ಜಮ್ಮುವಿನಲ್ಲಿ ಪೊಲೀಸ್ ಹತ್ಯೆಗೈದ ಉಗ್ರರು: ಒಮರ್ ಅಬ್ದುಲ್ಲಾ ತೀವ್ರ ಖಂಡನೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಜಿ ಪೊಲೀಸ್ ವಿಶೇಷಾಧಿಕಾರಿ ಮನೆ ಮೇಲೆ ಉಗ್ರರು ದಾಳಿ ನಡೆಸಿ ಅಧಿಕಾರಿ, ಪತ್ನಿ ಹಾಗೂ ಅವರ ಪುತ್ರಿಯನ್ನು ಬಲಿಪಡೆದ ಘಟನೆಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
Published: 28th June 2021 10:59 AM | Last Updated: 28th June 2021 02:02 PM | A+A A-

ಒಮರ್ ಅಬ್ದುಲ್ಲಾ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಜಿ ಪೊಲೀಸ್ ವಿಶೇಷಾಧಿಕಾರಿ ಮನೆ ಮೇಲೆ ಉಗ್ರರು ದಾಳಿ ನಡೆಸಿ ಅಧಿಕಾರಿ, ಪತ್ನಿ ಹಾಗೂ ಅವರ ಪುತ್ರಿಯನ್ನು ಬಲಿಪಡೆದ ಘಟನೆಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ, ಇದೊಂದು ಹೇಡಿತನದ ಕೃತ್ಯ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಪೊಲೀಸ್ ವಿಶೇಷ ಅಧಿಕಾರಿ ಫಯಾಜ್ ಅಹ್ಮದ್, ಅವರ ಪತ್ನಿ ಮತ್ತು ಅವರ ಮಗಳ ಮೇಲೆ ಕಳೆದ ರಾತ್ರಿ ಉಗ್ರರು ದಾಳಿ ನಡೆಸಿದ್ದು, ಇದೊಂದು ಭೀಕರ ಮತ್ತು ಹೇಡಿತನದ ದಾಳಿಯಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಸಾವಿಗೀಡಾದವರಿಗೆ ಸ್ವರ್ಗದಲ್ಲಿ ಸ್ಥಾನ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಪ್ರೀತಿ ಪಾತ್ರರಿಗೆ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.
ಆವಂತಿಪೋರಾದ ಹರಿಪರಿಗಂನಲ್ಲಿರುವ ಪೊಲೀಸ್ ಅಧಿಕಾರಿ ಫಯಾದ್ ಅಹಮದ್ ಅವರ ಮನೆಯ ಮೇಲೆ ಕಳೆದ ರಾತ್ರಿ 11 ಗಂಟೆಗೆ ದಾಳಿ ನಡೆಸಿದ್ದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಫಯಾದ್ ಅಹಮದ್, ಅವರ ಪತ್ನಿ ಹಾಗೂ ಪುತ್ರಿ ಸಾವನ್ನಪ್ಪಿದ್ದಾರೆ.