ಪ್ರಸಾದ್, ತರೂರ್ ಟ್ವೀಟ್ ಖಾತೆಗಳ ಲಾಕ್: ಎರಡು ದಿನಗಳೊಳಗೆ ಟ್ವಿಟರ್ ನಿಂದ ಪ್ರತಿಕ್ರಿಯೆ ಕೋರಿದ ಸಂಸದೀಯ ಸಮಿತಿ 

ಇತ್ತೀಚಿಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಖಾತೆಗಳನ್ನು ಲಾಕ್ ಮಾಡಿರುವ ಬಗ್ಗೆ ಸಂಸದೀಯ ಸಮಿತಿ ಟ್ವಿಟರ್ ನಿಂದ ಪ್ರತಿಕ್ರಿಯೆ ಕೋರಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ರವಿಶಂಕರ್ ಪ್ರಸಾದ್, ಶಶಿ ತರೂರ್
ರವಿಶಂಕರ್ ಪ್ರಸಾದ್, ಶಶಿ ತರೂರ್

ನವದೆಹಲಿ: ಇತ್ತೀಚಿಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಖಾತೆಗಳನ್ನು ಲಾಕ್ ಮಾಡಿರುವ ಬಗ್ಗೆ ಸಂಸದೀಯ ಸಮಿತಿ ಟ್ವಿಟರ್ ನಿಂದ ಪ್ರತಿಕ್ರಿಯೆ ಕೋರಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ಎರಡು ದಿನಗಳೊಳಗೆ ತನ್ನ ಪ್ರತಿಕ್ರಿಯೆ ನೀಡುವಂತೆ ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿ ಟ್ವಿಟರ್ ಗೆ ಪತ್ರವೊಂದನ್ನು ಕಳುಹಿಸಿದೆ. ರವಿಶಂಕರ್ ಪ್ರಸಾದ್ ಮತ್ತಿತರ ಖಾತೆಗಳ ಬ್ಲಾಕಿಂಗ್ ಬಗ್ಗೆ ಟ್ವಿಟರ್ ನಿಂದ ಪ್ರತಿಕ್ರಿಯೆಯನ್ನು ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿ ಅಧ್ಯಕ್ಷರಿಂದ ಸೂಚನೆ ಬಂದಿರುವುದಾಗಿ ಮೂಲಗಳು ತಿಳಿಸಿವೆ.

ಕಳೆದ ವಾರ, ಟ್ವಿಟರ್ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಸಾದ್ ಅವರ ಖಾತೆಗೆ ಪ್ರವೇಶಿಸದಂತೆ ನಿರ್ಬಂಧಿಸಿತ್ತು. ಇದು ಸ್ಥಳೀಯ ಕಾನೂನುಗಳನ್ನು ಪಾಲಿಸದ ಕಾರಣ ದಾಳಿಗೆ ಒಳಗಾಗಿದ್ದ ಟ್ವಿಟರ್ ಸರ್ಕಾರದ ಜೊತೆಗಿನ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿತ್ತು. ಅಮೆರಿಕ ಡಿಜಿಟಲ್ ಮಿಲೇನಿಯಮ್ ಕಾಫಿ ರೈಟ್ ಹಕ್ಕನ್ನು ಅವರು ಉಲ್ಲಂಘಿಸಿದ್ದಾರೆ ಎಂದು ಒಂದು ಗಂಟೆಯವರೆಗೂ ಪ್ರಸಾದ್ ಅವರ ಖಾತೆಯನ್ನು ಟ್ವಿಟರ್ ನಿರ್ಬಂಧಿಸಿತ್ತು.

ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಹೊಸ ಐಟಿ ನಿಯಮಗಳನ್ನು ಉಲ್ಲಂಘಿಸಿದೆ. ಅದು ಖಾತೆ ಬ್ಲಾಕ್ ಮಾಡುವ ಮುನ್ನ ನೋಟಿಸ್ ನೀಡಬೇಕಿತ್ತು ಎಂದು ರವಿಶಂಕರ್ ಪ್ರಸಾದ್ ಹೇಳಿದ್ದರು. ಪ್ರಸಾದ್ ಈ ಸಮಸ್ಯೆಯನ್ನು ಹೇಳುತ್ತಿದ್ದಂತೆ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಕೂಡಾ ಇದೇ ರೀತಿಯ ಸಮಸ್ಯೆ ಎದುರಿಸುತ್ತಿರುವುದಾಗಿ ಟ್ವೀಟ್ ಮಾಡಿದ್ದರು. 

ಪ್ರಸಾದ್ ಅವರ ಟ್ವೀಟ್ ಅನ್ನು ಟ್ಯಾಗ್ ಮಾಡಿದ ತರೂರ್, "ರವಿ ಜೀ ನನಗೂ ಅದೇ ರೀತಿ ಆಗಿದೆ. ಸ್ಪಷ್ಟವಾಗಿ ಡಿಎಂಸಿಎ ಹೈಪರ್ಆಕ್ಟಿವ್ ಆಗುತ್ತಿದೆ. ಅವರ ಟ್ವೀಟ್‌ಗಳಲ್ಲಿ ಒಂದನ್ನು ಟ್ವಿಟ್ಟರ್ ಅಳಿಸಿದೆ ಏಕೆಂದರೆ ಅದರ ವೀಡಿಯೊದಲ್ಲಿ ಹಕ್ಕುಸ್ವಾಮ್ಯವುಳ್ಳ  ಬೋನಿ ಎಂ ಹಾಡು "ರಾಸ್‌ಪುಟಿನ್" ಸೇರಿದೆ. ಒಂದು ಪ್ರಕ್ರಿಯೆಯ ನಂತರ, ಖಾತೆಯನ್ನು ಅನ್ ಲಾಕ್  ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದರು.

ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿ ಮುಖ್ಯಸ್ಥನಾಗಿ ರವಿಶಂಕರ್ ಪ್ರಸಾದ್ ಮತ್ತು ತಮ್ಮ ಖಾತೆಗಳ ಲಾಕ್ ಬಗ್ಗೆ ಟ್ವಿಟರ್ ನಿಂದ ವಿವರಣೆ ಕೇಳುವುದಾಗಿ ಶಶಿ ತರೂರ್ ಹೇಳಿಕೆ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com