ಸಂಸ್ಕರಿಸಿದ ಆಹಾರಕ್ಕಾಗಿ ಭಾರತದ ಕೃಷಿ ಮಾರುಕಟ್ಟೆಯನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಬೇಕು: ಪ್ರಧಾನಿ ನರೇಂದ್ರ ಮೋದಿ 

ಕೃಷಿ ಚಟುವಟಿಕೆಗಳನ್ನು ವಿಸ್ತರಿಸಲು ರೈತರು ಭತ್ತ ಮತ್ತು ಗೋಧಿಯನ್ನು ಮೀರಿ ಹೆಚ್ಚಿನ ಬೆಳೆ ಬೆಳೆಯುವ ಅವಕಾಶವನ್ನು ನೀಡಲು ಭಾರತಕ್ಕೆ ಆಹಾರ ಸಂಸ್ಕರಣೆ ಕ್ರಾಂತಿಯ ಅಗತ್ಯವಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

Published: 01st March 2021 12:57 PM  |   Last Updated: 01st March 2021 01:08 PM   |  A+A-


PM Narendra Modi

ಪ್ರಧಾನ ಮಂತ್ರಿ ನರೇಂದ್ರ ಮೋದಿ

Posted By : Sumana Upadhyaya
Source : PTI

ನವದೆಹಲಿ: ಕೃಷಿ ಚಟುವಟಿಕೆಗಳನ್ನು ವಿಸ್ತರಿಸಲು ರೈತರು ಭತ್ತ ಮತ್ತು ಗೋಧಿಯನ್ನು ಮೀರಿ ಹೆಚ್ಚಿನ ಬೆಳೆ ಬೆಳೆಯುವ ಅವಕಾಶವನ್ನು ನೀಡಲು ಭಾರತಕ್ಕೆ ಆಹಾರ ಸಂಸ್ಕರಣೆ ಕ್ರಾಂತಿಯ ಅಗತ್ಯವಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಸಾವಯವ ಆಹಾರಗಳನ್ನು ಮತ್ತು ಸಲಾಡ್ ಸಂಬಂಧಿತ ತರಕಾರಿಗಳನ್ನು ಜನರು ಹೆಚ್ಚೆಚ್ಚು ಬಳಕೆ ಮಾಡಬೇಕು ಎಂದು ಹೇಳಿದ ಪ್ರಧಾನಿ, ರೈತರು ಕೇವಲ ಅಕ್ಕಿ ಮತ್ತು ಗೋಧಿ ಬೆಳೆಯುವಿಕೆಗೆ ಮಾತ್ರ ಸೀಮಿತವಾಗಬಾರದು, ಹೆಚ್ಚೆಚ್ಚು ಬೆಳೆ ಬೆಳೆಯುವ ಆಯ್ಕೆಗಳನ್ನು ಅವರಿಗೆ ನೀಡಬೇಕು ಎಂದರು.

ಕೃಷಿ ವಲಯದಲ್ಲಿ ಬಜೆಟ್ ನ್ನು ಜಾರಿಗೊಳಿಸುವ ಸಂಬಂಧ ನಡೆದ ವೆಬಿನಾರ್ ನಲ್ಲಿ ಮಾತನಾಡಿದ ಅವರು, 21 ನೇ ಶತಮಾನದ ಭಾರತಕ್ಕೆ ಸುಗ್ಗಿಯ ನಂತರದ ಅಥವಾ ಆಹಾರ ಸಂಸ್ಕರಣೆಯ ಅಗತ್ಯವಿದೆ, ಇದನ್ನು ಭಾರತದಲ್ಲಿ ಎರಡು ಮೂರು ದಶಕಗಳ ಹಿಂದೆಯೇ ಮಾಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.

ಇಂದು ಕೃಷಿಯ ಪ್ರತಿ ವಲಯದಲ್ಲಿ ಸಂಸ್ಕರಣೆ ಬಗ್ಗೆ ಗಮನ ನೀಡಬೇಕಾಗುತ್ತದೆ. ಪ್ರತಿ ಆಹಾರ, ತರಕಾರಿ, ಹಣ್ಣು, ಮೀನು ಎಲ್ಲವನ್ನೂ ಸಂಸ್ಕರಣೆ ಮಾಡಬೇಕಾಗುತ್ತದೆ. ಹಳ್ಳಿಗಳಲ್ಲಿ ರೈತರಿಗೆ ತಾವು ಬೆಳೆದ ಬೆಳೆಗಳನ್ನು ಸಂಸ್ಕರಿಸುವ ಆಧುನಿಕ ಸಂಗ್ರಹಾಗಾರ ಸೌಲಭ್ಯ ಸಿಗಬೇಕು ಎಂದರು.

ಕೃಷಿ ವಲಯದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಖಾಸಗಿ ವಲಯಗಳ ಸಹಭಾಗಿತ್ವಕ್ಕೆ ಪ್ರಧಾನಿ ಒಲವು ತೋರಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದ್ದು ಸಾರ್ವಜನಿಕ ವಲಯ. ಇದರಲ್ಲಿ ಖಾಸಗಿ ವಲಯದ ಹೆಚ್ಚಿನ ಭಾಗವಹಿಸುವಿಕೆಯ ಸಮಯ ಬಂದಿದೆ ಎಂದರು.

21 ನೇ ಶತಮಾನದಲ್ಲಿ ಭಾರತಕ್ಕೆ ಕೃಷಿ ಉತ್ಪಾದನೆ ಹೆಚ್ಚುತ್ತಿರುವ ಮಧ್ಯೆ ಸುಗ್ಗಿಯ ನಂತರದ ಅಥವಾ ಆಹಾರ ಸಂಸ್ಕರಣಾ ಕ್ರಾಂತಿ ಮತ್ತು ಮೌಲ್ಯವರ್ಧನೆ ಅಗತ್ಯವಿದೆ. ಇದನ್ನು 2-3 ದಶಕಗಳ ಹಿಂದೆಯೇ ಮಾಡಿದ್ದರೆ ದೇಶಕ್ಕೆ ಒಳ್ಳೆಯದಿತ್ತು ಎಂದರು.

ಸರ್ಕಾರವು ಕೃಷಿ ಸಾಲ ಗುರಿಯನ್ನು 16.50 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆ - ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಗ್ರಾಮೀಣ ಮೂಲಸೌಕರ್ಯ ನಿಧಿಯನ್ನು 40,000 ಕೋಟಿ ರೂ. ಸೂಕ್ಷ್ಮ ನೀರಾವರಿ ನಿಧಿ ದ್ವಿಗುಣಗೊಂಡಿದೆ ಎಂದು ಪ್ರಧಾನಿ ಹೇಳಿದರು. 


Stay up to date on all the latest ರಾಷ್ಟ್ರೀಯ news
Poll
Modi-Subramanian ಏwamy

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.


Result
ಹೌದು, ಅದು ನಿಜ.
ಇಲ್ಲ, ಇದು ಒಂದು ಉತ್ಪ್ರೇಕ್ಷೆ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp