರೆ ಅದಕ್ಕೂ ಮುನ್ನ 12 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಕೋವಿಡ್-19 ಲಸಿಕೆ ಲಭ್ಯವಿರಲಿದೆ. 
ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಗೊಳಗಾಗಿರುವ ಶಾಲಾ ಮಕ್ಕಳು(ಸಾಂದರ್ಭಿಕ ಚಿತ್ರ)
ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಗೊಳಗಾಗಿರುವ ಶಾಲಾ ಮಕ್ಕಳು(ಸಾಂದರ್ಭಿಕ ಚಿತ್ರ)

ನವದೆಹಲಿ: ಕೊರೋನಾ ಮೂರನೇ ಅಲೆ ಪ್ರಾರಂಭವಾದರೆ ಅದಕ್ಕೂ ಮುನ್ನ 12 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಕೋವಿಡ್-19 ಲಸಿಕೆ ಲಭ್ಯವಿರಲಿದೆ. 

ಹೌದು, ಜುಲೈ ಅಂತ್ಯದ ವೇಳೆಗೆ 12 ವರ್ಷದ ಮಕ್ಕಳಿಗಾಗಿ ತಯಾರಿಸಲಾಗಿರುವ ಝೈಡಸ್ ಕ್ಯಾಡಿಲಾ ಲಸಿಕೆಯ ಕ್ಲಿನಿಕಲ್ ಟ್ರಯಲ್ ಗಳು ಪೂರ್ಣಗೊಳ್ಳಲಿದ್ದು, ಆಗಸ್ಟ್ ನಲ್ಲಿ ಲಭ್ಯವಾಗಲಿದೆ ಎಂದು ಎನ್ ಟಿಎಜಿಐ ನ ಅಧ್ಯಕ್ಷ ಡಾ.ಎನ್ ಕೆ ಆರೋರಾ ಹೇಳಿದ್ದಾರೆ. 

ಕ್ಲಿನಿಕಲ್ ಟ್ರಯಲ್ ಗಳು ಜುಲೈ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳಲಿದ್ದು ಆಗಸ್ಟ್ ನಲ್ಲಿ 12-18 ವಯಸ್ಸಿನ ಮಕ್ಕಳಿಗೆ ಲಸಿಕೆ ಲಭ್ಯವಿರಲಿದೆ ಎಂದು ಎನ್ ಟಿಎಜಿಐ ಮುಖ್ಯಸ್ಥರು ತಿಳಿಸಿದ್ದಾರೆ. 

ಇದೇ ವೇಳೆ ಕೋವಿಡ್-19 ಮೂರನೇ ಅಲೆಯ ಬಗ್ಗೆ ಐಸಿಎಂಆರ್ ಅಧ್ಯಯನದ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಅವರು, "ಸರ್ಕಾರ ಮುಂದಿನ ದಿನಗಳಲ್ಲಿ 6-8  ತಿಂಗಳವರೆಗೆ ದಿನವೊಂದಕ್ಕೆ 1 ಕೋಟಿ ಲಸಿಕೆ ನೀಡುವ ಗುರಿ ಹೊಂದಿದೆ" ಎಂದು ಹೇಳಿದ್ದಾರೆ. 

ಎನ್ ಟಿಎಜಿಐ ಮುಖ್ಯಸ್ಥರು ಲಸಿಕೆಗೆ ಸಂಬಂಧಿಸಿದ ವದಂತಿಗಳಲ್ಲಿ ತಳ್ಳಿಹಾಕಿದ್ದು ಲಸಿಕೆಗಳು ಶೇ.95-96 ರಷ್ಟು ಸುರಕ್ಷಿತ ಎಂದು ಹೇಳಿದ್ದಾರೆ. ಇನ್ನು ಝೈಡಸ್ ಕ್ಯಾಡಿಲಾ ಲಸಿಕೆಯ ಬಗ್ಗೆ ಏಮ್ಸ್ ನ ನಿರ್ದೇಶಕ ಡಾ. ರಣ್ ದೀಪ್ ಗುಲೇರಿಯಾ ಮಾತನಾಡಿದ್ದು, ಝೈಡಸ್ ಕ್ಯಾಡಿಲಾ ಡಿಎನ್ಎ ಲಸಿಕೆಯಾಗಿದ್ದು,  ಇದು ಬಳಕೆಯಾಗುತ್ತಿರುವ ಹೊಸ ವೇದಿಕೆಯಾಗಿದ್ದು ಹೆಮ್ಮೆಯಾಗುತ್ತಿದೆ. ಈ ಹಿಂದೆ ದೇಶದಲ್ಲಿ ಇಂತಹ ಸಂಶೋಧನೆ ನಡೆದಿರಲಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com