ದೆಹಲಿ ಸ್ಥಳೀಯ ಸಂಸ್ಥೆ ಉಪ ಚುನಾವಣೆ: 5 ಸ್ಥಾನಗಳ ಪೈಕಿ 4ರಲ್ಲಿ ಆಪ್ ಗೆಲುವು

ದೆಹಲಿ ಪುರಸಭೆ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ನಡೆದಿದ್ದು, ಐದು ವಾರ್ಡ್‌ಗಳ ಪೈಕಿ ನಾಲ್ಕು ವಾರ್ಡ್ ಗಳಲ್ಲಿ ಎಎಪಿ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.

Published: 03rd March 2021 11:29 AM  |   Last Updated: 03rd March 2021 01:04 PM   |  A+A-


AAP Wins 4 Of 5 Seats In Delhi Civic Bypolls

ಗೆಲುವಿನ ಸಂಭ್ರಮದಲ್ಲಿ ಸಿಹಿ ಹಂಚುತ್ತಿರುವ ಆಪ್ ನಾಯಕ ಸಿಸೋಡಿಯಾ

Posted By : Srinivasamurthy VN
Source : ANI

ನವದೆಹಲಿ: ದೆಹಲಿ ಪುರಸಭೆ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ನಡೆದಿದ್ದು, ಐದು ವಾರ್ಡ್‌ಗಳ ಪೈಕಿ ನಾಲ್ಕು ವಾರ್ಡ್ ಗಳಲ್ಲಿ ಎಎಪಿ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.

ದೆಹಲಿಯ ಶಾಲಿಮಾರ್‌ ಬಾಗ್‌, ಕಲ್ಯಾಣ್‌ಪುರಿ, ತ್ರಿಲೋಕ್‌ಪುರಿ ಮತ್ತು ರೋಹಿಣಿ- ಸಿ ವಾರ್ಡ್‌ ಮತ್ತು ಚೌಹಾಣ್ ಬಂಗಾರ್‌ ವಾರ್ಡ್‌ ಗಳಲ್ಲಿ ಉಪ ಚುನಾವಣೆ ನಡೆದಿತ್ತು. ಈ ಐದು ವಾರ್ಡ್ ಗಳ ಪೈಕಿ 4ರಲ್ಲಿ ಅಂದರೆ ಶಾಲಿಮಾರ್‌ ಬಾಗ್‌, ಕಲ್ಯಾಣ್‌ಪುರಿ, ತ್ರಿಲೋಕ್‌ಪುರಿ ಮತ್ತು ರೋಹಿಣಿ- ಸಿ ವಾರ್ಡ್‌ ಗಳಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ. ಚೌಹಾಣ್ ಬಂಗಾರ್‌ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 

ಶಾಲಿಮಾರ್ ಭಾಗ್ ಉತ್ತರ ವಾರ್ಡ್ ನಲ್ಲಿ ಆಪ್ ಪಕ್ಷದ ಸುನಿತಾ ಮಿಶ್ರಾ ಅವರು 2705 ಮತಗಳ ಅಂತರದಲ್ಲಿ ಜಯಗಳಿಸಿದ್ದು, ಉಳಿದ ಅಭ್ಯರ್ಥಿಗಳ ಗೆಲುವಿನ ಮಾರ್ಜಿನ್ ಇನ್ನಷ್ಟೇ ಹೊರಬರಬೇಕಿದೆ.

ಫೆಬ್ರುವರಿ 28ರಂದು ನಡೆದ ಐದು ಪುರಸಭೆ ವಾರ್ಡ್‌ಗಳ ಉಪ ಚುನಾವಣೆಯಲ್ಲಿ ಶೇ. 50ಕ್ಕಿಂತ ಹೆಚ್ಚು ಮತ ಮತದಾನವಾಗಿತ್ತು. ಇಂದು ಬೆಳಗ್ಗೆ 9 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿ 11 ಗಂಟೆಗೆ ಮುಕ್ತಾಯವಾಗಿತ್ತು. ಆರಂಭದಿಂದಲೂ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದ ಆಪ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. 


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp