ಪಶ್ಚಿಮ ಬಂಗಾಳ: ಚುನಾವಣೆ ನಂತರದ ಹಿಂಸಾಚಾರ ತನಿಖೆಗೆ ಭೇಟಿ ನೀಡಿದ ಎನ್ ಹೆಚ್ ಆರ್ ಸಿ ತಂಡದ ಮೇಲೆ ದಾಳಿ

ಚುನಾವಣೆ ನಂತರದ ಹಿಂಸಾಚಾರದ ತನಿಖೆಗಾಗಿ ಪಶ್ಚಿಮ ಬಂಗಾಳದ ಜಾದವ್ ಪುರಕ್ಕೆ ಮಂಗಳವಾರ ಭೇಟಿ ನೀಡಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡವೊಂದರ ಮೇಲೆ ದಾಳಿ ನಡೆಸಲಾಗಿದೆ.
ಚುನಾವಣಾ ನಂತರದ ಹಿಂಸಾಚಾರದ ಸಾಂದರ್ಭಿಕ ಚಿತ್ರ
ಚುನಾವಣಾ ನಂತರದ ಹಿಂಸಾಚಾರದ ಸಾಂದರ್ಭಿಕ ಚಿತ್ರ

ಜಾದವ್ ಪುರ: ಚುನಾವಣೆ ನಂತರದ ಹಿಂಸಾಚಾರದ ತನಿಖೆಗಾಗಿ ಪಶ್ಚಿಮ ಬಂಗಾಳದ ಜಾದವ್ ಪುರಕ್ಕೆ ಮಂಗಳವಾರ ಭೇಟಿ ನೀಡಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡವೊಂದರ ಮೇಲೆ ದಾಳಿ ನಡೆಸಲಾಗಿದೆ.

ಗೂಂಡಾಗಳಿಂದ ತಂಡದ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಎನ್ ಹೆಚ್ ಆರ್ ಸಿ ತನಿಖಾ ತಂಡದ ಸದಸ್ಯ ಆತಿಫ್ ರಶೀದ್ ಹೇಳಿದ್ದಾರೆ.ತನಿಖೆ ವೇಳೆ 40ಕ್ಕೂ ಹೆಚ್ಚು ಮನೆಗಳು ನಾಶವಾಗಿರುವುದು ಕಂಡುಬಂದಿದೆ. ಗೂಂಡಾಗಳು ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ರಶೀದ್ ತಿಳಿಸಿದ್ದಾರೆ. 

ಈ ಮಧ್ಯೆ ಎನ್ ಹೆಚ್ ಆರ್ ಸಿ ಸದಸ್ಯ ರಾಜೀವ್ ಜೈನ್ ಅವರಿಗೆ ಪತ್ರ ಬರೆದಿರುವ ರಾಜ್ಯಸಭಾ ಸದಸ್ಯ ಸ್ವಪಾನ್ ದೇಶ್ ಗುಪ್ತಾ, ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಉಲ್ಲಂಘನೆಯಾಗಿರುವುದನ್ನು ನಿಮ್ಮ ಗಮನಕ್ಕೆ ತರುತ್ತೇನೆ. ಇದರಲ್ಲಿ ತಾರಕೇಶ್ವರ ನಾಗರಿಕರು ತಮ್ಮ ರಾಜಕೀಯ ಆದ್ಯತೆಗಳನ್ನು ಹೊರತುಪಡಿಸಿದಂತೆ ಕಾರಣ ಇಲ್ಲದೆ ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ. 

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಅಥವಾ ದೂರವಾಣಿ, ಟೆಲಿಫೋನ್ ಮೂಲಕ ಎನ್ ಹೆಚ್ ಆರ್ ಸಿ ಸಮಿತಿ ಸದಸ್ಯರನ್ನು ಭೇಟಿಯಾಗಿ ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಭಾನುವಾರ ಎನ್ ಹೆಚ್ ಆರ್ ಸಿ ದೂರುಗಳನ್ನು ಆಹ್ವಾನಿಸಿತ್ತು.

ಪಶ್ಚಿಮ ಬಂಗಾಳ ಹೈಕೋರ್ಟ್ ನಿರ್ದೇಶನದ ಪ್ರಕಾರ, ಚುನಾವಣೆ ನಂತರದ ಅವಧಿಯಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ, ದೂರುಗಳು ಮತಿತ್ತರ ಕೇಸ್ ಗಳನ್ನು ಗಮನಿಸಲು ಎನ್ ಹೆಚ್ ಆರ್ ಸಿ ಮುಖ್ಯಸ್ಥರು ಕಮಿಟಿಯೊಂದರನ್ನು ರಚಿಸಿರುವುದಾಗಿ ಎನ್ ಹೆಚ್ ಆರ್ ಸಿ ಭಾನುವಾರ ಹೊರಡಿಸಿದ್ದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು.

ಚುನಾವಣೆ ನಂತರದ ಹಿಂಸಾಚಾರ ಕುರಿತಂತೆ ದೂರುಗಳು, ಆರೋಪಗಳ ವಿಚಾರಣೆಗಾಗಿ ರಾಜೀವ್ ಜೈನ್ ನೇತೃತ್ವದಲ್ಲಿ ಎನ್ ಹೆಚ್ ಆರ್ ಸಿ ಮತ್ತಿತರ ಕಮಿಟಿ ಸದಸ್ಯರು ಪಶ್ಚಿಮ ಬಂಗಾಳದ ವಿವಿಧ ಕಡೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಲಾಗಿತ್ತು.

ಪಶ್ಚಿಮ ಬಂಗಾಳದಲ್ಲಿನ ಚುನಾವಣಾ ನಂತರದ ಹಿಂಸಾಚಾರ ಕುರಿತ ದೂರುಗಳ ವಿಚಾರಣೆಗಾಗಿ ಎನ್ ಹೆಚ್ ಆರ್ ಸಿ ಮುಖ್ಯಸ್ಥ ನಿವೃತ್ತ ನ್ಯಾಯಾಧೀಶ ಅರುಣ್ ಮಿಶ್ರಾ, ಜೂನ್ 21 ರಂದು ಮಾಜಿ ಗುಪ್ತಚರ ವಿಭಾಗದ ಮುಖ್ಯಸ್ಥ ರಾಜೀವ್ ಜೈನ್ ನೇತೃತ್ವದಲ್ಲಿನ ಸಮಿತಿಯೊಂದನ್ನು ರಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com