ಕೊವಿಡ್ -19 ಲಸಿಕೆ ಅಭಿಯಾನಕ್ಕೆ ಎಸ್ ಬಿಐನಿಂದ 11 ಕೋಟಿ ರೂ ನೆರವು

ಸರ್ಕಾರದ ಮುಂದಿನ ಹಂತದ ಕೋವಿಡ್ -19 ಲಸಿಕೆ ನೀಡಿಕೆ ಅಭಿಯಾನವನ್ನು ಬೆಂಬಲಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಪಿಎಂ ಕೇರ್ಸ್ ನಿಧಿಗೆ 11 ಕೋಟಿ ರೂ. ನೆರವನ್ನು ನೀಡಿದೆ. 

Published: 01st March 2021 04:42 PM  |   Last Updated: 01st March 2021 05:15 PM   |  A+A-


SBI

ಸಾಂದರ್ಭಿಕ ಚಿತ್ರ

Posted By : Srinivas Rao BV
Source : UNI

ಕೋಲ್ಕತಾ: ಸರ್ಕಾರದ ಮುಂದಿನ ಹಂತದ ಕೋವಿಡ್ -19 ಲಸಿಕೆ ನೀಡಿಕೆ ಅಭಿಯಾನವನ್ನು ಬೆಂಬಲಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ), ಪಿಎಂ ಕೇರ್ಸ್ ನಿಧಿಗೆ 11 ಕೋಟಿ ರೂ. ನೆರವನ್ನು ನೀಡಿದೆ.

ಪ್ರತಿಕೂಲ ಸಮಯದಲ್ಲೇ ಒಗ್ಗಟ್ಟಿನ ನಿಜವಾದ ಸ್ವರೂಪವನ್ನು ಪರೀಕ್ಷಿಸಲಾಗುತ್ತದೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ನಮ್ಮ ದೇಶ ಕೈಗೊಂಡ ಪ್ರಯತ್ನಗಳಿಗೆ ನಾವೆಲ್ಲರೂ ಹೆಮ್ಮೆ ಪಡಬೇಕಾಗಿದೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ಜವಾಬ್ದಾರಿಯುತ ಕಾರ್ಪೊರೇಟ್ ನಾಗರಿಕರಾಗಿ ಎಲ್ಲರಿಗೂ ಲಸಿಕೆ ಹಾಕುವ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸುವುದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ. ಲಸಿಕೆ ಅಭಿಯಾನ ಯಶಸ್ವಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬರೂ ಮುಂದೆ ಬಂದು ತಮಗೆ ತೋರುವ ರೀತಿಯಲ್ಲಿ ಸಹಾಯ ಮಾಡಬೇಕೆಂದು ವಿನಂತಿಸುತ್ತೇನೆ ಎಂದು ಎಸ್ ಬಿಐ ಅಧ್ಯಕ್ಷ ದಿನೇಶ್ ಖರಾ ಹೇಳಿದ್ದಾರೆ. 

ಕಳೆದ ವರ್ಷದ ಆರಂಭದಲ್ಲಿ, ಎಸ್ ಬಿಐ ತನ್ನ ವಾರ್ಷಿಕ ಲಾಭದ ಶೇ 0.25ರಷ್ಟು ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಬೆಂಬಲಿಸಲು ನೀಡಲಾಗಿತ್ತು. ಮುಖಗವಸು, ಸ್ಯಾನಿಟೈಜರ್ ಗಳು, ಮತ್ತಿತರ ವಸ್ತುಗಳನ್ನು ಅಗತ್ಯವಿರುವವರಿಗೆ ನೀಡಲಾಗಿತ್ತು. ಅಲ್ಲದೆ, ಎಸ್ ಬಿಐ ನೌಕರರು ರಾಷ್ಟ್ರವನ್ನು ಬೆಂಬಲಿಸುವ ಪ್ರಯತ್ನದಲ್ಲಿ 107 ಕೋಟಿ ರೂ. ಹಣವನ್ನು ಪಿಎಂ ಕೇರ್ಸ್ ನಿಧಿಗೆ ನೀಡಿದ್ದಾರೆ ಎಂದು ಖರಾ ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp