ದೆಹಲಿ ಸ್ಥಳೀಯ ಸಂಸ್ಥೆ ಉಪ ಚುನಾವಣೆ ಫಲಿತಾಂಶ 2022ರ ಚುನಾವಣೆಯ ದಿಕ್ಸೂಚಿ: ಮನೀಶ್ ಸಿಸೋಡಿಯಾ

ದೆಹಲಿ ಪುರಸಭೆ ಉಪ ಚುನಾವಣಾ ಫಲಿತಾಂಶ ಮುಂಬರುವ 2022ರ ದೆಹಲಿ ಪಾಲಿಕೆ ಚುನಾವಣೆಯ  ದಿಕ್ಸೂಚಿ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ ಹಾಗೂ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

Published: 03rd March 2021 12:43 PM  |   Last Updated: 03rd March 2021 01:07 PM   |  A+A-


Manish Sisodia

ಮನೀಶ್ ಸಿಸೋಡಿಯಾ

Posted By : Srinivasamurthy VN
Source : ANI

ನವದೆಹಲಿ: ದೆಹಲಿ ಪುರಸಭೆ ಉಪ ಚುನಾವಣಾ ಫಲಿತಾಂಶ ಮುಂಬರುವ 2022ರ ದೆಹಲಿ ಪಾಲಿಕೆ ಚುನಾವಣೆಯ  ದಿಕ್ಸೂಚಿ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ ಹಾಗೂ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ದೆಹಲಿ ಪಾಲಿಕೆಯ ಐದು ವಾರ್ಡ್​ಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ನಾಲ್ಕು ಸ್ಥಾನಗಳಲ್ಲಿ ಜಯಭೇರಿ ಭಾರಿಸಿದೆ. ಇದು ಆಪ್ ನಾಯಕರ ಸಂತಸಕ್ಕೆ ಕಾರಣವಾಗಿದ್ದು, ಪಕ್ಷದ ಕಾರ್ಯಕರ್ತರಿಗೆ ಸಿಹಿ ತಿನ್ನಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ ಹಾಗೂ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ದೆಹಲಿ ಜನರು ತಮ್ಮ ಸರ್ಕಾರದ ಬಗ್ಗೆ ನಂಬಿಕೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಬಗ್ಗೆ ಅವರು ವ್ಯಗ್ರಗೊಂಡಿರುವುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ. 2022ರ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಆಪ್ ಹೊರತು ಪಡಿಸಿದರೆ, ಬಿಜೆಪಿ ಇಲ್ಲಿ ಶೂನ್ಯ ಸಂಪಾದನೆ ಮಾಡಿದ್ದು, ಒಂದು ಸ್ಥಾನವು ಕಾಂಗ್ರೆಸ್ ಪಾಲಾಗಿದೆ. ಎಎಪಿ ಪಕ್ಷ ಕಲ್ಯಾಣಪುರಿ, ಶಾಲಿಮಾರ್ ಬಾಗ್, ರೋಹಿಣಿ-ಸಿ ಮತ್ತು ತ್ರಿಲೋಕಪುರಿ ವಾರ್ಡ್​ಗಳನ್ನ ಗೆದ್ದಿದ್ದರೆ, ಕಾಂಗ್ರೆಸ್ ಪಕ್ಷ ಚೌಹಾಣ್ ಬಂಗೇರ್ ವಾರ್ಡ್ ಅನ್ನು ಜಯಿಸಿದೆ.
 


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp