ಬ್ರೆಜಿಲ್‌ನಲ್ಲಿ ಕೋವ್ಯಾಕ್ಸಿನ್ ಬೆಲೆ ವಿವಾದ: ಭಾರತ್ ಬಯೋಟೆಕ್ ಸ್ಪಷ್ಟನೆ
ಬ್ರೆಜಿಲ್‌ನಲ್ಲಿ ಕೋವ್ಯಾಕ್ಸಿನ್ ಬೆಲೆ ವಿವಾದದ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತ್ ಬಯೋಟೆಕ್, ಬ್ರೆಜಿಲ್ ನಲ್ಲಿ ಲಸಿಕೆ ಪೂರೈಕೆಗಾಗಿ ಒಪ್ಪಂದಗಳು ಮತ್ತು ನಿಯಂತ್ರಕ ಅನುಮೋದನೆಗಳನ್ನು ಪಡೆಯುವ ನಿಟ್ಟಿನಲ್ಲಿ ಹಂತ-ಹಂತದ ವಿಧಾನವನ್ನು ಅನುಸರಿಸಿದೆ.
Published: 30th June 2021 05:14 PM | Last Updated: 30th June 2021 06:29 PM | A+A A-

ಕೋವ್ಯಾಕ್ಸಿನ್ ಲಸಿಕೆ
ಹೈದರಾಬಾದ್: ಬ್ರೆಜಿಲ್‌ನಲ್ಲಿ ಕೋವ್ಯಾಕ್ಸಿನ್ ಬೆಲೆ ವಿವಾದದ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತ್ ಬಯೋಟೆಕ್, ಬ್ರೆಜಿಲ್ ನಲ್ಲಿ ಲಸಿಕೆ ಪೂರೈಕೆಗಾಗಿ ಒಪ್ಪಂದಗಳು ಮತ್ತು ನಿಯಂತ್ರಕ ಅನುಮೋದನೆಗಳನ್ನು ಪಡೆಯುವ ನಿಟ್ಟಿನಲ್ಲಿ ಹಂತ-ಹಂತದ ವಿಧಾನವನ್ನು ಅನುಸರಿಸಿದೆ. ಅಲ್ಲದೆ ಬ್ರೆಜಿಲ್ ನಿಂದ ಯಾವುದೇ ಮುಂಗಡ ಪಾವತಿಗಳನ್ನು ಸ್ವೀಕರಿಸಿಲ್ಲ ಅಥವಾ ಯಾವುದೇ ಲಸಿಕೆಗಳನ್ನು ಸರಬರಾಜು ಮಾಡಿಲ್ಲ ಎಂದು ಹೇಳಿದೆ.
ಕೋವ್ಯಾಕ್ಸಿನ್ ಬೆಲೆ ಕುರಿತಂತೆ ರಿಯೊ ಡಿ ಜನೈರೊ ನ್ಯೂಸ್ ರಿಪೋರ್ಟ್ ಸೇರಿದಂತೆ ಮಾಧ್ಯಮ ವರದಿಗಳಿಗೆ ಭಾರತ್ ಬಯೋಟೆಕ್ ಸ್ಪಷ್ಟನೆ ನೀಡಿದೆ. 2020ರ ನವೆಂಬರ್ ನಲ್ಲಿ ಬ್ರೆಜಿಲ್ ಸಚಿವಾಲಯದೊಂದಿಗೆ ಚರ್ಚೆಗಳು ಆರಂಭವಾಗಿದ್ದು ಎಂಟು ತಿಂಗಳ ಅವಧಿಯಲ್ಲಿ ಕಂಪನಿಯು ಅನುಮೋದನೆ ಕೋರಿರುವ ಇತರ ದೇಶಗಳಲ್ಲಿ ಕಂಡುಬರುವಂತೆಯೇ ಒಂದು ಹಂತ-ಹಂತದ ವಿಧಾನವನ್ನು ಅನುಸರಿಸಲಾಗಿದೆ ಎಂದು ಹೇಳಿದೆ. ಅಲ್ಲದೆ ಜೂನ್ 4ರಂದು ಬ್ರೆಜಿಲ್ ನಲ್ಲಿ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ ಸಿಕ್ಕಿತ್ತು.
ಭಾರತ್ ಬಯೋಟೆಕ್ ಯಾವುದೇ ಮುಂಗಡ ಪಾವತಿಗಳನ್ನು ಸ್ವೀಕರಿಸಿಲ್ಲ. ಎಂಒಹೆಚ್ ಬ್ರೆಜಿಲ್‌ಗೆ ಯಾವುದೇ ಲಸಿಕೆಗಳನ್ನು ನೀಡಿಲ್ಲ. ಭಾರತ್ ಬಯೋಟೆಕ್ ಒಪ್ಪಂದಗಳು, ನಿಯಂತ್ರಕ ಅನುಮೋದನೆಗಳು ಮತ್ತು ಸರಬರಾಜುಗಳ ಬಗ್ಗೆ ಇದೇ ರೀತಿಯ ಮಾರ್ಗವನ್ನು ಅನುಸರಿಸಿದೆ ವಿಶ್ವಾದ್ಯಂತ ಹಲವಾರು ದೇಶಗಳಲ್ಲಿ ಕೋವಾಕ್ಸಿನ್ ಅನ್ನು ಯಶಸ್ವಿಯಾಗಿ ಪೂರೈಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಭಾರತದ ಹೊರಗಿನ ದೇಶಗಳಿಗೆ ಸರಬರಾಜು ಮಾಡಲು ಕೋವ್ಯಾಕ್ಸಿನ್ ಬೆಲೆಯನ್ನು ಪ್ರತಿ ಡೋಸ್‌ಗೆ 15ರಿಂದ 20 ಡಾಲರ್ ರವರೆಗೆ ನಿಗದಿಪಡಿಸಲಾಗುವುದು ಎಂದು ಹೈದರಾಬಾದ್ ಮೂಲದ ಕಂಪನಿ ಸ್ಪಷ್ಟಪಡಿಸಿದೆ. ಬ್ರೆಜಿಲ್‌ನ ಬೆಲೆಯನ್ನು ಪ್ರತಿ ಡೋಸ್‌ಗೆ 15 ಡಾಲರ್ ಎಂದು ಸೂಚಿಸಲಾಗಿದೆ. ಭಾರತ್ ಬಯೋಟೆಕ್ ಹಲವಾರು ಇತರ ದೇಶಗಳಿಂದ ಮುಂಗಡ ಪಾವತಿಗಳನ್ನು ಮೇಲಿನ ಬೆಲೆಯಲ್ಲಿ ಪಡೆದುಕೊಂಡಿದೆ, ಪ್ರಕ್ರಿಯೆಯಲ್ಲಿ ಸರಬರಾಜು, ಅನುಮೋದನೆಗಳು ಬಾಕಿ ಉಳಿದಿವೆ ಎಂದು ಅದು ಹೇಳಿದೆ.
ಭಾರತ್ ಬಯೋಟೆಕ್ ಕೋವಾಕ್ಸಿನ್ ಗಾಗಿ ತುರ್ತು ಬಳಕೆ ಪಟ್ಟಿಯನ್ನು ಪಡೆಯಲು ಡಬ್ಲ್ಯುಎಚ್ಒ ಜೊತೆ ಚರ್ಚಿಸುತ್ತಿದೆ. ಉತ್ಪನ್ನವನ್ನು ಹಲವಾರು ದೇಶಗಳಿಗೆ ರಫ್ತು ಮಾಡಲಾಗಿದೆ. ಸರಬರಾಜುಗಾಗಿ ಹೆಚ್ಚುವರಿ ವಿನಂತಿಗಳನ್ನು ಸ್ವೀಕರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ವಿರುದ್ಧದ ಅಕ್ರಮಗಳ ಆರೋಪದ ತನಿಖೆಯ ಮಧ್ಯೆ, ಬ್ರೆಜಿಲ್ ನ ಆರೋಗ್ಯ ಸಚಿವರು, ಭಾರತ್ ಬಯೋಟೆಕ್ನ ಕೊವಾಕ್ಸಿನ್ ನಿಂದ 20 ಮಿಲಿಯನ್ ಡೋಸ್ ಖರೀದಿಸಲು 324 ಮಿಲಿಯನ್ ಅಮೆರಿಕನ್ ಒಪ್ಪಂದವನ್ನು ಅಮಾನತುಗೊಳಿಸುವುದಾಗಿ ಘೋಷಿಸಿದ್ದರು.