ಜುಲೈ19 ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಸಾಧ್ಯತೆ

ಮುಂದಿನ ತಿಂಗಳು  ಸಂಸತ್ತಿನ ಮುಂಗಾರು ಅಧಿವೇಶನಗಳು ಆರಂಭಗೊಳ್ಳಲಿವೆ. ಜುಲೈ 19 ರಿಂದ ಆರಂಭಗೊಂಡು ಆಗಸ್ಟ್ 13 ಕ್ಕೆ ಅಂತ್ಯಗೊಳ್ಳುವ ಸಾಧ್ಯತೆಯಿದೆ.
ಸಂಸತ್ ಅಧಿವೇಶನದ ಸಾಂದರ್ಭಿಕ ಚಿತ್ರ
ಸಂಸತ್ ಅಧಿವೇಶನದ ಸಾಂದರ್ಭಿಕ ಚಿತ್ರ

ನವದೆಹಲಿ: ಮುಂದಿನ ತಿಂಗಳು ಸಂಸತ್ತಿನ ಮುಂಗಾರು ಅಧಿವೇಶನಗಳು ಆರಂಭಗೊಳ್ಳಲಿವೆ. ಜುಲೈ 19 ರಿಂದ ಆರಂಭಗೊಂಡು ಆಗಸ್ಟ್ 13 ಕ್ಕೆ ಅಂತ್ಯಗೊಳ್ಳುವ ಸಾಧ್ಯತೆಯಿದೆ.

ಸಂಸತ್‌ ಅಧಿವೇಶನ ಸುಮಾರು ಒಂದು ತಿಂಗಳು ಕಾಲ ನಡೆಯಲಿದೆ. ಈ ಸಂಬಂಧ ಸಂಸದೀಯ ವ್ಯವಹಾರಗಳ ಸಂಪುಟ  ಸಮಿತಿ (ಸಿಸಿಪಿಎ) ಶಿಫಾರಸು ಮಾಡಿದೆ.

ಈ ಸಂದರ್ಭದಲ್ಲಿ ಕೋವಿಡ್ ಗೆ  ಸಂಬಂಧಿಸಿದ ಎಲ್ಲಾ  ಶಿಷ್ಟಾಚಾರಗಳನ್ನು  ಸಂಸತ್ತಿನ ಆವರಣದಲ್ಲಿ ಅನುಸರಿಸಲಾಗುತ್ತದೆ. ಎಲ್ಲಾ ಸಂಸತ್  ಸದಸ್ಯರು ಕೋವಿಡ್ ಲಸಿಕೆಯ ಕನಿಷ್ಠ ಒಂದು ಡೋಸ್ ತೆಗೆದುಕೊಂಡಿದ್ದಾರೆ ಎಂದು ಭಾವಿಸಲಾಗಿದೆ.  

ಸಂಸತ್ತಿನ ಮುಂಗಾರು ಅಧಿವೇಶನ ಸಾಮಾನ್ಯವಾಗಿ ಜುಲೈ ಮೂರನೇ ವಾರದಲ್ಲಿ ಪ್ರಾರಂಭವಾಗುತ್ತದೆ. ಆಗಸ್ಟ್ 15 ಸ್ವಾತಂತ್ರ್ಯದಿನೋತ್ವವಕ್ಕೆ   ಮೊದಲು  ಸಮಾಪನಗೊಳ್ಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com