'ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಯುವಜನತೆಯಲ್ಲಿ ಆತ್ಮವಿಶ್ವಾಸ ಅತಿ ಮುಖ್ಯ': ಪ್ರಧಾನ ಮಂತ್ರಿ ನರೇಂದ್ರ ಮೋದಿ 

ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಯುವಜನತೆಯಲ್ಲಿ ಆತ್ಮವಿಶ್ವಾಸ ಮುಖ್ಯವಾಗಿದೆ. ತಮ್ಮ ಶಿಕ್ಷಣ, ಕೌಶಲ್ಯ ಮತ್ತು ಜ್ಞಾನದಲ್ಲಿ ನಂಬಿಕೆಯಿದ್ದರೆ ಯುವಕರಲ್ಲಿ ತಾನಾಗಿಯೇ ಆತ್ಮವಿಶ್ವಾಸ ಮೂಡುತ್ತದೆ ಎಂದು ಹೇಳಿದರು.

Published: 03rd March 2021 11:53 AM  |   Last Updated: 03rd March 2021 11:53 AM   |  A+A-


PM Narendra Modi

ಪಿಎಂ ನರೇಂದ್ರ ಮೋದಿ

Posted By : Sumana Upadhyaya
Source : ANI

ನವದೆಹಲಿ: ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಯುವಜನತೆಯಲ್ಲಿ ಆತ್ಮವಿಶ್ವಾಸ ಮುಖ್ಯವಾಗಿದೆ. ತಮ್ಮ ಶಿಕ್ಷಣ, ಕೌಶಲ್ಯ ಮತ್ತು ಜ್ಞಾನದಲ್ಲಿ ನಂಬಿಕೆಯಿದ್ದರೆ ಯುವಕರಲ್ಲಿ ತಾನಾಗಿಯೇ ಆತ್ಮವಿಶ್ವಾಸ ಮೂಡುತ್ತದೆ ಎಂದು ಹೇಳಿದರು.

ಸೆಮಿನಾರ್ ಕಾರ್ಯಕ್ರಮವೊಂದರಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಪ್ರಧಾನ ಮಂತ್ರಿ, ಈ ವರ್ಷದ ಬಜೆಟ್ ನಲ್ಲಿ ಶಿಕ್ಷಣ, ಕೌಶಲ್ಯ, ಸಂಶೋಧನೆ ಮತ್ತು ಸೃಜನಾತ್ಮಕತೆಗೆ ಒತ್ತು ನೀಡಲಾಗಿದೆ ಎಂದ ಪ್ರಧಾನ ಮಂತ್ರಿ, ಹೊಸ ಶಿಕ್ಷಣ ನೀತಿಯಲ್ಲಿ ಭಾರತೀಯ ಭಾಷೆಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಪ್ರತಿಯೊಂದು ಭಾಷೆಗಳ ತಜ್ಞರು, ವಿಶ್ವದ ಪ್ರಮುಖ ಉತ್ತಮ ವಿಷಯಗಳು ಭಾರತೀಯ ಭಾಷೆಯಲ್ಲಿ ಜನರಿಗೆ ಸಿಗುವಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ ಎಂದರು. 

ಹೈಡ್ರೋಜನ್ ವಾಹನಗಳ ಪರೀಕ್ಷೆಯನ್ನು ಭಾರತ ಮಾಡಿದೆ. ಅದನ್ನು ಸಾರಿಗೆಯ ಇಂಧನವಾಗಿ ಬಳಕೆ ಮಾಡಲು ಉದ್ಯಮವನ್ನು ಸಿದ್ಧಗೊಳಿಸುವಂತೆ ನಾವು ಮಾಡಬೇಕು. ಇಂಧನವನ್ನು ಸ್ವಾವಲಂಬನೆ ಮಾಡುವ ನಿಟ್ಟಿನಲ್ಲಿ ಹಸಿರು ಇಂಧನವು ಮುಂದಿನ ದಿನಗಳಲ್ಲಿ ದೇಶಕ್ಕೆ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಈ ವರ್ಷದ ಬಜೆಟ್ ನಲ್ಲಿ ಘೋಷಿಸಿರುವ ಹೈಡ್ರೋಜನ್ ಮಿಷನ್ ಬಹುದೊಡ್ಡ ಕ್ರಾಂತಿಯಾಗಿದೆ ಎಂದು ಪ್ರಧಾನಿ ಹೇಳಿದರು.


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp