ಅಸ್ಸಾಂ: ಕಂದಕಕ್ಕೆ ಉರುಳಿದ ಟ್ರಕ್, ಮೂವರು ಭಾರತೀಯ ಯೋಧರು ಸಾವು
ಪೂರ್ವ ಸಿಕ್ಕಿಂನಲ್ಲಿ ಪ್ರಯಾಣಿಸುತ್ತಿದ್ದ ಟ್ರಕ್ ಕಂದಕಕ್ಕೆ ಬಿದ್ದು ಮೂವರು ಭಾರತೀಯ ಯೋಧರು ಸಾವನ್ನಪ್ಪಿದ್ದು ಇತರ ಮೂವರು ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Published: 30th June 2021 08:27 PM | Last Updated: 30th June 2021 08:27 PM | A+A A-

ಯೋಧ ಸಾವಿನ(ಸಾಂದರ್ಭಿಕ ಚಿತ್ರ)
ಗ್ಯಾಂಗ್ಟಾಕ್: ಪೂರ್ವ ಸಿಕ್ಕಿಂನಲ್ಲಿ ಪ್ರಯಾಣಿಸುತ್ತಿದ್ದ ಟ್ರಕ್ ಕಂದಕಕ್ಕೆ ಬಿದ್ದು ಮೂವರು ಭಾರತೀಯ ಯೋಧರು ಸಾವನ್ನಪ್ಪಿದ್ದು ಇತರ ಮೂವರು ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯೂ ಜವಾಹರ್ ಲಾಲ್ ನೆಹರು ರಸ್ತೆಯ 6ನೇ ಮೈಲಿನಲ್ಲಿ ಈ ಅಪಘಾತ ಸಂಭವಿಸಿದ್ದು, ಭಾರತ-ಚೀನಾ ಗಡಿಯ ಸಮೀಪವಿರುವ ನಾಥುಲಾವನ್ನು ಸಂಪರ್ಕಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಮಾವೂನ್ ರೆಜಿಮೆಂಟ್‌ನ ಆರು ಜನ ಯೋಧರು ಗ್ಯಾಂಗ್‌ಟಾಕ್ ಕಡೆಗೆ ಪ್ರಯಾಣಿಸುತ್ತಿದ್ದಾಗ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ 600 ಅಡಿಗಳಷ್ಟು ಆಳ ಕಂದಕಕ್ಕೆ ಬಿದ್ದಿದ್ದು ಚಾಲಕ ಮತ್ತು ಇತರ ಇಬ್ಬರು ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.
ಗಂಭೀರವಾಗಿ ಗಾಯಗೊಂಡಿರುವ ಮೂವರು ಯೋಧರನ್ನು ಗ್ಯಾಂಗ್ಟಾಕ್‌ನ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಅವರನ್ನು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ವೈದ್ಯಕೀಯ ಸಂಸ್ಥೆಗೆ ಸ್ಥಳಾಂತರಿಸಲಾಯಿತು ಎಂದರು.