ಹೊಸ ತಲೆಮಾರಿನ ಅತ್ಯಾಧುನಿಕ ರೂಪಾಂತರಿ ಕ್ಷಿಪಣಿ ಅಗ್ನಿ ಪ್ರೈಮ್ ಯಶಸ್ವಿ ಉಡಾವಣೆ

ಹೊಸ ತಲೆಮಾರಿನ ಅತ್ಯಾಧುನಿಕ ರೂಪಾಂತರಿ ಕ್ಷಿಪಣಿ ಎಂದೇ ಹೇಳಲಾಗುತ್ತಿರುವ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಅಗ್ನಿ ಪ್ರೈಮ್ ಕ್ಷಿಪಣಿ
ಅಗ್ನಿ ಪ್ರೈಮ್ ಕ್ಷಿಪಣಿ

ಭುವನೇಶ್ವರ: ಹೊಸ ತಲೆಮಾರಿನ ಅತ್ಯಾಧುನಿಕ ರೂಪಾಂತರಿ ಕ್ಷಿಪಣಿ ಎಂದೇ ಹೇಳಲಾಗುತ್ತಿರುವ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಈ ಬಗ್ಗೆ ಡಿಆರ್ ಡಿಒ ಮೂಲಗಳು ಮಾಹಿತಿ ನೀಡಿದ್ದು, ಹೊಸ ತಲೆಮಾರಿನ ಅತ್ಯಾಧುನಿಕ ರೂಪಾಂತರಿ ಕ್ಷಿಪಣಿ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಸೋಮವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಬೆಳಿಗ್ಗೆ 10.55 ಕ್ಕೆ ಒಡಿಶಾ ತೀರದಲ್ಲಿ ಅಗ್ನಿ-ಪ್ರೈಮ್ ಹೊಸ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ  ನಡೆಸಿತು. 

ಕ್ಷಿಪಣಿ ನಿಗದಿತ ಸಮಯದಲ್ಲಿ ನಿಗದಿತ ಗುರಿಯನ್ನು ತಲುಪುವ ಮೂಲಕ ಯಶಸ್ವಿಯಾಗಿದೆ. ಹೊಸ ಪರಮಾಣು-ಸಾಮರ್ಥ್ಯದ ಕ್ಷಿಪಣಿ ಸಂಪೂರ್ಣವಾಗಿ ಸಂಯೋಜಿತ ವ್ಯವಸ್ಥೆಗಳಿಂದ ಕೂಡಿದೆ. ಅಗ್ನಿ-ಪ್ರೈಮ್ ಕ್ಷಿಪಣಿಯು ಅಗ್ನಿ ಸರಣಿಯ ಕ್ಷಿಪಣಿಗಳ ಹೊಸ ಪೀಳಿಗೆಯ ಸುಧಾರಿತ ರೂಪಾಂತರವಾಗಿದೆ. ಇದು 1000  ರಿಂದ 2000 ಕಿ.ಮೀ ನಡುವಿನ ವ್ಯಾಪ್ತಿಯ ಸಾಮರ್ಥ್ಯವನ್ನು ಹೊಂದಿರುವ ಕ್ಷಿಪಣಿಯಾಗಿದೆ ಎಂದು ಡಿಆರ್‌ಡಿಒ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕ್ಷಿಪಣಿ ಉಡಾವಣೆಯಾಗುತ್ತಿದ್ದಂತೆಯೇ ಪೂರ್ವ ಕರಾವಳಿಯುದ್ದಕ್ಕೂ ಇರುವ ವಿವಿಧ ಟೆಲಿಮೆಟ್ರಿ ಮತ್ತು ರಾಡಾರ್ ಕೇಂದ್ರಗಳು ಕ್ಷಿಪಣಿಯನ್ನು ಪತ್ತೆ ಹಚ್ಚಿ ನಿಯಂತ್ರಣ ಕೊಠಡಿಗೆ ಮೇಲ್ವಿಚಾರಣೆ ಮಾಡಿದ್ದವು. ಕ್ಷಿಪಣಿಯು ಎಲ್ಲಾ ಮಿಷನ್ ಉದ್ದೇಶಗಳನ್ನು ಉನ್ನತ ಮಟ್ಟದ ನಿಖರತೆಯೊಂದಿಗೆ ಪೂರೈಸಿದೆ ಎಂದು  ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com