ರಾಂಚಿ: 68 ಕಿ.ಮೀ ಬೈಕ್ ಚಲಾಯಿಸಿ ಕೋವಿಡ್ -19 ಲಸಿಕೆ ಪಡೆದ 80 ವರ್ಷದ ವೃದ್ಧ!
ಇಂದಿನಿಂದ ದೇಶಾದ್ಯಂತ ಆರಂಭವಾದ ಎರಡನೇ ಹಂತದ ಕೋವಿಡ್ ಲಸಿಕೆ ವಿತರಣೆಯ ಕಾರ್ಯಕ್ರಮದ ಮೊದಲ ದಿನದಂದು 68 ವರ್ಷದ ವ್ಯಕ್ತಿಯೋರ್ವರು 68 ಕಿ.ಮೀ. ಬೈಕ್ ಚಲಾಯಿಸಿಕೊಂಡು ಹೋಗಿ ಲಸಿಕೆ ಪಡೆದುಕೊಡಿದ್ದಾರೆ.
Published: 01st March 2021 10:26 PM | Last Updated: 01st March 2021 10:26 PM | A+A A-

80 ವರ್ಷದ ವೃದ್ಧ ಕಿಶೋರ್ ಸಾಹು
ರಾಂಚಿ: ಇಂದಿನಿಂದ ದೇಶಾದ್ಯಂತ ಆರಂಭವಾದ ಎರಡನೇ ಹಂತದ ಕೋವಿಡ್ ಲಸಿಕೆ ವಿತರಣೆಯ ಕಾರ್ಯಕ್ರಮದ ಮೊದಲ ದಿನದಂದು 68 ವರ್ಷದ ವ್ಯಕ್ತಿಯೋರ್ವರು 68 ಕಿ.ಮೀ. ಬೈಕ್ ಚಲಾಯಿಸಿಕೊಂಡು ಹೋಗಿ ಲಸಿಕೆ ಪಡೆದುಕೊಡಿದ್ದಾರೆ.
80 ವರ್ಷದ ನಿವೃತ್ತ ಶಾಲಾ ಶಿಕ್ಷಕ ರಾಮ್ ಕಿಶೋರ್ ಸಾಹು, ತನ್ನ ಹುಟ್ಟೂರು ಸರ್ಜಮ್ಡಿಹ್ ನಿಂದ ಬೈಕ್ ನಲ್ಲಿ ತೆರಳಿ ಲಸಿಕೆ ಪಡೆದಿದ್ದಾರೆ. ಲಸಿಕೆ ಸುರಕ್ಷಿತವಾಗಿದ್ದು, ಸಾರ್ವಜನಿಕರು ಯಾವುದೇ ಭಯವಿಲ್ಲದೆ ಮುಂದೆ ಬಂದು ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ತನ್ನ ಪ್ರದೇಶದಲ್ಲಿ ಯಾವುದೇ ಲಸಿಕಾ ಕೇಂದ್ರಗಳು ಇಲ್ಲದಿದ್ದರಿಂದ ರಾಂಚಿಯಲ್ಲಿ ಲಸಿಕೆ ಪಡೆಯಲು ನಿರ್ಧರಿಸಿದೆ. ನಂತರ ಬೈಕ್ ಸವಾರಿ ಮಾಡಿಕೊಂಡು ಸರ್ದಾರ್ ಆಸ್ಪತ್ರೆ ತೆರಳಿದ್ದಾರೆ. ಬೆಳಗ್ಗೆ 9 ಗಂಟೆಗೆ ಆಸ್ಪತ್ರೆಗೆ ತೆರಳಿದ ನಂತರ ಲಸಿಕೆ ಪಡೆಯಲು ಸುಮಾರು 2 ಗಂಟೆ ಕಳೆದೆ. ಲಸಿಕೆ ಪಡೆದ ನಂತರ ಅದು ಸುರಕ್ಷಿತವಾಗಿದ್ದು, ಅದನ್ನು ಪಡೆದ ನಂತರ ಯಾವುದೇ ಸಮಸ್ಯೆಯಾಗಿಲ್ಲ ಎಂದು ಸಾಹು ತಿಳಿಸಿದರು.
ತಾನೂ ಯಾವುದೇ ರೀತಿಯ ಅನಾರೋಗ್ಯದಿಂದ ಬಳಲುತ್ತಿಲ್ಲ. ಆದಾಗ್ಯೂ, ಕೋವಿಡ್ ಲಸಿಕೆ ಪಡೆದಿದ್ದೇನೆ. ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಎಲ್ಲರೂ ಮುಂದೆ ಬಂದಿದ್ದು, ಲಸಿಕೆ ಪಡೆದುಕೊಳ್ಳುವಂತೆ ತಿಳಿಸಿದರು. ಸಾಹು ಅವರು ಸೇವೆಯಲ್ಲಿರುವಾಗ ರಾಷ್ಟ್ರಪ್ರಶಸ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.