ಕೋವಿನ್ ಆ್ಯಪ್ ಆಡಳಿತಕ್ಕೆ, ಲಸಿಕೆ ನೋಂದಣಿಗೆ ವೆಬ್ ಸೈಟ್ ಬಳಸಿ: ಕೇಂದ್ರ ಆರೋಗ್ಯ ಸಚಿವಾಲಯ

ಮೂರನೇ ಹಂತದ ಕೊರೋನಾ ವ್ಯಾಕ್ಸಿನೇಷನ್ ಇಂದಿನಿಂದ ಆರಂಭವಾಗಿದ್ದು, ಲಸಿಕೆಗಾಗಿ ನೋಂದಣಿ ಮತ್ತು ಅಪಾಯಿಂಟ್ಮೆಂಟ್ ಕಾಯ್ದಿರಿಸಲು ಕೋವಿನ್ ಆ್ಯಪ್ ಬಳಸಬೇಡಿ. ಆಡಳಿತಗಾರರಿಗೆ ಮಾತ್ರ...

Published: 01st March 2021 03:55 PM  |   Last Updated: 01st March 2021 03:55 PM   |  A+A-


covid-18-1

ಸಾಂದರ್ಭಿಕ ಚಿತ್ರ

Posted By : Lingaraj Badiger
Source : ANI

ನವದೆಹಲಿ: ಮೂರನೇ ಹಂತದ ಕೊರೋನಾ ವ್ಯಾಕ್ಸಿನೇಷನ್ ಇಂದಿನಿಂದ ಆರಂಭವಾಗಿದ್ದು, ಲಸಿಕೆಗಾಗಿ ನೋಂದಣಿ ಮತ್ತು ಅಪಾಯಿಂಟ್ಮೆಂಟ್ ಕಾಯ್ದಿರಿಸಲು ಕೋವಿನ್ ಆ್ಯಪ್ ಬಳಸಬೇಡಿ. ಆಡಳಿತಗಾರರಿಗೆ ಮಾತ್ರ ಈ ಮೊಬೈಲ್ ಆ್ಯಪ್ ಬಳಸಲು ಅವಕಾಶ ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಸ್ಪಷ್ಟಪಡಿಸಿದೆ.

ಫಲಾನುಭವಿಗಳು ಲಸಿಕೆಗಾಗಿ ನೋಂದಣಿ ಮಾಡಿಸಲು www.cowin.gov.in ವೆಬ್ ತಾಣವನ್ನು ಪ್ರವೇಶಿಸಬೇಕಾಗುತ್ತದೆ. ಅಲ್ಲಿ ಅರ್ಹ ಫಲಾನುಭವಿಗಳು ತಮ್ಮ ಮೊಬೈಲ್ ನಂಬರ್ ಹಾಗೂ ಆಧಾರ್ ನಂಬರ್ ಅನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಲಸಿಕೆಗಾಗಿ ಕೋವಿನ್ ಮೊಬೈಲ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂಬ ಸಂದೇಶಗಳು ಮಾಧ್ಯಮಗಳಲ್ಲಿ ಬಿತ್ತರವಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.

ವೆಬ್ ಸೈಟ್​ನಲ್ಲಿ ನೀವು ನೋಂದಣಿ ಮಾಡಲು ಆಗದೇ ಹೋದರೆ ಸ್ವತಃ ಲಸಿಕಾ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಸಬಹುದು. ಅದಕ್ಕೆ ಆಧಾರ್ ಕಾರ್ಡ್ ಅಥವಾ ಬೇರೆ ನಿರ್ದಿಷ್ಟ ಗುರುತು ಚೀಟಿ ಅನ್ನು ತೆಗೆದುಕೊಂಡು ಹೋಗಬೇಕು. ಇನ್ನು, ಲಸಿಕೆ ಹಾಕಿಸಿಕೊಳ್ಳುವಾಗಲೂ ಆಧಾರ್ ಕಾರ್ಡ್ ಹಾಗೂ ಅಗತ್ಯಬಿದ್ದರೆ ವೈದ್ಯರ ಪ್ರಮಾಣಪತ್ರವನ್ನೂ ತೆಗೆದುಕೊಂಡು ಹೋಗಬೇಕು ಎಂದು ಕೇಂದ್ರ ಹೇಳಿದೆ.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp