ಜಮ್ಮುವಿನಲ್ಲಿ ಶಂಕಿತ ಉಗ್ರನ ಬಂಧನ: 5.5 ಕೆಜಿ ಎಲ್ ಇಡಿ ಸ್ಫೋಟಕ ವಶ

ಜಮ್ಮುವಿನ ಬರ್ಮಿನಿ ರಸ್ತೆಯಲ್ಲಿ ಶಂಕಿತ ಉಗ್ರನೊಬ್ಬನನ್ನು ಬಂಧಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಬಂಧಿತನಿಂದ 5.5 ಕೆಜಿ ತೂಕದ ಎಲ್ ಇಡಿ ಸ್ಫೋಟಕವನ್ನು ವಶಪಡಿಸಿಕೊಂಡಿದ್ದಾರೆ.
ಜಮ್ಮು-ಕಾಶ್ಮೀರ ಪೊಲೀಸರು
ಜಮ್ಮು-ಕಾಶ್ಮೀರ ಪೊಲೀಸರು

ಜಮ್ಮು: ಇಲ್ಲಿನ ಬರ್ಮಿನಿ ರಸ್ತೆಯಲ್ಲಿ ಶಂಕಿತ ಉಗ್ರನೊಬ್ಬನನ್ನು ಬಂಧಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಬಂಧಿತನಿಂದ 5.5 ಕೆಜಿ ತೂಕದ ಎಲ್ ಇಡಿ ಸ್ಫೋಟಕವನ್ನು ವಶಪಡಿಸಿಕೊಂಡಿದ್ದಾರೆ.

ಶಂಕಿತನನ್ನು ನದೀಂ ಉಲ್ ಹಖ್ ಎಂದು ಗುರುತಿಸಲಾಗಿದೆ. ಈತ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಜೊತೆಗೆ ನಂಟು ಹೊಂದಿರುವ ರೆಸಿಸ್ಟೆನ್ಸ್ ರೆಸಿಸ್ಟೆನ್ಸ್ ಸಂಘಟನೆಗೆ ಸೇರಿದವನು ಎನ್ನಲಾಗಿದೆ.

ನದೀಂ ರಾಮ್ ಬಾನ್ ನ ಜೈನ್ ಹಾಲ್ -ಬನಿಹಾಲ್ ನಿವಾಸಿಯಾಗಿದ್ದು, ಈತನ ಬಂಧನದಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಈತ ಪಾಕಿಸ್ತಾನ ಹಾಗೂ ದಕ್ಷಿಣ ಕಾಶ್ಮೀರದ ಶೋಪಿಯಾನ್ ನಲ್ಲಿರುವ ಸಂಘಟನೆಯ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ ಎಂದು ಜಮ್ಮುವಿನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಚಂದನ್ ಕೊಹ್ಲಿ ತಿಳಿಸಿದ್ದಾರೆ.

ಕಾನೂನು ಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ಸ್ಫೋಟಕ ಪದಾರ್ಥಗಳ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಈತನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com