ಕೋವಿಡ್ ಲಸಿಕೆ ಪಡೆದ ಪ್ರಧಾನಿ: ಒಂದು ನಡೆಯಿಂದ ಟೀಕಾಕಾರರಿಗೆ 3 ಸಂದೇಶ ನೀಡಿದ ಮೋದಿ ಎಂದ ಸಂಸದ ತೇಜಸ್ವಿ ಸೂರ್ಯ

ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಟೀಕಾಕಾರರಿಗೆ 3 ಸಂದೇಶ ರವಾನಿಸಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

Published: 01st March 2021 09:44 AM  |   Last Updated: 01st March 2021 09:44 AM   |  A+A-


Tejasvi surya-PM Modi

ಲಸಿಕೆ ಪಡೆದ ಪ್ರಧಾನಿ ಮೋದಿ ಮತ್ತು ತೇಜಸ್ವಿ ಸೂರ್ಯ

Posted By : Srinivasamurthy VN
Source : Online Desk

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಟೀಕಾಕಾರರಿಗೆ 3 ಸಂದೇಶ ರವಾನಿಸಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದರು. ಪುದುಚೇರಿ ಮೂಲದ ಸಿಸ್ಟರ್‌ ಪಿ.ನಿವೇದಾ ಪ್ರಧಾನಿಗೆ ಭಾರತ್‌ ಬಯೋಟೆಕ್‌ನ 'ಕೊವ್ಯಾಕ್ಸಿನ್‌' ಲಸಿಕೆ ಚುಚ್ಚಿದರು. ಪ್ರಧಾನಿ ಮೋದಿ ಎಡಗೈ ತೋಳಿಗೆ ಲಸಿಕೆ ಹಾಕಿಸಿಕೊಂಡರು.

ಆ ಮೂಲಕ ಕೋವಿಡ್‌–19 ತಡೆಯ ಎರಡನೇ ಹಂತದ ಲಸಿಕೆ ಕಾರ್ಯಕ್ರಮ ಇಂದಿನಿಂದ ಆರಂಭವಾಗಿದ್ದು, ಜಗತ್ತಿನ ಅತ್ಯಂತ ದೊಡ್ಡ ಲಸಿಕೆ ಅಭಿಯಾನಕ್ಕೆ ಭಾರತದ ಪ್ರಧಾನಿ ಮೋದಿ ಪರೋಕ್ಷವಾಗಿ ಚಾಲನೆ ನೀಡಿದ್ದಾರೆ. 

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಪ್ರಧಾನಿ ಮೋದಿ ತಮ್ಮ ಒಂದು ನಡೆಯಿಂದ ಟೀಕಾಕಾರರಿಗೆ 3 ಸಂದೇಶ ರವಾನಿಸಿದ್ದಾರೆ ಎಂದು ಹೇಳಿದ್ದಾರೆ. 'ಕೋವಿಡ್ ಲಸಿಕೆ ಮಾರ್ಗಸೂಚಿಯಿಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹಿರಿಯ ನಾಗರಿಕರಿಗೆ ಲಸಿಕೆ ನೀಡುವ ಹಂತದವರೆಗೂ ಕಾದು ಇದೀಗ ಅವರು ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆಗಾಗಿ ಅವರು ಮಾರ್ಗಸೂಚಿ ನಿಯಮವನ್ನು ಬ್ರೇಕ್ ಮಾಡಿಲ್ಲ... ಖುದ್ಧು ತಾವೇ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಲಸಿಕೆ ಮೇಲಿನ ವಿಶ್ವಾಸಾರ್ಹತೆ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಅಂತೆಯೇ ಅವರು ಬಯಸಿದ್ದರೇ ತಮ್ಮ ಅಧಿಕೃತ ನಿವಾಸದಲ್ಲೇ ಲಸಿಕೆ ಪಡೆಯಬಹುದಿತ್ತು. ಆದರೆ ಜನಸಾಮಾನ್ಯರಂತೆ ಸರ್ಕಾರಿ ಆಸ್ಪತ್ರೆಯಲ್ಲಿನ ಲಸಿಕೆ ವಿತರಣಾ ಕೇಂದ್ರಕ್ಕೆ ತೆರಳಿ ಲಸಿಕೆ ಹಾಕಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.

 
ಇನ್ನು ಲಸಿಕೆ ಅಭಿಯಾನದ ಮುಂದಿನ ಹಂತದಲ್ಲಿ 60 ವರ್ಷ ದಾಟಿದವರು ಮತ್ತು 2022ರ ಜನವರಿ 1ಕ್ಕೆ 60 ವರ್ಷ ತುಂಬುವವರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಲು ಅರ್ಹರಾಗಿದ್ದಾರೆ. ಬೇರೆ ರೋಗಗಳನ್ನು ಹೊಂದಿರುವ, 2022ರ ಜನವರಿ 1ಕ್ಕೆ 45 ವರ್ಷ ತುಂಬುವವರು ಮತ್ತು ಈಗಾಗಲೇ 45 ದಾಟಿದವರು ಕೂಡ ನೋಂದಣಿಗೆ ಅರ್ಹರು. 20 ಅನಾರೋಗ್ಯಗಳನ್ನು ಆರೋಗ್ಯ ಸಚಿವಾಲಯವು ಪಟ್ಟಿ ಮಾಡಿದೆ.

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp