ವಾರ್ತಾ ಶಾಖೆಯ ಪ್ರಧಾನ ಮಹಾ ನಿರ್ದೇಶಕರಾಗಿ ಜೈದೀಪ್ ಭಟ್ನಾಗರ್ ಅಧಿಕಾರ ಸ್ವೀಕಾರ

ಭಾರತ ಸರ್ಕಾರದ ವಾರ್ತಾ ಶಾಖೆಯ ಪ್ರಧಾನ ಮಹಾ ನಿರ್ದೇಶಕರಾಗಿ ಜೈದೀಪ್ ಭಟ್ನಾಗರ್ ಅಧಿಕಾರ ವಹಿಸಿಕೊಂಡರು.

Published: 01st March 2021 08:37 PM  |   Last Updated: 01st March 2021 08:37 PM   |  A+A-


Jaideep Bhatnagar

ಜೈದೀಪ್ ಭಟ್ನಾಗರ್

Posted By : Vishwanath S
Source : UNI

ನವದೆಹಲಿ: ಭಾರತ ಸರ್ಕಾರದ ವಾರ್ತಾ ಶಾಖೆಯ ಪ್ರಧಾನ ಮಹಾ ನಿರ್ದೇಶಕರಾಗಿ ಜೈದೀಪ್ ಭಟ್ನಾಗರ್ ಅಧಿಕಾರ ವಹಿಸಿಕೊಂಡರು.

ಭಟ್ನಾಗರ್ ಅವರು 1986ರ ತಂಡದ ಭಾರತೀಯ ಸಮಾಚಾರ ಸೇವೆಯ ಅಧಿಕಾರಿ. ಈ ಮುನ್ನ ಅವರು ದೂರದರ್ಶನ ಸುದ್ದಿ ವಿಭಾಗದಲ್ಲಿ ಮತ್ತು ದೂರದರ್ಶನದ ಮಾರುಕಟ್ಟೆ, ವಾಣಿಜ್ಯ ಮತ್ತು ಮಾರಾಟ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

ಪ್ರಸಾರ ಭಾರತಿಯ ಪಶ್ಚಿಮ ಏಷ್ಯಾದ ವಿಶೇಷ ಬಾತ್ಮೀದಾರರಾಗಿ 20 ರಾಷ್ಟ್ರಗಳ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಆಕಾಶವಾಣಿ ಸುದ್ದಿ ಸೇವಾ ವಿಭಾಗದ ಮುಖ್ಯಸ್ಥರಾದರು. ಭಾರತೀಯ ಸಮೂಹ ಸಂವಹನ ಸಂಸ್ಥೆಯ ರಿಜಿಸ್ಟ್ರಾರ್ ಆಗಿಯೂ ಅವರು ಸೇವೆ ಸಲ್ಲಿಸಿದ್ದರು.

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp