ಮೋದಿ ಹೊಗಳಿಕೆಗೆ ಆಜಾದ್ ವಿರುದ್ಧ ಕಾಂಗ್ರೆಸ್ ನಾಯಕರ ಕೆಂಗಣ್ಣು

ರಾಜ್ಯಸಭಾ ಸದಸ್ಯರ ಅವಧಿ ಪೂರ್ಣಗೊಳಿಸಿದ ಬಳಿಕ ಮೊದಲ ಬಾರಿಗೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದ ಗುಲಾಮ್ ನಬಿ ಆಜಾದ್, ತಮ್ಮ ತವರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. 

Published: 01st March 2021 12:01 PM  |   Last Updated: 01st March 2021 12:01 PM   |  A+A-


All is not well in Congress? Azad rapped for hailing PM, poking at Gandhis

ಮೋದಿ ಹೊಗಳಿಕೆಗೆ ಆಜಾದ್ ವಿರುದ್ಧ ಕಾಂಗ್ರೆಸ್ ನಾಯಕರ ಕೆಂಗಣ್ಣು

The New Indian Express

ಶ್ರೀನಗರ: ರಾಜ್ಯಸಭಾ ಸದಸ್ಯರ ಅವಧಿ ಪೂರ್ಣಗೊಳಿಸಿದ ಬಳಿಕ ಮೊದಲ ಬಾರಿಗೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದ ಗುಲಾಮ್ ನಬಿ ಆಜಾದ್, ತಮ್ಮ ತವರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು ಕಾಂಗ್ರೆಸ್ ನ ಹಲವು ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. 

ಕಾಂಗ್ರೆಸ್ ನ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದ ಜಿ-23 ಭಿನ್ನಮತೀಯ ನಾಯಕರು ಕಾಂಗ್ರೆಸ್ ದುರ್ಬಲವಾಗುತ್ತಿದೆ ಎಂದು ಹೇಳಿದ ಬೆನ್ನಲ್ಲೇ ಗುಲಾಂ ನಬಿ ಆಜಾದ್ ಜಮ್ಮು-ಕಾಶ್ಮೀರದಲ್ಲಿ ಪ್ರಧಾನಿ ಮೋದಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಅಷ್ಟೇ ಅಲ್ಲದೇ ಪರೋಕ್ಷವಾಗಿ ಕಾಂಗ್ರೆಸ್ ನಲ್ಲಿ ಗಾಂಧಿ ಪರಿವಾರದ ಕಾರ್ಯನಿರ್ವಹಣೆಯ ಕುರಿತು ಪ್ರಶ್ನೆಗಳನ್ನೆತ್ತಿದ್ದರು. 

" ಪ್ರಧಾನಿ ನರೇಂದ್ರ ಮೋದಿ ತಮ್ಮನವನ್ನು ಮರೆಮಾಚುವುದಿಲ್ಲ, ಆ ರೀತಿ ಮಾಡುವವರು ನೀರಿನ ಮೇಲಿನ ಗುಳ್ಳೆಯಲ್ಲಿ ಬದುಕುತ್ತಿರುತ್ತಾರೆ. ಹಲವು ನಾಯಕರಲ್ಲಿ ಹಲವಾರು ವಿಷಯಗಳನ್ನು ನಾನು ಇಷ್ಟಪಡುತ್ತೆನೆ, ರಾಜಕೀಯವಾಗಿ ನಾನು ಅವರನ್ನು ವಿರೋಧಿಸಬಹುದು, ಆದರೆ ಮೋದಿ ಎಂದಿಗೂ ತಮ್ಮ ನೈಜತೆಯನ್ನು ಮರೆಮಾಚುವುದಿಲ್ಲ. ನಮ್ಮ ಮೂಲಗಳ ಬಗ್ಗೆ ನಾವೆಂದಿಗೂ ಹೆಮ್ಮೆಯಿಂದ ಇರಬೇಕು" ಎಂದು ಆಜಾದ್ ಅಚ್ಚರಿಯ ಹೇಳಿಕೆ ನೀಡಿದ್ದರು.

ಆಜಾದ್ ಅವರ ಈ ಹೇಳಿಕೆ ಕಾಂಗ್ರೆಸ್ ನಲ್ಲೇ ಹಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಮೋದಿ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370ಯನ್ನು ರದ್ದುಗೊಳಿಸಿದ್ದನ್ನು ವಿರೋಧಿಸುತ್ತಿದ್ದ ಕಾಂಗ್ರೆಸ್ ನ ಹಲವು ನಾಯಕರು ಈಗ ಆಜಾದ್ ಅವರ ಹೇಳಿಕೆಯನ್ನೂ ವಿರೋಧಿಸಿದ್ದಾರೆ.

ತಮಿಳುನಾಡು ಕಾಂಗ್ರೆಸ್ ನ ಸಂಸದರಾಗಿರುವ ಜ್ಯೋತಿಮಣಿ ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, "ಗುಲಾಮ್ ನಬಿ ಆಜಾದ್ ಅವರೇ, ನಿಮಗೆ ಎಷ್ಟು ಬೇಕೋ ಅಷ್ಟೂ ಮೋದಿಯನ್ನು ಹೊಗಳಬಹುದು, ಆದರೆ ಕಾಶ್ಮೀರವನ್ನು ತುಂಡರಿಸಿದ್ದು ಮೋದಿ ಎಂಬುದನ್ನು ನೆನಪಿಡಿ, ನೀವು ಕಾಂಗ್ರೆಸ್ ಜೊತೆಗೆ ಇಷ್ಟು ದಶಕಗಳ ಕಾಲ ಏನಾಗಿದ್ದಿರೋ ಅದು ರಾಜ್ಯದ ಜನತೆಯಿಂದ ಆಗಿದ್ದೀರ" ಎಂದು ತಿರುಗೇಟು ನೀಡಿದ್ದಾರೆ. 

ಜಮ್ಮುವಿನ ಗುರ್ಜರ್ ದೇಶ್ ಚಾರಿಟಬಲ್ ಟ್ರಸ್ಟ್ ನಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಆಜಾದ್, ನಾನು 100 ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದೇನೆ, ಆದರೆ ನನ್ನ ಗ್ರಾಮಸ್ಥರೊಂದಿಗೆ ಕುಳಿತಾಗ ಅವರ ಬಟ್ಟೆ ಸ್ವಚ್ಛವಾಗಿಲ್ಲದೇ ಇರಬಹುದು ಆದರೆ ಆ ಭಾವವೇ ಬೇರೆಯಾಗಿರುತ್ತದೆ, ಅದಕ್ಕೆ ಸಾಟಿ ಇಲ್ಲ ಎಂದು ಹೇಳಿದ್ದರು. 


Stay up to date on all the latest ರಾಷ್ಟ್ರೀಯ news
Poll
Vidhana Saudha

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬೊಮ್ಮಾಯಿ ಸರ್ಕಾರ ವಿಫಲವಾಗಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp