ವಿಚ್ಛೇದನ ಪತ್ನಿಯನ್ನು ಹಿಂಬಾಲಿಸಿದ್ದಕ್ಕಾಗಿ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಆರ್.ಡಿ. ತ್ಯಾಗಿ ಪುತ್ರನ ಬಂಧನ

ವಿಚ್ಛೇದನ ನೀಡಿದ್ದರೂ ಪತ್ನಿಯನ್ನು ಹಿಂಬಾಲಿಸಿದ ಆರೋಪದ ಮೇಲೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಆರ್ ಡಿ ತ್ಯಾಗಿ ಪುತ್ರನನ್ನು ಬಂಧಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ವಿಚ್ಛೇದನ ನೀಡಿದ್ದರೂ ಪತ್ನಿಯನ್ನು ಹಿಂಬಾಲಿಸಿದ ಆರೋಪದ ಮೇಲೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಆರ್.ಡಿ ತ್ಯಾಗಿ ಪುತ್ರನನ್ನು ಬಂಧಿಸಲಾಗಿದೆ.

ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ಕೆಲವು ದಿನಗಳ ಹಿಂದೆ ಜಾಮೀನಿನ ಮೇಲೆ ಬಂದಿದ್ದ ರಾಜ್ ತ್ಯಾಗಿ ವಿರುದ್ಧ ನಾಲ್ಕು ಮಕ್ಕಳೊಂದಿಗೆ ಬಾಂದ್ರಾದಲ್ಲಿ ವಾಸಿಸುತ್ತಿರುವ ಆತನ ಮಾಜಿ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ತ್ಯಾಗಿ ಮಾಜಿ ಪತ್ನಿ ತನ್ನ ದೂರಿನಲ್ಲಿ ತಮ್ಮ ಬಾಂದ್ರಾ ನಿವಾಸದ ಕೆಳಗೆ ನಿಂತಿದ್ದು ನಂತರ ತಮ್ಮ ಕಾರನ್ನು ಹಿಂಬಾಲಿಸಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ಭದ್ರತಾ ಸಿಬ್ಬಂದಿಯೊಬ್ಬರು ತ್ಯಾಗಿ ಕಟ್ಟಡದ ಕೆಳಗೆ ನಿಂತಿರುವುದನ್ನು ಗುರುತಿಸಿದ್ದರು. 

ದೂರಿನ ಆಧಾರದ ಮೇಲೆ, ತ್ಯಾಗಿ ವಿರುದ್ಧ ಸೆಕ್ಷನ್ 354ಡಿ(ಹಿಂಬಾಲಿಸುವುದು) ಮತ್ತು 506(2)(ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಬಂಧನದ ನಂತರ, ತ್ಯಾಗಿ ಬಾಂದ್ರಾದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜುಲೈ 2ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಅವರು ಹೇಳಿದರು.

ಕಳೆದ ವರ್ಷ ಪತ್ನಿ ಸಲ್ಲಿಸಿದ್ದ ಕೊಲೆ ಮತ್ತು ಕೌಟುಂಬಿಕ ಹಿಂಸಾಚಾರದ ಪ್ರಕರಣದಲ್ಲಿ ತ್ಯಾಗಿ ಅವರನ್ನು ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಬಾಂದ್ರಾ ಪೊಲೀಸ್ ಠಾಣೆಯ ವ್ಯಾಪ್ತಿಗೆ ಪ್ರವೇಶಿಸುವುದಿಲ್ಲ ಎಂದು ಜೈಲಿನಿಂದ ಅಫಿಡವಿಟ್ ಸಲ್ಲಿಸಿದ್ದರಿಂದ ಕೆಲವು ಷರತ್ತುಗಳ ಮೇಲೆ ಬಾಂಬೆ ಹೈಕೋರ್ಟ್ ಕಳೆದ ವಾರ ಅವರಿಗೆ ಜಾಮೀನು ನೀಡಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com