ದೇಶಿ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್‌ ಶೇ. 81 ರಷ್ಟು ಪರಿಣಾಮಕಾರಿ

ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಮೊದಲ ದೇಶಿ ಕೋವಿಡ್-19 ಲಸಿಕೆ ‘ಕೊವ್ಯಾಕ್ಸಿನ್‌’ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನ ಮಧ್ಯಂತರ...

Published: 03rd March 2021 08:29 PM  |   Last Updated: 03rd March 2021 08:29 PM   |  A+A-


Bharat Biotech's Covaxin vaccine

ಕೋವ್ಯಾಕ್ಸಿನ್

Posted By : Lingaraj Badiger
Source : The New Indian Express

ನವದೆಹಲಿ: ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಮೊದಲ ದೇಶಿ ಕೋವಿಡ್-19 ಲಸಿಕೆ ‘ಕೊವ್ಯಾಕ್ಸಿನ್‌’ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನ ಮಧ್ಯಂತರ ವಿಶ್ಲೇಷಣೆಯಲ್ಲಿ ಶೇ. 81 ರಷ್ಟು ಪರಿಣಾಮಕಾರಿತ್ವ ತೋರಿದೆ ಎಂದು ಭಾರತ್ ಬಯೋಟೆಕ್ ಕಂಪನಿ ತಿಳಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದಲ್ಲಿ ನಡೆಸಲಾದ ಕ್ಲಿನಿಕಲ್ ಟ್ರಯಲ್‌ನಲ್ಲಿ 25,800 ಮಂದಿ ಭಾಗವಹಿಸಿದ್ದರು. ಈ ಪೈಕಿ 43 ಮಂದಿಯಲ್ಲಿ ಕೋವಿಡ್–19 ಸೋಂಕು ದೃಢಪಟ್ಟಿತ್ತು. ಇದರ ಆಧಾರದಲ್ಲಿ ಮಧ್ಯಂತರ ವಿಶ್ಲೇಷಣೆ ಸಿದ್ಧಪಡಿಸಲಾಗಿದೆ. ಆದರೆ, ಕೋವಿಡ್ ದೃಢಪಟ್ಟ 43 ಮಂದಿಯ ಪೈಕಿ 36 ಜನರನ್ನು ಪ್ರಯೋಗಗಳಿಗಷ್ಟೇ ಬಳಸಿಕೊಳ್ಳಲಾಗಿತ್ತು. 7 ಮಂದಿ ಮಾತ್ರ ಲಸಿಕೆ ಪಡೆದಿದ್ದರು. ಇದರ ಆಧಾರದಲ್ಲಿ ಲಸಿಕೆ ಶೇ 80.6ರಷ್ಟು ಪರಿಣಾಮಕಾರಿ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ತಿಳಿಸಿದೆ.

ಕೊನೆಯ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುವುದಕ್ಕೂ ಮುನ್ನವೇ ಜನವರಿಯಲ್ಲಿ ಸರ್ಕಾರ ‘ಕೋವ್ಯಾಕ್ಸಿನ್‌’ ತುರ್ತು ಬಳಕೆಗೆ ಅನುಮತಿ ನೀಡಿತ್ತು.

ದೇಶದಾದ್ಯಂತ ಕೋವಿಡ್ ವಿರುದ್ಧ ಲಸಿಕೆ ನೀಡಿಕೆ ಅಭಿಯಾನ ಪ್ರಗತಿಯಲ್ಲಿದೆ. ಸೋಮವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಸಹ ‘ಕೊವ್ಯಾಕ್ಸಿನ್‌’ ಲಸಿಕೆ ಹಾಕಿಸಿಕೊಂಡಿದ್ದರು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp