ಜಮ್ಮುವಿನಲ್ಲಿ ಮುಂದುವರೆದ ಉಗ್ರರ ಸಂಚು: ಮತ್ತೆ ಡ್ರೋಣ್ ಹಾರಾಟ ಪತ್ತೆ!
ಜಮ್ಮು-ಕಾಶ್ಮೀರದಲ್ಲಿ ದಾಳಿ ನಡೆಸಲು ಉಗ್ರರು ಸತತ ಯತ್ನಗಳನ್ನು ನಡೆಸುತ್ತಲೇ ಇದ್ದಾರೆ. ಸೋಮವಾರ ತಡರಾತ್ರಿ ಮತ್ತೆ ಜಮ್ಮುವಿನ ರತ್ನುಚಕ್-ಕಾಲೂಚಕ್ ಸೇನಾ ಕೇಂದ್ರದ ಡ್ರೋಣ್ ಹಾರಾಟ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
Published: 29th June 2021 10:20 AM | Last Updated: 29th June 2021 01:12 PM | A+A A-

ಸಂಗ್ರಹ ಚಿತ್ರ
ಜಮ್ಮು: ಜಮ್ಮು-ಕಾಶ್ಮೀರದಲ್ಲಿ ದಾಳಿ ನಡೆಸಲು ಉಗ್ರರು ಸತತ ಯತ್ನಗಳನ್ನು ನಡೆಸುತ್ತಲೇ ಇದ್ದಾರೆ. ಸೋಮವಾರ ತಡರಾತ್ರಿ ಮತ್ತೆ ಜಮ್ಮುವಿನ ರತ್ನುಚಕ್-ಕಾಲೂಚಕ್ ಸೇನಾ ಕೇಂದ್ರದ ಡ್ರೋಣ್ ಹಾರಾಟ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಭಾನುವಾರವಷ್ಟೇ ಸ್ಫೋಟಕಗಳನ್ನು ಕಟ್ಟಲಾಗಿದ್ದ ಎರಡು ಡ್ರೋಣ್ ಮೂಲಕ ಜಮ್ಮುವಿನ ಭಾರತೀಯ ವಾಯುಪಡೆ ಸ್ಟೇಷನ್ ಮೇಲೆ ದಾಳಿ ನಡೆಸಲಾಗಿತ್ತು.
ಈ ಘಟನೆ ಬಳಿಕ ಸೋಮವಾರ ಬೆಳಗಿನ ಜಾವ ಕಾಲೂಚಕ್ ಮಿಲಿಟರಿ ಸ್ಟೇಷನ್ ಬಳಿ ಡ್ರೋಣ್ ಪತ್ತೆಯಾಗಿತ್ತು, ಕೂಡಲೇ ಅಲರ್ಟ್ ಆಗಿದ್ದ ಸೇನಾಪಡೆ 20-25 ಸುತ್ತಿನ ಗುಂಡಿನ ದಾಳಿ ನಡೆಸಿ, ಉಗ್ರರ ಸಂಚು ವಿಫಲಗೊಳ್ಳುವಂತೆ ಮಾಡಿದ್ದರು. ಇದೀಗ ಮತ್ತೆ ರತ್ನುಚಕ್-ಕಾಲೂಚಕ್ ಸೇನಾ ಕೇಂದ್ರದ ಬಳಿ ಡ್ರೋಣ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಡ್ರೋಣ್ ಗಳನ್ನು ಬಳಸಿಕೊಂಡು ಗಡಿಯಾಚೆಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಶಸ್ತ್ರಾಸ್ತ್ರ, ಸ್ಫೋಟಕ ಪದಾರ್ಥ, ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಉಗ್ರರು ಇದೀಗ ಅದೇ ಡ್ರೋಣ್ ಬಳಸಿ ಜಮ್ಮು ಏರ್ಪೋರ್ಟ್ ನ ಒಂದು ಭಾಗದಲ್ಲಿರುವ ಭಾರತೀಯ ವಾಯುಪಡೆ ಸ್ಟೇಷನ್ ಮೇಲೆ ಭಾನುವಾರ ದಾಳಿ ನಡೆಸಿದ್ದರು. ಉಗ್ರರ ಈ ದುಷ್ಕೃತ್ಯ ಇದೀಗ ತೀವ್ರ ಆತಂಕವನ್ನು ಸೃಷ್ಟಿಸಿದೆ.