ಖಾಸಗಿ ಕ್ಷೇತ್ರಗಳಲ್ಲಿ ಸ್ಥಳೀಯರಿಗೆ ಶೇ .75 ರಷ್ಟು ಉದ್ಯೋಗ ಮೀಸಲು ಮಸೂದೆಗೆ ಹರಿಯಾಣ ರಾಜ್ಯಪಾಲರು ಅಸ್ತು
ಖಾಸಗಿ ಕ್ಷೇತ್ರದಲ್ಲೂ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಶೇ .75 ರಷ್ಟು ಮೀಸಲಾತಿ ನೀಡುವ ಮಸೂದೆಗೆ ಹರಿಯಾಣ ರಾಜ್ಯಪಾಲ ಸತ್ಯದೇವ ನರೈನ್ ಆರ್ಯ ಅವರು ಅನುಮೋದನೆ ನೀಡಿದ್ದಾರೆ...
Published: 02nd March 2021 07:09 PM | Last Updated: 02nd March 2021 07:09 PM | A+A A-

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್
ಚಂಡೀಗಢ: ಖಾಸಗಿ ಕ್ಷೇತ್ರದಲ್ಲೂ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಶೇ .75 ರಷ್ಟು ಮೀಸಲಾತಿ ನೀಡುವ ಮಸೂದೆಗೆ ಹರಿಯಾಣ ರಾಜ್ಯಪಾಲ ಸತ್ಯದೇವ ನರೈನ್ ಆರ್ಯ ಅವರು ಅನುಮೋದನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಂಗಳವಾರ ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಜನನಾಯಕ್ ಜಂತಾ ಪಕ್ಷ ಚುನಾವಣೆ ವೇಳೆ ನೀಡಿದ ಭರವಸೆಯಂತೆ ಕಳೆದ ವರ್ಷಾಂತ್ಯದಲ್ಲಿ ಹರಿಯಾಣ ವಿಧಾನಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿತ್ತು.
ಸ್ಥಳೀಯ ಅಭ್ಯರ್ಥಿಗಳ ಹರಿಯಾಣ ರಾಜ್ಯ ಉದ್ಯೋಗ ಮಸೂದೆ 2020ಕ್ಕೆ ರಾಜ್ಯಪಾಲರು ಸಹಿ ಹಾಕಿದ್ದು, ಶೀಘ್ರದಲ್ಲೇ ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದು ಸಿಎಂ ಖಟ್ಟರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಸೂದೆಯ ಪ್ರಕಾರ, ಈ ಮೀಸಲಾತಿ 50 ಸಾವಿರ ರೂ.ಗಿಂತ ಕಡಿಮೆ ವೇತನ ಶ್ರೇಣಿಯ ಉದ್ಯೋಗಗಳಿಗೆ ಸೀಮಿತವಾಗಿದ್ದು, 10 ವರ್ಷಗಳವರೆಗೆ ಅನ್ವಯಿಸುತ್ತದೆ.