ಮೋದಿಯವರ ಮುಂದೆ ತಲೆಬಾಗುವ ಸಿಎಂ ಪಳನಿಸ್ವಾಮಿ ತಮಿಳು ನಾಡನ್ನು ಪ್ರತಿನಿಧಿಸುತ್ತಿಲ್ಲ: ರಾಹುಲ್ ಗಾಂಧಿ 

'ಒಂದು ದೇಶ, ಒಂದು ಸಂಸ್ಕೃತಿ, ಒಂದು ಇತಿಹಾಸ' ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮಿಳು ಭಾಷೆ ಲೆಕ್ಕಕ್ಕೆ ಇಲ್ಲವೇ, ತಮಿಳು ಭಾರತೀಯ ಭಾಷೆಯಲ್ಲವೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರೆ.

Published: 01st March 2021 12:11 PM  |   Last Updated: 01st March 2021 12:11 PM   |  A+A-


Rahul Gandhi at road show in Kanyakumari Tamil Nadu

ಕನ್ಯಾಕುಮಾರಿಯಲ್ಲಿ ರೋಡ್ ಶೋ ನಡೆಸಿದ ರಾಹುಲ್ ಗಾಂಧಿ

Posted By : Sumana Upadhyaya
Source : ANI

ಕನ್ಯಾಕುಮಾರಿ(ತಮಿಳು ನಾಡು): 'ಒಂದು ದೇಶ, ಒಂದು ಸಂಸ್ಕೃತಿ, ಒಂದು ಇತಿಹಾಸ' ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮಿಳು ಭಾಷೆ ಲೆಕ್ಕಕ್ಕೆ ಇಲ್ಲವೇ, ತಮಿಳು ಭಾರತೀಯ ಭಾಷೆಯಲ್ಲವೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರೆ.

ತಮಿಳು ನಾಡು ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕನ್ಯಾಕುಮಾರಿಯಲ್ಲಿಂದು ಸಾರ್ವಜನಿಕ ರೋಡ್ ಶೋನಲ್ಲಿ ಮಾತನಾಡಿದ ಅವರು, ತಮಿಳು ಇತಿಹಾಸ ಭಾರತೀಯರಿಗೆ ಸಂಬಂಧಪಟ್ಟದ್ದು ಅಲ್ಲವೇ, ತಮಿಳು ಸಂಸ್ಕೃತಿ ಭಾರತದ ಭಾಗವಲ್ಲವೇ, ಒಬ್ಬ ಭಾರತೀಯನಾಗಿ ತಮಿಳು ಸಂಸ್ಕೃತಿಯನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿದೆ, ಆರ್ ಎಸ್ಎಸ್ ತಮಿಳು ಸಂಸ್ಕೃತಿಯನ್ನು ಅವಮಾನಿಸಲು ಸಿಎಂ ಪಳನಿಸ್ವಾಮಿ ಬಿಡಬಾರದು ಎಂದರು.

ದೆಹಲಿಯಲ್ಲಿರುವ ಎನ್ ಡಿಎ ಸರ್ಕಾರ ತಮಿಳು ಸಂಸ್ಕೃತಿಯನ್ನು ಗೌರವಿಸುತ್ತಿಲ್ಲ. ಅವರು ಹೇಳಿದಂತೆ ಕೇಳುವ ಮುಖ್ಯಮಂತ್ರಿ ತಮಿಳು ನಾಡಿನಲ್ಲಿ ಈಗಿದ್ದಾರೆ. ಸಿಎಂ ಪಳನಿಸ್ವಾಮಿ ರಾಜ್ಯವನ್ನು ಪ್ರತಿನಿಧಿಸುತ್ತಿಲ್ಲ, ಮೋದಿಯವರು ಹೇಳಿದಂತೆ ಕೇಳುವ ಮುಖ್ಯಮಂತ್ರಿ ಅವರು, ಮೋದಿಯವರ ಮುಂದೆ ತಲೆಬಾಗುವ ವ್ಯಕ್ತಿ ತಮಿಳು ನಾಡನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಇಂದಿನ ರೋಡ್ ಶೋದಲ್ಲಿ ಸಿಎಂ ಪಳನಿಸ್ವಾಮಿ ವಿರುದ್ಧ ಹರಿಹಾಯ್ದರು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp