ಭಾರತದ ಕೋವಿಡ್ ಲಸಿಕೆ ತಯಾರಕ ಸಂಸ್ಥೆಗಳನ್ನು ಟಾರ್ಗೆಟ್ ಮಾಡಿದ ಚೀನಾ ಹ್ಯಾಕರ್ ಗಳು!

ದೇಶದಲ್ಲಿನ ಎರಡು ಕೋವಿಡ್-19 ಲಸಿಕೆ ತಯಾರಕ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ತಂತ್ರಜ್ಞಾನ ವ್ಯವಸ್ಥೆಯನ್ನು ಹಾಳು  ಮಾಡಲು  ಚೀನಾದ ಸರ್ಕಾರಿ ಬೆಂಬಲಿತ ಹ್ಯಾಕರ್ ಗಳ ತಂಡ ಯತ್ನಿಸಿದೆ ಎಂದು ಸೈಬರ್ ಗುಪ್ತಚರ ಸಂಸ್ಥೆ ಸೈಫರ್ಮಾ ತಿಳಿಸಿದೆ.

Published: 01st March 2021 09:42 PM  |   Last Updated: 01st March 2021 09:42 PM   |  A+A-


Casual_Images1

ಸಾಂದರ್ಭಿಕ ಚಿತ್ರ

Posted By : Nagaraja AB
Source : PTI

ನವದೆಹಲಿ: ದೇಶದಲ್ಲಿನ ಎರಡು ಕೋವಿಡ್-19 ಲಸಿಕೆ ತಯಾರಕ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ತಂತ್ರಜ್ಞಾನ ವ್ಯವಸ್ಥೆಯನ್ನು ಹಾಳು  ಮಾಡಲು  ಚೀನಾದ ಸರ್ಕಾರಿ ಬೆಂಬಲಿತ ಹ್ಯಾಕರ್ ಗಳ ತಂಡ ಯತ್ನಿಸಿದೆ ಎಂದು ಸೈಬರ್ ಗುಪ್ತಚರ ಸಂಸ್ಥೆ ಸೈಫರ್ಮಾ ತಿಳಿಸಿದೆ.

ಭಾರತ ಹಾಗೂ ಚೀನಾ ಎರಡೂ ದೇಶಗಳು ಕೋವಿಡ್ ಲಸಿಕೆಗಳನ್ನು ಇತರ ರಾಷ್ಟ್ರಗಳಿಗೆ ಮಾರಾಟ ಹಾಗೂ ಕೊಡುಗೆಯಾಗಿ ನೀಡುತ್ತಿವೆ. ವಿಶ್ವದಾದ್ಯಂತ ಮಾರಾಟವಾಗುತ್ತಿರುವ ಎಲ್ಲ ಲಸಿಕೆಗಳಲ್ಲಿ ಶೇ. 60ಕ್ಕಿಂತಲೂ ಹೆಚ್ಚು ಭಾರತದ ಪಾಲಿದೆ. 

ಚೀನಾದ 'ಎಪಿಟಿ10' ಎಂಬ ಹ್ಯಾಕರ್ ಗಳ ತಂಡ ಹ್ಯಾಕ್ ಮಾಡಲು ಯತ್ನಿಸಿದೆ. ಭಾರತ್ ಬಯೋಟೆಕ್ ಮತ್ತು ಸೀರಂ ಇನ್ಸಿಟಿಟ್ಯೂಟ್ ಆಫ್ ಇಂಡಿಯಾದ ಐಟಿ ಮೂಲಸೌಕರ್ಯ, ಪೂರೈಕೆ ಸರಪಳಿ ಮಾಹಿತಿ ಕದಿಯಲು ಯತ್ನಿಸಿದ್ದು, ಕೆಲವು ಅಂಶಗಳನ್ನು ತಿಳಿದುಕೊಂಡಿದೆ ಎಂದು ಸಿಂಗಾಪುರ ಮತ್ತು ಟೋಕಿಯೊ ಮೂಲದ ಗೋಲ್ಡ್ ಮನ್ ಸ್ಯಾಕ್ಸ್ ಬೆಂಬಲಿತ ಸೈಫರ್ಮಾ ಹೇಳಿದೆ.

ಬೌದ್ದಿಕ ಆಸ್ತಿ ಕಳವು ಮತ್ತು ಭಾರತೀಯ ಔಷಧೀಯ ಕಂಪನಿಗಳ ವಿರುದ್ಧ ಸ್ಪರ್ಧಾತ್ಮಕ ಲಾಭ ಪಡೆಯುವ ನಿಟ್ಟಿನಲ್ಲಿ ಹ್ಯಾಕರ್ ಗಳ ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಎಂದು ಸೈಫರ್ಮಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ರಿತೀಶ್ ಹೇಳಿದ್ದಾರೆ. ಚೀನಾದ ವಿದೇಶಾಂಗ ಸಚಿವಾಲಯ ಈ ಕುರಿತು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp