ಹರಿಯಾಣ: ಸೈನಿಕ್ ಶಾಲೆಯ 54 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್, ಕ್ಯಾಂಪಸ್ ಕಂಟೈನ್ ಮೆಂಟ್ ವಲಯವೆಂದು ಘೋಷಣೆ

ಹರಿಯಾಣದ ಕರ್ನಾಲ್ ಸಮೀಪವಿರುವ ಸೈನಿಕ್ ಶಾಲೆಯ 54 ವಿದ್ಯಾರ್ಥಿಗಳಿಗೆ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದ್ದು, ತರಗತಿಗಳು ಮತ್ತು ಇತರೆ ಶೈಕ್ಷಣಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ...

Published: 02nd March 2021 08:32 PM  |   Last Updated: 02nd March 2021 08:32 PM   |  A+A-


Two new COVID mutations found in Maharashtra's Amravati, Yavatmal as regions brace for lockdown

ಸಾಂದರ್ಭಿಕ ಚಿತ್ರ

Posted By : Lingaraj Badiger
Source : PTI

ಕರ್ನಾಲ್: ಹರಿಯಾಣದ ಕರ್ನಾಲ್ ಸಮೀಪವಿರುವ ಸೈನಿಕ್ ಶಾಲೆಯ 54 ವಿದ್ಯಾರ್ಥಿಗಳಿಗೆ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದ್ದು, ತರಗತಿಗಳು ಮತ್ತು ಇತರೆ ಶೈಕ್ಷಣಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಸೈನಿಕ್ ಶಾಲೆಯ ಕುಂಜ್‌ಪುರದ ಮೂವರು ವಿದ್ಯಾರ್ಥಿಗಳಿಗೆ ಸೋಮವಾರ ಪಾಸಿಟಿವ್ ಬಂದಿತ್ತು. ನಂತರ ಆರೋಗ್ಯ ಇಲಾಖೆಯು 390 ವಿದ್ಯಾರ್ಥಿಗಳು ಮತ್ತು ಶಾಲೆಯ ಸಿಬ್ಬಂದಿಗಳ ಪರೀಕ್ಷೆ ನಡೆಸಿದ್ದು, ಅದರಲ್ಲಿ 54 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ ಕರ್ನಲ್ ಮುಖ್ಯ ವೈದ್ಯಾಧಿಕಾರಿ ಯೋಗೇಶ್ ಶರ್ಮಾ ಅವರು ಹೇಳಿದ್ದಾರೆ.

ಶಾಲಾ ಕಟ್ಟಡ ಮತ್ತು ಅದರ ವಸತಿ ನಿಲಯಗಳನ್ನು ಕಂಟೈನ್ ಮೆಂಟ್ ಜೋನ್ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಯಾದವ್ ಅವರು ತಿಳಿಸಿದ್ದಾರೆ.

ಹರಿಯಾಣ ಶಿಕ್ಷಣ ಇಲಾಖೆ ಕಳೆದ ವರ್ಷ ಡಿಸೆಂಬರ್‌ನಲ್ಲಿ 9 ರಿಂದ 12ನೇ ತರಗತಿಗಳಿಗೆ ಮತ್ತು ಫೆಬ್ರವರಿ 24 ರಿಂದ 3 ರಿಂದ 5ನೇ ತರಗತಿಗಳಿಗೆ ಶಾಲೆಗಳನ್ನು ಪುನಃ ಆರಂಭಿಸಿತ್ತು.

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp