ಜೆಇಎಂ ಭಯೋತ್ಪಾದಕ ಸಹವರ್ತಿಯನ್ನು ಬಂಧಿಸಿದ ಜಮ್ಮು-ಕಾಶ್ಮೀರ ಪೊಲೀಸರು!

ಜೆಇಎಂ ಭಯೋತ್ಪಾದಕ ಸಹವರ್ತಿಯನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. 

Published: 01st March 2021 04:24 PM  |   Last Updated: 01st March 2021 04:24 PM   |  A+A-


Arrest

ಬಂಧನ (ಸಾಂದರ್ಭಿಕ ಚಿತ್ರ)

Posted By : Srinivas Rao BV
Source : IANS

ಶ್ರೀನಗರ: ಜೆಇಎಂ ಭಯೋತ್ಪಾದಕ ಸಹವರ್ತಿಯನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. 

ದಕ್ಷಿಣ ಕಾಶ್ಮೀರದ ಅವಂತಿಪೋರಾದಲ್ಲಿ ಭಯೋತ್ಪಾದಕ ಬೆಂಬಲಿಗ, ಸಹವರ್ತಿಯನ್ನು ಬಂಧಿಸಲಾಗಿದ್ದು ಆತನಿಂದ ವಸ್ತುಗಳನ್ನು ವಶಪಡಿಸಿಕೊಂದಿದ್ದಾರೆ. 

ಜಾಗೀರ್ ತ್ರಾಲ್ ನಲ್ಲಿ ಭಯೋತ್ಪಾದಕರ ಬೆಂಬಲಿಗ ಇದ್ದ ಬಗ್ಗೆ ಖಚಿತ ಮಾಹಿತೊಯನ್ನು ಪಡೆದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪೊಲೀಸರು ಹಾಗೂ ಸೇನೆಯ 42 ಆರ್ ಆರ್ ಹಾಗೂ ಸಿಆರ್ ಪಿಎಫ್ ಜಂಟಿ ಕಾರ್ಯಾಚರಣೆಯ ಫಲವಾಗಿ ಜೆಇಎಂ ನ ಬೆಂಬಲಿಗನಾಗಿದ್ದ ಮುಜಾಮಿಲ್ ಖಾದಿರ್ ಭಟ್ ನ್ನು ಬಂಧಿಸಲಾಗಿದೆ. 

ಭಯೋತ್ಪಾದಕ ಸಂಘಟನೆಗೆ ಸೇರಿದ ವಸ್ತುಗಳನ್ನು, ಗ್ರೆನೇಡ್ ನ್ನು ಈತನಿಂದ ವಶಕ್ಕೆ ಪಡೆಯಲಾಗಿದೆ. ಪೊಲೀಸರು ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp