ಬಂಗಾಳದ ರಾಜ್ಯಪಾಲ ಭ್ರಷ್ಟ ವ್ಯಕ್ತಿ; ಹವಾಲಾ ಜೈನ್ ಕೇಸ್ ಚಾರ್ಚ್ ಶೀಟ್ ನಲ್ಲಿ ಹೆಸರು: ಮಮತಾ ಬ್ಯಾನರ್ಜಿ ಆರೋಪ

ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಭ್ರಷ್ಟ ವ್ಯಕ್ತಿ ಎಂದು ಕರೆದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉತ್ತರ ಬಂಗಾಳದ ಇತ್ತೀಚಿನ ಅವರ ಪ್ರವಾಸವನ್ನು ಪ್ರಶ್ನಿಸಿದ್ದಾರೆ. ರಾಜ್ಯದ ಉತ್ತರ ಭಾಗವನ್ನು ವಿಭಜಿಸಲು ಪಿತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೊಲ್ಕತ್ತಾ: ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಭ್ರಷ್ಟ ವ್ಯಕ್ತಿ ಎಂದು ಕರೆದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉತ್ತರ ಬಂಗಾಳದ ಇತ್ತೀಚಿನ ಅವರ ಪ್ರವಾಸವನ್ನು ಪ್ರಶ್ನಿಸಿದ್ದಾರೆ. ರಾಜ್ಯದ ಉತ್ತರ ಭಾಗವನ್ನು ವಿಭಜಿಸಲು ಪಿತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜ್ಯಪಾಲ ಜಗದೀಪ್ ಧಂಕರ್ ಭ್ರಷ್ಟ ವ್ಯಕ್ತಿ. 1996ರಲ್ಲಿ ನಡೆದಿದ್ದ ಹವಾಲಾ ಜೈನ್ ಕೇಸ್ ಚಾರ್ಜ್ ಶೀಟ್ ನಲ್ಲಿ ಅವರ ಹೆಸರಿತ್ತು.ಈ ರೀತಿಯ ರಾಜ್ಯಪಾಲರನ್ನು ಮುಂದುವರಿಸಲು ಕೇಂದ್ರ ಸರ್ಕಾರ ಏಕೆ ಅವಕಾಶ ನೀಡಿದೆ? ಎಂದು ಅವರು ಪ್ರಶ್ನಿಸಿದೆ.

ದಿಢೀರನೆ ಉತ್ತರ ಬಂಗಾಳಕ್ಕೆ ಅವರು ಏಕೆ ಪ್ರವಾಸ ಕೈಗೊಂಡಿದ್ದರು ಎಂದು ಪ್ರಶ್ನಿಸಿದ ಅವರು, ಉತ್ತರ ಬಂಗಾಳವನ್ನು ವಿಭಜಿಸುವ ಪಿತೂರಿನಿಂದ ಈ ಭೇಟಿ ನೀಡಿದ್ದಾರೆ. ಬಿಜೆಪಿ ಶಾಸಕರು ಮತ್ತು ಸಂಸದರನ್ನು ಭೇಟಿ ಮಾಡಲು ಧಂಕರ್ ಉತ್ತರ ಬಂಗಾಳಕ್ಕೆ ಭೇಟಿ ನೀಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.

ಧಂಕರ್ ಅವರನ್ನು ರಾಜ್ಯಪಾಲ ಹುದ್ದೆಯಿಂದ ತೆಗೆಯುವಂತೆ ಅನೇಕ ಸಲ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಮಮತಾ ಬ್ಯಾನರ್ಜಿ ತಿಳಿಸಿದರು. ಸಂವಿಧಾನದ ಪ್ರಕಾರ, ಅವರ ಭೇಟಿ ಮಾಡಿ, ಮಾತುಕತೆ ನಡೆಸುತ್ತೇನೆ ಎಲ್ಲಾ ನಿಯಮಗಳನ್ನು ಪಾಲಿಸುತ್ತೇನೆ. ಆದರೆ, ಕೇಂದ್ರ ಸರ್ಕಾರ ನನ್ನ ಪತ್ರದ ಆಧಾರದ ಮೇಲೆ ವರ್ತಿಸಲಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com