ನಿನ್ನ ಕೆಲಸ ಗಟಾರ ಸ್ವಚ್ಛಗೊಳಿಸುವುದು, ಪ್ರತಿಭಟನೆಯ ಹಕ್ಕು ಯಾರು ಕೊಟ್ಟಿದ್ದು?: ಪೊಲೀಸ್ ಚಿತ್ರಹಿಂಸೆ ಬಿಚ್ಚಿಟ್ಟ  ನೊದೀಪ್ ಕೌರ್

ದಲಿತ ಕಾರ್ಮಿಕ ಹಕ್ಕುಗಳ ಕಾರ್ಯಕರ್ತೆ ನೊದೀಪ್ ಕೌರ್ ತಮಗೆ ಪೊಲೀಸ್ ವಶದಲ್ಲಿದ್ದಾಗ ನೀಡಲಾದ ಚಿತ್ರ ಹಿಂಸೆಯನ್ನು ಬಹಿರಂಗಪಡಿಸಿದ್ದಾರೆ. 

Published: 02nd March 2021 03:28 PM  |   Last Updated: 02nd March 2021 06:12 PM   |  A+A-


'Your job is to clean gutters, who gave you the right to organize protests?': Dalit activist Nodeep Kaur alleges custodial torture

''ನಿನ್ನ ಕೆಲಸ ಗಟಾರ ಸ್ವಚ್ಛಗೊಳಿಸುವುದು, ಪ್ರತಿಭಟನೆಯ ಹಕ್ಕು ಯಾರು ಕೊಟ್ಟಿದ್ದು''?ಚಿತ್ರಹಿಂಸೆ ಬಿಚ್ಚಿಟ್ಟ ನೊದೀಪ್

Posted By : Srinivas Rao BV
Source : Online Desk

ನವದೆಹಲಿ: ದಲಿತ ಕಾರ್ಮಿಕ ಹಕ್ಕುಗಳ ಕಾರ್ಯಕರ್ತೆ ನೊದೀಪ್ ಕೌರ್ ತಮಗೆ ಪೊಲೀಸ್ ವಶದಲ್ಲಿದ್ದಾಗ ನೀಡಲಾದ ಚಿತ್ರ ಹಿಂಸೆಯನ್ನು ಬಹಿರಂಗಪಡಿಸಿದ್ದಾರೆ.

ಹತ್ಯೆಯ ಆರೋಪ, ಕೈಗಾರಿಕಾ ಯುನಿಟ್ ನಲ್ಲಿ ಘೆರಾವ್ ಹಾಕುವುದು ಹಾಗೂ ಕಂಪನಿಗಳಿಂದ ಹಣಕ್ಕಾಗಿ ಬೇಡಿಕೆ ಇಡುವುದೂ ಸೇರಿದಂತೆ ಹಲವು ಆರೋಪಗಳನ್ನೆದುರಿಸಿ ಪೊಲೀಸ್ ವಶದಲ್ಲಿದ್ದ 24 ವರ್ಷದ ನೊದೀಪ್ ಕೌರ್ ಗೆ ಕೆಲವೇ ದಿನಗಳ ಹಿಂದೆ ಪಂಜಾಬ್, ಹರ್ಯಾಣ ಹೈಕೋರ್ಟ್ ಜಾಮೀನು ನೀಡಿತ್ತು. 

ಈಗ ಬಿಡುಗಡೆಯಾದ ಬಳಿಕ ಕೌರ್ ತಮಗಾದ ಕರಾಳ ಅನುಭವಗಳನ್ನು ಬಹಿರಂಗಪಡಿಸಿದ್ದಾರೆ. "ನನನ್ನು ಬೆದರಿಸುವುದಕ್ಕಾಗಿ ಪೊಲೀಸರು ಜಾತಿ ನಿಂದನೆ ಮಾಡಿದರು, ದೈಹಿಕವಾಗಿ ಹಿಂಸೆ ನೀಡಿದರು. ಹಿಂಸೆ ನೀಡುವಾಗ ಜಾತಿ ನಿಂದನೆ ಮಾಡಿದ ಪೊಲೀಸರು, ಗಟಾರ ಸ್ವಚ್ಛಗೊಳಿಸುವುದಷ್ಟೇ, ನಿನಗೆ ದೊಡ್ಡ ವ್ಯಕ್ತಿಗಳ ವಿರುದ್ಧ ಪ್ರತಿಭಟನೆಯನ್ನು ಆಯೋಜಿಸುವ ಹಕ್ಕು ಯಾರು ನೀಡಿದರು? ದಲಿತರು ದಲಿತರ ರೀತಿಯಲ್ಲಿ ವರ್ತಿಸಬೇಕು" ಎಂದು ನಿಂದಿಸಿದ್ದಾಗಿ ನೊದೀಪ್ ಕೌರ್ ಗಂಭೀರ ಆರೋಪ ಮಾಡಿದ್ದಾರೆ. 

ಶ್ರೀಮಂತರು ಹಾಗೂ ಶಕ್ತಿಶಾಲಿಗಳ ವಿರುದ್ಧ ನಿಂತಿದ್ದಕ್ಕೆ ಪೊಲೀಸರು ಆಕ್ರೋಶಗೊಂಡಿದ್ದರು. ನಾನು ದಲಿತ ಮಹಿಳೆಯಾಗಿದ್ದಕ್ಕೆ ಟ್ರೇಡ್ ಯೂನಿಯನ್ ಕಾರ್ಮಿಕಳಾಗಿದ್ದಕ್ಕಾಗಿ ಈ ಕಿರುಕುಳ ಅನುಭವಿಸಬೇಕಾಯಿತೇನೋ ಎನಿಸುತ್ತದೆ ಎಂದು ನೊದೀಪ್ ಕೌರ್ ಹೇಳಿದ್ದಾರೆ. 

ಜೈಲಿನಲ್ಲಿ ಮಹಿಳಾ ಸಹ ಖೈದಿಗಳ ಪರಿಸ್ಥಿತಿ ಭಯಾನಕವಾಗಿತ್ತು, ನನಗಾದ ಕರಾಳ ಅನುಭವವನ್ನು ಅವರಲ್ಲಿ ಹೇಳಿದರೆ ಅದ್ಯಾವುದೂ ಅವರಿಗೆ ಅಚ್ಚರಿ ಎನಿಸಲಿಲ್ಲ, "ನೀನು ಅನುಭವಿಸಿರುವುದು ಏನೂ ಅಲ್ಲ" ಎಂದು ಸಹಖೈದಿಗಳು ಹೇಳಿದ್ದನ್ನು ನೊದೀಪ್ ಕೌರ್ ಉಲ್ಲೇಖಿಸಿದ್ದಾರೆ.

ನಾನು ಇದ್ದ ಜೈಲಿನಲ್ಲಿ 200 ಮಹಿಳಾ ಖೈದಿಗಳಿದ್ದರು. ಸಣ್ಣ ಪುಟ್ಟ ಆರೋಪಗಳಿಗಾಗಿ ಅವರನ್ನು ಜೈಲಿನಲ್ಲಿಡಲಾಗಿತ್ತು. ಈ ಪೈಕಿ ಬಹುತೇಕ ಮಂದಿ ಹಿಂದುಳಿದ ಸಮುದಾಯದವರಾಗಿದ್ದರು ಎಂದು ನೊದೀಪ್ ಕೌರ್ ಹೇಳಿದ್ದಾರೆ. ನಾನು ತಪ್ಪು ಮಾಡಿಲ್ಲ, ಪೊಲೀಸರು ನನ್ನ ವಿರುದ್ಧ ಯಾವುದೇ ಸಾಕ್ಷ್ಯಗಳನ್ನು ಹೊಂದಿಲ್ಲ ಎಂದು ಕೌರ್ ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp