ಲಸಿಕೆ ಪರಿಣಾಮಕಾರಿತ್ವ ಮೇಲೆ ಡೆಲ್ಟಾ ಪ್ಲಸ್ ರೂಪಾಂತರಿಯ ವ್ಯತಿರಿಕ್ತ ಪರಿಣಾಮದ ಬಗ್ಗೆ ವೈಜ್ಞಾನಿಕ ಮಾಹಿತಿ ಇಲ್ಲ: ವಿ.ಕೆ. ಪೌಲ್

ಡೆಲ್ಟಾ ಪ್ಲಸ್ ರೂಪಾಂತರ ವೈರಾಣು ಬಗ್ಗೆ ಆತಂಕಗಳು ಹೆಚ್ಚಳವಾಗುತ್ತಿರುವ ಮಧ್ಯೆ, ಹೊಸ ರೂಪಾಂತರ ಹೆಚ್ಚಾಗಿ ಹರಡಬಲ್ಲದು ಅಥವಾ ಲಸಿಕೆ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ ಎಂಬುದರ ಬಗ್ಗೆ ಇಲ್ಲಿಯವರೆಗೂ ಯಾವುದೇ ವೈಜ್ಞಾನಿಕ ಮಾಹಿತಿಯಿಲ್ಲ ಎಂದು ಕೋವಿಡ್ ಕಾರ್ಯಪಡೆ ಮುಖ್ಯಸ್ಥ ವಿ. ಕೆ. ಪೌಲ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಡೆಲ್ಟಾ ಪ್ಲಸ್ ರೂಪಾಂತರ ವೈರಾಣು ಬಗ್ಗೆ ಆತಂಕಗಳು ಹೆಚ್ಚಳವಾಗುತ್ತಿರುವ ಮಧ್ಯೆ, ಹೊಸ ರೂಪಾಂತರ ಹೆಚ್ಚಾಗಿ ಹರಡಬಲ್ಲದು ಅಥವಾ ಲಸಿಕೆ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ ಎಂಬುದರ ಬಗ್ಗೆ ಇಲ್ಲಿಯವರೆಗೂ ಯಾವುದೇ ವೈಜ್ಞಾನಿಕ ಮಾಹಿತಿಯಿಲ್ಲ ಎಂದು ಕೋವಿಡ್ ಕಾರ್ಯಪಡೆ ಮುಖ್ಯಸ್ಥ ವಿ. ಕೆ. ಪೌಲ್ ಹೇಳಿದ್ದಾರೆ.

ಡೆಲ್ಟಾ ಪ್ಲಸ್ ವೈರಾಣು ಕುರಿತಂತೆ ಪಿಟಿಐ ಸಂದರ್ಶನದಲ್ಲಿ ತಿಳಿಸಿದ ವಿ. ಕೆ. ಪೌಲ್, ಇದು ಹೊಸ ರೂಪಾಂತರವಾಗಿದ್ದು,  ಅದರ ಬಗ್ಗೆ ವೈಜ್ಞಾನಿಕ ಮಾಹಿತಿ ಇನ್ನೂ ಆರಂಭಿಕ ಹಂತದಲ್ಲಿದೆ. ಇದು ತೀವ್ರಗತಿಯಲ್ಲಿ ಹರಡಬಲ್ಲದೇ ಅಥವಾ ಲಸಿಕೆ ಪರಿಣಾಮಕಾರಿತ್ವದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಇನ್ನೂ ಮಾಹಿತಿ ತಿಳಿದುಬರಬೇಕಾಗಿದೆ. ಇದರ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಕಾಯುತ್ತಿರುವುದಾಗಿ ತಿಳಿಸಿದರು.

ಡೆಲ್ಟಾ ರೂಪಾಂತರ ಕೊರೋನಾವೈರಸ್ ವಿರುದ್ಧ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಪರಿಣಾಮಕಾರಿತ್ವ ಕುರಿತಂತೆ ಪ್ರತಿಕ್ರಿಯಿಸಿದ ಪೌಲ್, ಐಸಿಎಂಆರ್ ನ ವೈಜ್ಞಾನಿಕ ಮೌಲ್ಯಮಾಪನ ಆಧಾರದ ಮೇಲೆ ಡೆಲ್ಟಾ ವೈರಸ್ ಸೇರಿದಂತೆ ಕೊರೋನಾವೈರಸ್ ವಿರುದ್ದ ಎರಡು ಲಸಿಕೆಗಳು ಪರಿಣಾಮಕಾರಿಯಾಗಿವೆ ಎಂದರು. 

ಫೈಜರ್ ಮತ್ತು ಮೊಡೆರ್ನಾದಂತಹ ವಿದೇಶಿ ಲಸಿಕೆ ತಯಾರಕರಿಗೆ ಭದ್ರತೆ ನೀಡಲು ಭಾರತ ನಿರ್ಧರಿಸಿದೆಯೇ ಎಂದು ಕೇಳಿದಾಗ, ಈ ವಿಷಯವು ಅನೇಕ ಆಯಾಮಗಳನ್ನು ಹೊಂದಿದೆ ಮತ್ತು ಅಂತಹ ವಿಷಯಗಳಿಗೆ ಸಮಯವನ್ನು ನೀಡುವುದು ಜಾಣತನವಲ್ಲ ಎಂದು ಪೌಲ್ ಹೇಳಿದರು.

ಭಾರತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದ ಲಸಿಕೆಗಳಿಗೆ ದಾರಿ ಮಾಡಿಕೊಡುವ ಚರ್ಚೆ ನಡೆಯುತ್ತಿದೆ. ಈ ವಿಷಯವು ಅನೇಕ ಆಯಾಮಗಳನ್ನು ಹೊಂದಿದೆ ಮತ್ತು ನಾವು ಒಪ್ಪಿದ ಮಾರ್ಗವನ್ನು ಶೀಘ್ರದಲ್ಲಿಯೇ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಕೊವಿಶೀಲ್ಡ್ ಅಂತರ-ಡೋಸ್ ಮಧ್ಯಂತರವನ್ನು ಮೂರು ತಿಂಗಳುಗಳಿಗೆ ಹೆಚ್ಚಿಸುವ ನಿರ್ಧಾರವನ್ನು ದೇಶ ತೆಗೆದುಕೊಂಡಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com