ಯುಎಸ್ ಹಕ್ಕುಸ್ವಾಮ್ಯ ಕಾಯ್ದೆ ಪಾಲಿಸುವುದಾದರೆ ಭಾರತೀಯ ಕಾನೂನುಗಳ ಬಗ್ಗೆಯೂ ತಿಳಿದುಕೊಳ್ಳಿ: ರವಿಶಂಕರ್ ಪ್ರಸಾದ್

ತಮ್ಮ ಖಾತೆಯನ್ನು ಬ್ಲಾಕ್ ಮಾಡಲು ಟ್ವಿಟರ್ ಅಮೆರಿಕದ ಹಕ್ಕುಸ್ವಾಮ್ಯ ಕಾಯ್ದೆಯನ್ನು ಅನುಸರಿಸುವುದಾದರೆ, ಅದು ಕಾರ್ಯನಿರ್ವಹಿಸುತ್ತಿರುವ ಮತ್ತು ಹಣ ಸಂಪಾದಿಸುತ್ತಿರುವ ಭಾರತದಲ್ಲಿನ ಕಾನೂನುಗಳ ಬಗ್ಗೆಯೂ ತಿಳಿದುಕೊಳ್ಳಬೇಕೆಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಹೇಳಿದ್ದಾರೆ.
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

ನವದೆಹಲಿ: ತಮ್ಮ ಖಾತೆಯನ್ನು ಬ್ಲಾಕ್ ಮಾಡಲು ಟ್ವಿಟರ್ ಅಮೆರಿಕದ ಹಕ್ಕುಸ್ವಾಮ್ಯ ಕಾಯ್ದೆಯನ್ನು ಅನುಸರಿಸುವುದಾದರೆ, ಅದು ಕಾರ್ಯನಿರ್ವಹಿಸುತ್ತಿರುವ ಮತ್ತು ಹಣ ಸಂಪಾದಿಸುತ್ತಿರುವ ಭಾರತದಲ್ಲಿನ ಕಾನೂನುಗಳ ಬಗ್ಗೆಯೂ ತಿಳಿದುಕೊಳ್ಳಬೇಕೆಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಹೇಳಿದ್ದಾರೆ.

ಇಂಡಿಯಾ ಗ್ಲೊಬಲ್ ಪೋರಂನಲ್ಲಿ ಮಾತನಾಡಿದ ಅವರು, ಅಮೆರಿಕದ ಡಿಜಿಟಿಲ್ ಮಿಲೆನಿಯಂ ಹಕ್ಕುಸ್ವಾಮ್ಯ ಕಾಯ್ದೆಯಡಿ ನಾಲ್ಕು ವರ್ಷಗಳ ಹಿಂದೆ ಮಾಡಲಾದ ದೂರಿಗಾಗಿ ಒಂದು ಗಂಟೆಗಳ ಕಾಲ ತಮ್ಮ ಖಾತೆಯನ್ನು ಟ್ವಿಟರ್ ಕಳೆದ ವಾರ ನಿರ್ಬಂಧಿಸಿತ್ತು. ಅಮೆರಿಕದ ಡಿಜಿಟಲ್ ಹಕ್ಕುಸ್ವಾಮ್ಯ ಕಾಯ್ದೆಯನ್ನು ಅನುಸರಿಸುವುದಾರೆ ಭಾರತದಲ್ಲಿನ ಹಕ್ಕು ಸ್ವಾಮ್ಯ ನಿಯಮಗಳನ್ನು ತಿಳಿದುಕೊಳ್ಳಬೇಕು ಎಂದರು. 

ನನ್ನ ಇಡೀ ನಿಲುವನ್ನು ಅಮೆರಿಕ ಕಾನೂನು ನಿಯಂತ್ರಿಸುತ್ತದೆ ಎಂದು ನೀವು ಹೇಳಬಾರದು, ದೊಡ್ಡ ತಂತ್ರಜ್ಞಾನ ಮತ್ತು ಪ್ರಜಾಪ್ರಭುತ್ವದ ಪಾತ್ರವನ್ನು ಸಂತೋಷದಿಂದ ಸಂಯೋಜಿಸಲು ಪರಿಹಾರವನ್ನು ಕಂಡುಹಿಡಿಯಬೇಕಾಗಿದೆ ಎಂದು ಪ್ರಸಾದ್ ತಿಳಿಸಿದರು.

ಸೋಷಿಯಲ್ ಮೀಡಿಯಾ ಕಂಪನಿಗಳು ಭಾರತದಲ್ಲಿ ವ್ಯಾಪಾರ ಮಾಡಲು ಮುಕ್ತವಾಗಿವೆ ಆದರೆ ಅವರು ಭಾರತೀಯ ಸಂವಿಧಾನ ಮತ್ತು ಕಾನೂನುಗಳಿಗೆ ಜವಾಬ್ದಾರರಾಗಿರಬೇಕು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com