2021 ರಲ್ಲಿ 14  ಉಡಾವಣೆ ಕಾರ್ಯಕ್ರಮ- ಸಿವನ್

ಈ ವರ್ಷ 14 ಉಡಾವಣಾ ಕಾರ್ಯಕ್ರಮಗಳನ್ನು ನಡೆಸಲು ಇಸ್ರೋ ಉದ್ದೇಶಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಕೆ.ಸಿವನ್ ಭಾನುವಾರ ತಿಳಿಸಿದ್ದಾರೆ. 

Published: 01st March 2021 12:33 AM  |   Last Updated: 01st March 2021 12:33 AM   |  A+A-


Sivan1

ಇಸ್ರೋ ಮುಖ್ಯಸ್ಥ ಸಿವನ್

Posted By : Nagaraja AB
Source : UNI

ಶ್ರೀಹರಿಕೋಟ: ಈ ವರ್ಷ 14 ಉಡಾವಣಾ ಕಾರ್ಯಕ್ರಮಗಳನ್ನು ನಡೆಸಲು ಇಸ್ರೋ ಉದ್ದೇಶಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಕೆ.ಸಿವನ್ ಭಾನುವಾರ ತಿಳಿಸಿದ್ದಾರೆ. 

ಪಿಎಸ್ಎಲ್ ವಿ-ಸಿ 51 ರಾಕೆಟ್ ನಿಂದ ಬ್ರೆಜಿಲ್ ನ ಅಮೆಜೋನಿಯಾ-1 ಉಪಗ್ರಹ ಹಾಗೂ ಇತರ 18 ಸಹ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದ ನಂತರ  ಇಲ್ಲಿನ ನಿಯಂತ್ರಣಾ ಕೇಂದ್ರದಲ್ಲಿ ವಿಜ್ಞಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಈ ವರ್ಷ ಕನಿಷ್ಠ 14 ಉಡಾವಣಾ ಕಾರ್ಯಕ್ರಮಗಳನ್ನು ಉದ್ದೇಶಿಸಲಾಗಿದೆ. ಇದರಲ್ಲಿ 6 ಉಪಗ್ರಹಗಳ ಉಡಾವಣೆ ಮತ್ತು ಮೊದಲ ಮಾನವರಹಿತ ಬಾಹ್ಯಾಕಾಶ ಕಾರ್ಯಕ್ರಮ ಸೇರಿದೆ ಎಂದು ಹೇಳಿದ್ದಾರೆ. 

ಈ ವರ್ಷದ ಅಂತ್ಯಕ್ಕೆ ಮಾನವ ರಹಿತ ಬಾಹ್ಯಾಕಾಶ ಕಾರ್ಯಕ್ರಮ ನಡೆಯಲಿದೆ. ಇದು ಮಾನವಸಹಿತ ಗಗನಯಾನ ಕಾರ್ಯಕ್ರಮಕ್ಕೆ ಮುನ್ನುಡಿಯಾಗಲಿದೆ. ಇವು ನಮ್ಮ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಮಗ್ನರಾಗಿದ್ದೇವೆ. ರಾಷ್ಟ್ರೀಯ ಬೇಡಿಕೆಗಳನುಸಾರ ಇಸ್ರೋ ತನ್ನ ಗುರಿಗಳನ್ನು ಮುಟ್ಟಲಿದೆ ಎಂದು ಅವರು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp