60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ವಿತರಣೆಗೆ ನೋಂದಣಿಯಾಗುವುದು ಹೇಗೆ? ಇಲ್ಲಿದೆ ಸಂಪೂರ್ಣ ಪ್ರಕ್ರಿಯೆಯ ಮಾಹಿತಿ

ಮಾರಕ ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ಕೋವಿಡ್ ಲಸಿಕೆ ವಿತರಣಾ ಕಾರ್ಯಾಕ್ರಮದ ಮುಂದಿನ ಹಂತ ಇಂದಿನಿಂದ ಆರಂಭವಾಗಿದ್ದು, 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ವಿತರಣೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಈ ನೋಂದಣಿ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

Published: 01st March 2021 10:04 AM  |   Last Updated: 01st March 2021 10:04 AM   |  A+A-


COVID-19 vaccine

ಸಂಗ್ರಹ ಚಿತ್ರ

Posted By : Srinivasamurthy VN
Source : The New Indian Express

ನವದೆಹಲಿ: ಮಾರಕ ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ಕೋವಿಡ್ ಲಸಿಕೆ ವಿತರಣಾ ಕಾರ್ಯಾಕ್ರಮದ ಮುಂದಿನ ಹಂತ ಇಂದಿನಿಂದ ಆರಂಭವಾಗಿದ್ದು, 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ವಿತರಣೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಈ ನೋಂದಣಿ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಲಸಿಕೆ ಅಭಿಯಾನದ ಮುಂದಿನ ಹಂತದಲ್ಲಿ 60 ವರ್ಷ ದಾಟಿದವರು ಮತ್ತು 2022ರ ಜನವರಿ 1ಕ್ಕೆ 60 ವರ್ಷ ತುಂಬುವವರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಲು ಅರ್ಹರಾಗಿದ್ದಾರೆ. ಬೇರೆ ರೋಗಗಳನ್ನು ಹೊಂದಿರುವ, 2022ರ ಜನವರಿ 1ಕ್ಕೆ 45 ವರ್ಷ ತುಂಬುವವರು ಮತ್ತು ಈಗಾಗಲೇ 45 ದಾಟಿದವರು ಕೂಡ ನೋಂದಣಿಗೆ ಅರ್ಹರು. ಈ ಪೈಕಿ 20 ಅನಾರೋಗ್ಯಗಳನ್ನು ಆರೋಗ್ಯ ಸಚಿವಾಲಯವು ಪಟ್ಟಿ ಮಾಡಿದೆ. 

ನೋಂದಣಿ ಹೇಗೆ?
ಇನ್ನು ಕೊರೊನಾ ಲಸಿಕೆ ಪಡೆಯಲು ಮೊಬೈಲ್‌ ಮೂಲಕ ಮನೆಯಲ್ಲಿಯೇ ದಿನಾಂಕ ಮತ್ತು ಸಮಯ ನಿಗದಿಪಡಿಸಿಕೊಳ್ಳಬಹುದು. ಮೊದಲಾಗಿ www.cowin.gov.in ಗೆ ಹೋಗಿ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಬೇಕು. ಮೇಲೆ ತಿಳಿಸಿದ ಕೊವಿನ್‌ ವೆಬ್‌ಸೈಟ್‌ಗೆ ಹೋದಾಗ ಅಲ್ಲಿ ರಿಜಿಸ್ಟರ್‌ ಫಾರ್‌ ವ್ಯಾಕ್ಸಿನೇಶನ್‌ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ 'ಗೆಟ್‌ ಒಟಿಪಿ' ಪಟ್ಟಿ ಮೇಲೆ ಕ್ಲಿಕ್‌ ಮಾಡಬೇಕು. ಆ ಕೂಡಲೇ ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್‌ ಮೂಲಕ ಒಟಿಪಿ ಸಂಖ್ಯೆ ಬರುತ್ತದೆ. 

ಅದನ್ನು ದಾಖಲಿಸಿ ಅಲ್ಲಿ ಕಾಣಿಸುವ 'ವೆರಿಫೈ ಬಟನ್‌' ಕ್ಲಿಕ್‌ ಮಾಡಬೇಕು. ಒಟಿಪಿ ಸರಿಯಾಗಿ ನಮೂದಿಸಿದ ಬಳಿಕ ನೋಂದಣಿ ಪುಟ ತೆರೆದುಕೊಳ್ಳುತ್ತದೆ. ಬಳಿಕ ಅಲ್ಲಿ ನಿಮ್ಮ ಕುರಿತು ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಬೇಕು. (ಮೊದಲಾಗಿ ಯಾವ ಫೋಟೊ ಐಡಿ ಪ್ರೂಫ್ ಎಂಬುದನ್ನು ತಿಳಿಸಬೇಕು. ಉದಾ: ಡ್ರೈವಿಂಗ್‌ ಲೈಸನ್ಸ್‌, ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಇತ್ಯಾದಿ. ಅನಂತರ ಕಾರ್ಡ್‌ನ ಸಂಖ್ಯೆ ನಮೂದಿಸಬೇಕು.

ಬಳಿಕ ಕಾರ್ಡ್‌ನಲ್ಲಿ ಇರುವ ರೀತಿಯಲ್ಲಿಯೇ ಹೆಸರು, ಹುಟ್ಟಿದ ದಿನಾಂಕ, ಲಿಂಗ, ಈಗ ಲಸಿಕೆ ಪಡೆಯಲು ಅರ್ಹತೆಯ ಕುರಿತು ಮಾಹಿತಿ ನೀಡಬೇಕು. ಅಂದರೆ 60 ವರ್ಷ ಮೇಲ್ಪಟ್ಟವರು, ಜತೆಗೆ ಗಂಭೀರ ಅನಾರೋಗ್ಯ ಸಮಸ್ಯೆ ಹೊಂದಿರುವ 45ರಿಂದ 59 ವರ್ಷದೊಳಗಿನ ನಾಗರಿಕರು, ಪಟ್ಟಿ ಮಾಡಿರುವ 20 ರೀತಿಯ ಅನಾರೋಗ್ಯ ಸಮಸ್ಯೆ ಇರುವವರು. ಹೃದಯ ಸಮಸ್ಯೆ, ತೀವ್ರ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಗೆ ಒಟ್ಟಾಗಿ ಚಿಕಿತ್ಸೆ ಪಡೆಯುತ್ತಿರುವವರು, ಪಾರ್ಶ್ವವಾಯು ಸಂಬಂಧಿ ಕಾಯಿಲೆ ಉಳ್ಳವರು, 10 ವರ್ಷಕ್ಕಿಂತ ಹೆಚ್ಚು ಕಾಲದಿಂದ ಮಧುಮೇಹದಿಂದ ಬಳಲುತ್ತಿರುವವರು, ಕಿಡ್ನಿ, ಲಿವರ್‌, ಇತರ ಕ್ಯಾನ್ಸರ್‌ ಕಾಯಿಲೆ ಉಳ್ಳವರು, ಎಚ್‌ಐವಿ ಸೋಂಕಿತರು ತಮ್ಮ ಮಾಹಿತಿ ನೀಡಬೇಕು. ಇದಾದ ಬಳಿಕ ಕೆಳಬದಿಯಲ್ಲಿರುವ ರಿಜಿಸ್ಟರ್‌ ಬಟನ್‌ ಕ್ಲಿಕ್‌ ಮಾಡಿದಾಗ ನಿಮ್ಮ ನೋಂದಣಿ ಖಚಿತವಾಗಿರುವ ಕುರಿತು ಮಾಹಿತಿ ಬರುತ್ತದೆ.

ಒಂದು ಮೊಬೈಲ್‌ನಿಂದ ನಾಲ್ಕು ಸದಸ್ಯರ ನೋಂದಣಿ ಸಾಧ್ಯ
ಒಂದು ಬಾರಿ ಓರ್ವ ಮೊಬೈಲ್‌ನಲ್ಲಿ ನೋಂದಣಿ ಮಾಡಿಸಿದ ಬಳಿಕ ಇತರ ಮೂವರನ್ನು ಇದೇ ಮೊಬೈಲ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಅಲ್ಲಿ ಅಕೌಂಟ್‌ ಡಿಟೇಲ್ಸ್‌ ಎಂಬ ಪಟ್ಟಿ ಕಾಣಿಸುವುದು. ಅದರಲ್ಲಿ ಇತರೆ ಮೂವರ ಮಾಹಿತಿ (ಈ ಮೊದಲು ನೀಡಿದಂತೆಯೇ ಎಲ್ಲ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಮೊಬೈಲ್‌ ನಂಬರ್‌ ಹೊರತುಪಡಿಸಿ ಇತರ ಎಲ್ಲ ಮಾಹಿತಿಗಳು ಪ್ರತ್ಯೇಕವಾಗಿರುತ್ತದೆ) ನೀಡಿ ಹೆಸರು ನೋಂದಾಯಿಸಬಹುದು. ಇಷ್ಟು ಮಾಹಿತಿ ನೀಡಿದ ಬಳಿಕ ಮತ್ತೂಮ್ಮೆ ನೋಂದಣಿ ಖಚಿತವಾದ ಮಾಹಿತಿ ಬರುತ್ತದೆ. ಅಗತ್ಯ ಬಿದ್ದರೆ ನೋಂದಣಿಯನ್ನು ಲಸಿಕೆ ಪಡೆಯುವ ಹಿಂದಿನ ದಿನದೊಳಗೆ ಡಿಲೀಟ್‌ ಮಾಡುವುದಕ್ಕೂ ಅವಕಾಶವಿರುತ್ತದೆ.

ದಿನಾಂಕ ಮತ್ತು ಸಮಯ ನಿಗದಿ
ಅಕೌಂಟ್‌ ಡಿಟೇಲ್‌ ಪೇಜ್‌ಗೆ ಹೋಗಿ ಅಲ್ಲಿ ನಿಮ್ಮ ಹೆಸರಿನ ಎದುರು ಇರುವ ಶೆಡ್ನೂಲ್‌ ಕೊಂಡಿಗೆ ಕ್ಲಿಕ್‌ ಮಾಡಿದಾಗ ಬುಕ್‌ ಅಪಾಯಿಂಟ್‌ಮೆಂಟ್‌ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಬ್ಲಾಕ್‌, ಪಿನ್‌ಕೋಡ್‌ ನಮೂದಿಸಿದಾಗ ನಿಮ್ಮ ಹತ್ತಿರದ ಕೇಂದ್ರಗಳಿರುವ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹತ್ತಿರದ ಕೇಂದ್ರವನ್ನು ಆಯ್ಕೆ ಮಾಡಿದಾಗ ಅಲ್ಲಿ ಲಭ್ಯವಿರುವ ದಿನಾಂಕ ಕಾಣಿಸುತ್ತದೆ. ಇವುಗಳಲ್ಲಿ ನಿಮಗೆ ಅನುಕೂಲವಾದ ದಿನಾಂಕವನ್ನು ಆಯ್ಕೆ ಮಾಡಿಕೊಂಡು “ಬುಕ್‌’ ಬಟನ್‌ ಕ್ಲಿಕ್‌ ಮಾಡಿದರೆ ನೋಂದಣಿ ಪೂರ್ಣವಾದ ಮಾಹಿತಿ ಲಭ್ಯವಾಗುವುದು. 

ಅಲ್ಲಿರುವ ನಿಮ್ಮ ಹೆಸರು, ಕೇಂದ್ರ ಮೊದಲಾದ ಮಾಹಿತಿಗಳನ್ನು ಗಮನಿಸಿ ಎಲ್ಲವೂ ಸರಿಯಾಗಿದ್ದಲ್ಲಿ ಕನ್ಫರ್ಮ್ ಬಟನ್‌ ಕ್ಲಿಕ್‌ ಮಾಡಿದರೆ “ಅಪಾಯಿಂಟ್‌ಮೆಂಟ್‌ ಸಕ್ಸಸ್‌ಫ‌ುಲ್‌’ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಇದನ್ನು ಡೌನ್‌ಲೋಡ್‌ ಮಾಡಿಟ್ಟು ಲಸಿಕೆ ಪಡೆಯುವ ದಿನ ನೀವು ನೋಂದಾಯಿಸಿದ ಕೇಂದ್ರಕ್ಕೆ ಹೋಗಿ ತೋರಿಸಿದರೆ ನಿಮಗೆ ಲಸಿಕೆ ನೀಡಲಾಗುತ್ತದೆ. 
 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp