
ಕೊರೋನಾ ವೈರಸ್ ಪರೀಕ್ಷೆ
ನವದೆಹಲಿ: 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 15,510 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.10 ಕೋಟಿ ಗಡಿದಾಟಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 15,510 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 1,10,96,731ಕ್ಕೆ ಏರಿಕೆಯಾಗಿದೆ. ಇನ್ನು ನಿನ್ನೆ ದೇಶಾದ್ಯಂತ 11,288 ಸೋಂಕಿತರು ಗುಣಮುಖರಾಗಿದ್ದು. ಆ ಮೂಲಕ ಸೋಂಕಿನಿಂದ ಗುಣಮುಖರಾದವರ ಒಟ್ಟಾರೆ ಸಂಖ್ಯೆ 1,07,86,457 ಕ್ಕೆ ಏರಿಕೆಯಾಗಿದೆ.
ಪ್ರಸ್ತುತ ದೇಶದಲ್ಲಿ1,68,627 ಸಕ್ರಿಯ ಪ್ರಕರಣಗಳು ಮಾತ್ರ ಇವೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 106 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇದರೊಂದಿಗೆ ದೇಶದಲ್ಲಿ ಕೊರೋನಾಗೆ ಬಲಿಯಾದ ಸೋಂಕಿತರ ಸಂಖ್ಯೆ 1,57,157ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
India reports 15,510 new #COVID19 cases, 11,288 discharges and 106 deaths in the last 24 hours, as per the Union Health Ministry
— ANI (@ANI) March 1, 2021
Total cases: 1,10,96,731
Total discharges: 1,07,86,457
Death toll: 1,57,157
Active cases: 1,68,627
Total Vaccination: 1,43,01,266 pic.twitter.com/uvmVu7hArC
24 ಗಂಟೆಗಳಲ್ಲಿ 6,27,668 ಕೋವಿಡ್-19 ಪರೀಕ್ಷೆ: ಐಸಿಎಂಆರ್
ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನ ಕಾರಣಕ್ಕೆ 6,27,668 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಆ ಮೂಲಕ ದೇಶದಲ್ಲಿ ಈ ವರೆಗೂ ಅಂದರೆ ಫೆ.28ರವರೆಗೂ 21,68,58,774ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಹಿತಿ ನೀಡಿದೆ.
ಅಂತೆಯೇ ದೇಶಾದ್ಯಂತ ಕೋವಿಡ್ ಲಸಿಕೆ ಪಡೆದವರ ಸಂಖ್ಯೆ 1,43,01,266ಕ್ಕೆ ಏರಿಕೆಯಾಗಿದೆ.
A total of 21,68,58,774 samples tested for #COVID19 up to 28th February. Of these, 6,27,668 samples were tested yesterday: Indian Council of Medical Research pic.twitter.com/MUvWP8gTde
— ANI (@ANI) March 1, 2021