ರಾಮ ಮಂದಿರ ನಿರ್ಮಾಣಕ್ಕೆ ಸದ್ಯ 2,100 ಕೋಟಿ ಸಂಗ್ರಹ, ಈಗ ವಿದೇಶಗಳಲ್ಲಿ ನಿಧಿ ಸಂಗ್ರಹ ಅಭಿಯಾನಕ್ಕೆ ಚಿಂತನೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಹಮ್ಮಿಕೊಂಡಿದ್ದ ನಿಧಿ ಸಂಗ್ರಹ ಅಭಿಯಾನ ಶನಿವಾರ ಅಂತ್ಯಗೊಂಡಿದ್ದು, ನಿರೀಕ್ಷೆಗೂ ಮೀರಿ ಬರೋಬ್ಬರಿ 2100 ಕೋಟಿ ರೂಪಾಯಿ ಸಂಗ್ರಹವಾಗಿದೆ.

Published: 01st March 2021 06:44 PM  |   Last Updated: 01st March 2021 06:44 PM   |  A+A-


proposed model of Ram temple in Ayodhya

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರ ಮಾದರಿ

Posted By : Lingaraj Badiger
Source : The New Indian Express

ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಹಮ್ಮಿಕೊಂಡಿದ್ದ ನಿಧಿ ಸಂಗ್ರಹ ಅಭಿಯಾನ ಶನಿವಾರ ಅಂತ್ಯಗೊಂಡಿದ್ದು, ನಿರೀಕ್ಷೆಗೂ ಮೀರಿ ಬರೋಬ್ಬರಿ 2100 ಕೋಟಿ ರೂಪಾಯಿ ಸಂಗ್ರಹವಾಗಿದೆ. ಈಗ ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್ ಈಗ ಜಾಗತಿಕವಾಗಿಯೂ ನಿಧಿ ಸಮರ್ಪಣ ಅಭಿಯಾನಕ್ಕೆ ಚಾಲನೆ ನೀಡುವ ಚಿಂತನೆ ನಡೆಸಿದೆ.

ಜಾಗತಿಕವಾಗಿಯೂ ನಿಧಿ ಸಮರ್ಪಣ ಅಭಿಯಾನಕ್ಕೆ ಚಾಲನೆ ನೀಡುವಂತೆ ವಿದೇಶಗಳಲ್ಲಿ ವಾಸಿಸುತ್ತಿರುವ ರಾಮ್ ಭಕ್ತರಿಂದ ಸಾಕಷ್ಟು ಮನವಿಗಳು ಬರುತ್ತಿವೆ. ರಾಮ ಮಂದಿರ ಟ್ರಸ್ಟ್‌ನ ಖಜಾಂಚಿ ಮಹಂತ್ ಗೋವಿಂದ್ ದೇವ್ ಗಿರಿ ಅವರು ಹೇಳಿದ್ದಾರೆ.

ಶೀಘ್ರದಲ್ಲೇ ಟ್ರಸ್ಟಿಗಳ ಸಭೆಯಲ್ಲಿ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುವುದು. "ನಿಧಿ ಸಮರ್ಪಣ ಅಭಿಯಾನವನ್ನು ಜಾಗತಿಕವಾಗಿ ಪ್ರಾರಂಭಿಸಲು ಟ್ರಸ್ಟ್ ಸದಸ್ಯರು ಅನುಸರಿಸಬೇಕಾದ ಆರ್‌ಬಿಐ, ಹಣಕಾಸು ಸಚಿವಾಲಯ, ಐ-ಟಿ ನಿಯಮಗಳು ಮತ್ತು ಅನುಮತಿಗಳಿಗೆ ಸಂಬಂಧಿಸಿದ ವಿಧಾನಗಳು ಮತ್ತು ಪ್ರೋಟೋಕಾಲ್ ಬಗ್ಗೆ ಚರ್ಚಿಸಲಿದ್ದಾರೆ" ಎಂದು ಟ್ರಸ್ಟಿಗಳಲ್ಲಿ ಒಬ್ಬರಾದ ಮಹಂತ್ ಗೋವಿಂದ್ ದೇವ್ ಗಿರಿ  ಅವರು ತಿಳಿಸಿದ್ದಾರೆ.

ಯಾವುದೇ ಸಂಭಾವ್ಯ ವಿವಾದಗಳನ್ನು ತಪ್ಪಿಸಲು ಜಾಗತಿಕ ಧನಸಹಾಯ ಪಡೆಯುವುದಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ನಿಬಂಧನೆಗಳ ಕುರಿತು ಅಧ್ಯಯನ ನಡೆಸಲು ಟ್ರಸ್ಟ್ ಈಗಾಗಲೇ ಒಬ್ಬರು ತಜ್ಞರನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp